ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಕ್ಕು ಆಧಾರಿತ ಅಭಿವೃದ್ಧಿಯ ಕಾಲ’

Last Updated 23 ಏಪ್ರಿಲ್ 2014, 19:41 IST
ಅಕ್ಷರ ಗಾತ್ರ

ಬೆಂಗಳೂರು: ‘ಹಕ್ಕು ಆಧಾರಿತ ಅಭಿ­ವೃದ್ಧಿಯಲ್ಲಿ ಸಾರ್ವಜನಿಕರು ಸಕ್ರಿಯ­ವಾಗಿ ಪಾಲ್ಗೊಳ್ಳುವಲ್ಲಿ ವಕೀಲರ ಪಾತ್ರ ಮಹತ್ವದ್ದು’ ಎಂದು ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ ಅಭಿಪ್ರಾಯಪಟ್ಟರು.

ಸಮಾನ ಮನಸ್ಕ ವಕೀಲರ ವೇದಿಕೆ ಮತ್ತು ಜಯ ಕರ್ನಾಟಕ ಸಂಘಟ­ನೆಯ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ‘ರಾಜ್ಯದ ಅಭಿವೃದ್ಧಿಗೆ ನ್ಯಾಯವಾದಿಗಳ ಪಾತ್ರ’ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಅವರು, ‘ಇದು ಹಕ್ಕು ಆಧಾರಿತ ಅಭಿವೃದ್ಧಿಯ ಕಾಲ. ಯಾವ ಪ್ರಜೆಯ ಹಕ್ಕಿಗೂ ಧಕ್ಕೆ ಬರದ ಹಾಗೆ ಅಭಿವೃದ್ಧಿ ಸಾಧಿಸಬೇಕು’ ಎಂದರು.

ರಾಜ್ಯ ವಕೀಲರ ಪರಿಷತ್ತಿನ ಉಪಾ­ಧ್ಯಕ್ಷ ರವೀಂದ್ರನಾಥ ರೈ ಮಾತನಾಡಿ, ‘ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪ­ಬೇಕು. ಯಾವ ವ್ಯಕ್ತಿಯೂ ಹಸಿವಿ­ನಿಂದ ಮಲಗದ ದಿನ ಮಾತ್ರ ಅಭಿ­ವೃದ್ಧಿ ಸಾಧ್ಯ’ ಎಂದರು. 

ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಬಿ.ಎನ್. ಜಗದೀಶ್, ‘ಸಾಮಾ­ಜಿಕ ಸೇವೆಗಾಗಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದರೂ ಕೆಲವು ಮಾಧ್ಯ­ಮ­­ಗಳು ನಮ್ಮನ್ನು ಕಡೆಗಣಿಸುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT