ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಲಸಿಗೆ ಸೂಕ್ತ ಮಾರುಕಟ್ಟೆ ಅಗತ್ಯ’

ಹಲಸಿನ ಹಬ್ಬದಲ್ಲಿ ಪ್ರಮೋದ್ ಮಧ್ವರಾಜ್ ಹೇಳಿಕೆ
Last Updated 2 ಜುಲೈ 2016, 4:54 IST
ಅಕ್ಷರ ಗಾತ್ರ

ಉಡುಪಿ: ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮೂಲಕ ಹಲಸಿನ ಹಣ್ಣಿಗೆ ಉತ್ತಮ ಬೆಲೆ ಸಿಗುವಂತೆ ನೋಡಿ  ಕೊಳ್ಳಬೇಕು ಎಂದು ಮೀನುಗಾರಿಕೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್‌ ಹೇಳಿದರು.

ಪರ್ಯಾಯ ಪೇಜಾವರ ಅಧೋ ಕ್ಷಜ ಮಠ, ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ, ಮಣಿಪಾಲ ವಿಶ್ವವಿದ್ಯಾಲಯದ ಸಾಮಾಜಿಕ ಉದ್ಯ ಮಶೀಲತಾ ಕೇಂದ್ರ, ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋ ಧನಾ ಕೇಂದ್ರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ರಾಜಾಂಗಣದಲ್ಲಿ ಏರ್ಪಡಿಸಿರುವ ಎರ ಡು ದಿನಗಳ ‘ಹಲಸಿನ ಹಬ್ಬ’ದ ಉದ್ಘಾ ಟನಾ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ಆರೋಗ್ಯವನ್ನು ವೃದ್ಧಿಸುವಂತಹ ಗುಣ ಹಲಸಿನಲ್ಲಿದೆ. ಮಳೆಗಾಲದಲ್ಲಿ ಹೇರಳವಾಗಿ ಫಸಲು ಬರುವುರಿಂದ ಬೆಲೆ ಕುಸಿತವಾಗಿ ಬೆಳೆಗಾರರು ನಷ್ಟ ಅನು ಭವಿಸುತ್ತಾರೆ. ಹಲಸನ್ನು ಸಂಸ್ಕರಿಸಿ ವರ್ಷ ದ ಎಲ್ಲ ದಿನಗಳಲ್ಲಿ ಸಿಗುವಂತೆ ನೋಡಿ ಕೊಳ್ಳಬೇಕು ಎಂದರು.

ಹಲಸಿನ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಮರ, ಗಿಡ, ಬಳ್ಳಿ ಹೂ ಹಾಗೂ ಹಣ್ಣು ಭಗವಂತನ ಅದ್ಭುತ ಕೊಡುಗೆಯಾಗಿದೆ. ಇದರಲ್ಲಿ ನಾವು ದೇವರ ಕೌಶಲವನ್ನು ಗುರುತಿಸಬಹುದು. ಹಲಸು ಅತ್ಯಂತ ಪರಿಮಳಯುಕ್ತ ಹಾಗೂ ರುಚಿಯಾದ ಹಣ್ಣಾಗಿದ್ದು ಇದನ್ನು ತಿಂದರೆ ಆರೋ ಗ್ಯಕ್ಕೂ ಒಳ್ಳೆಯದು. ಇಂತಹ ಹಣ್ಣಿನ ಬಗ್ಗೆ ಜನರಿಗೆ ಅದರಲ್ಲೂ ಮುಖ್ಯವಾಗಿ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಹಲಸಿನ ಹಣ್ಣಿನ ಮಹತ್ವ ಏನೆಂದು ಗ್ರಾಮೀಣ ಭಾಗದ ಜನರಿಗೆ ಚೆನ್ನಾಗಿ ಗೊತ್ತಿದೆ. ಆದರೆ ನಗರ ಪ್ರದೇಶದ ಜನರು ಹಾಗೂ ಯುವ ಜನರಿಗೆ ಈ ಬಗ್ಗೆ ಹೆಚ್ಚಿನ ತಿಳಿವಳಿಕೆ ಇಲ್ಲ. ಈ ಹಣ್ಣಿನ ಉಪಯೋಗದ ಬಗ್ಗೆ ಜನರಿಗೆ ತಿಳಿಸಿ ಕೊಡಬೇಕಿದೆ ಎಂದು ಪೇಜಾವರ ಮಠ ದ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಹೇಳಿ ದರು.

ಮಣಿಪಾಲ ವಿಶ್ವವಿದ್ಯಾಲಯದ ಕುಲ ಸಚಿವ ಡಾ. ನಾರಾಯಣ ಸಭಾಹಿತ್‌, ಉಡುಪಿಯ ಭಾರತೀಯ ವಿಕಾಸ ಟ್ರಸ್ಟ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಕೆ.ಎಂ. ಉಡುಪ, ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಎಂ.ಕೆ. ನಾಯಕ್‌, ಮಣಿಪಾಲ್‌ ವಿಶ್ವವಿದ್ಯಾಲಯ ದ ಸ್ಕೂಲ್ ಆಫ್‌ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಡಾ. ರವೀಂದ್ರ ನಾಯಕ್‌, ಸಾಮಾಜಿಕ ಉದ್ಯಮಶೀಲತಾ ಕೇಂದ್ರದ ಸಂಯೋಜಕ ಡಾ. ಹರೀಶ್‌ ಜೋಶಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ಜಿಲ್ಲಾ ನಿರ್ದೇಶಕ ಬಿ.ಕೆ.ಪುರು ಷೋತ್ತಮ, ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ವಿಸ್ತರಣಾ ಅಧಿಕಾರಿ ಡಾ. ಎಸ್‌.ಯು. ಪಾಟೀಲ್‌, ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ.ಬಿ. ಧನಂಜಯ ಉಪಸ್ಥಿತ ರಿದ್ದರು.

ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಎಂ.ಹನುಮಂತಪ್ಪ ಸ್ವಾಗತಿಸಿ ಪ್ರಾಸ್ತಾವಿ ಕವಾಗಿ ಮಾತನಾಡಿದರು.

***
ಹಲಸಿನ ಹಣ್ಣಿನಿಂದ ಹಲವು ಬಗೆಯ ಉಪಯೋಗವಿದೆ. ಇಂತಹ ಹಣ್ಣಿನ ಬಗ್ಗೆ ಮೇಳಗಳ ಮೂಲಕ ಜನರಿಗೆ ಮಾಹಿತಿ ನೀಡಬೇಕಾಗಿರುವುದು ವಿಷಾದಕರ
-ವಿಶ್ವಪ್ರಸನ್ನ ಸ್ವಾಮೀಜಿ, ಪೇಜಾವರ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT