ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹ್ಯಾಪಿ ಎಂಡಿಂಗ್’ಗೆ ಸೈಫ್ ಸೂಕ್ತ ಆಯ್ಕೆ

Last Updated 19 ನವೆಂಬರ್ 2014, 19:30 IST
ಅಕ್ಷರ ಗಾತ್ರ

‘‘ಪ್ರಣಯ, ಹಾಸ್ಯದಿಂದ ಕೂಡಿರುವ ‘ಹ್ಯಾಪಿ ಎಂಡಿಂಗ್‌’ ಚಿತ್ರಕ್ಕೆ ನಟ ಸೈಫ್‌ ಅಲಿಖಾನ್‌ ಸೂಕ್ತ ವ್ಯಕ್ತಿ’’ ಎಂದು ಚಿತ್ರದ ನಿರ್ದೇಶಕ ರಾಜ್‌ ನಿದಿಮೋರು ಹೇಳಿದ್ದಾರೆ. ಚಿತ್ರ ಇದೇ ಶುಕ್ರವಾರ ಬೆಳ್ಳಿ ತೆರೆಗೆ ಬರಲಿದೆ. ‘ಬಾಲಿವುಡ್‌ನಲ್ಲಿ ರೊಮ್ಯಾಂಟಿಕ್‌–ಕಾಮಿಡಿ ಚಿತ್ರಗಳು ಮೊದಲಿನಿಂದಲೂ ಭಾರಿ ಸದ್ದು ಮಾಡುತ್ತಿವೆ. ಇಂತಹ ಅನೇಕ ಚಿತ್ರಗಳಲ್ಲಿ ಸೈಫ್‌ ಅಲಿ ಖಾನ್‌ ಬಣ್ಣ ಹಚ್ಚಿದ್ದಾರೆ. ಇದೇ ಹ್ಯಾಪಿ ಎಂಡಿಂಗ್‌ ಚಿತ್ರಕ್ಕೆ ವರದಾನವಾಗಲಿದೆ’ ಎಂದಿದ್ದಾರೆ.

‘ಪ್ರೀತಿ ಪ್ರೇಮಕ್ಕೆ ಸಂಬಂಧಿಸಿದ ಅನೇಕ ಚಿತ್ರಗಳಲ್ಲಿ ಸೈಫ್‌ ಕೆಲಸ ಮಾಡಿದ್ದಾರೆ. ಹೀಗಾಗಿ ಈ ಚಿತ್ರಕ್ಕೆ ಅವರೇ ಸೂಕ್ತ ಎಂದು ಪರಿಗಣಿಸಿ ಆಯ್ಕೆ ಮಾಡಲಾಗಿದೆ. ಸಿನಿಮಾದಲ್ಲಿ ಅವರು ಬರಹಗಾರನ ಪಾತ್ರ ನಿರ್ವಹಿಸಿದ್ದಾರೆ. ಇಂತಹ ಪಾತ್ರಗಳನ್ನು ಅವರು ಇಷ್ಟಪಡುವುದಿಲ್ಲ. ಆದರೆ, ಅವರನ್ನೇ ಗಮನದಲ್ಲಿಟ್ಟುಕೊಂಡು ಕಥೆ ಹೆಣೆಯಲಾಗಿದೆ’ ಎಂದು ರಾಜ್‌ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ರಾಜ್‌ ಮತ್ತು ಅವರ ಸಹವರ್ತಿ ಕೃಷ್ಣ ಡಿ.ಕೆ. ಅವರ ನಿರ್ದೇಶನದಲ್ಲಿ ಮೂಡಿಬಂದ ‘೯೯’, ‘ಶೋರ್‌ ಇನ್‌ ದಿ ಸಿಟಿ’ ಮತ್ತು ‘ಗೋ ಗೋವಾ ಗಾನ್‌’ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

‘ನಮ್ಮ ಆಲೋಚನೆ ಕ್ರಮದ ನಡುವೆ ಬಹಳ ಸಾಮ್ಯತೆ ಇದೆ. ಸೈಫ್‌ ಅಲಿ ಖಾನ್‌ ಒಂದು ಪಾತ್ರದ ಆಳಕ್ಕೆ ಇಳಿಯುತ್ತಾರೆ. ಯಾವುದಕ್ಕೂ ಅವರು ಒಲ್ಲೆ ಎನ್ನುವುದಿಲ್ಲ. ಸದಾ ಉತ್ಸಾಹದಿಂದ ಕೆಲಸ ಮಾಡುತ್ತಾರೆ’ ಎಂದು ರಾಜ್‌ ಹಾಡಿ ಹೊಗಳಿದ್ದಾರೆ.

‘‘ರೊಮ್ಯಾಂಟಿಕ್‌ ಕಾಮಿಡಿಯನ್ನು ಬಹಳ ಲಘು ಧಾಟಿಯಲ್ಲಿ ತೋರಿಸಲು ಪ್ರಯತ್ನ ಮಾಡಿದ್ದೇನೆ. ಮಧ್ಯಾಂತರದ ವೇಳೆಗೆ ಎಲ್ಲ ಅಂಶಗಳನ್ನು ಕಟ್ಟಿಕೊಟ್ಟಿದ್ದೇವೆ. ಆದರೆ ಎಲ್ಲ ಚಿತ್ರಗಳಂತೆ ಈ ಚಿತ್ರದ ಕೊನೆ ಯಾವ ರೀತಿಯಲ್ಲಿ ಆಗುತ್ತದೆ ಎಂಬುದೇ ಮುಖ್ಯ. ಅದು ‘ಹ್ಯಾಪಿ ಎಂಡಿಂಗ್‌’ನಲ್ಲಿ ಮುಕ್ತಾಯ ಕಾಣಬಹುದು’ ಅಥವಾ ದುಃಖದ ಸನ್ನಿವೇಶದೊಂದಿಗೆ ಕೊನೆಗೊಳ್ಳಬಹುದು’’ ಎಂದಿದ್ದಾರೆ.
ಚಿತ್ರದಲ್ಲಿ ಸೈಫ್‌ ಅವರ ಪತ್ನಿ ಕರೀನಾ ಕಪೂರ್‌ ಮತ್ತು ಗುಳಿಕೆನ್ನೆಯ ನಟಿ ಪ್ರೀತಿ ಜಿಂಟಾ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ ಎಂದು ಹೇಳಿದ್ದಾರೆ.

‘ಇಬ್ಬರು ಖ್ಯಾತ ನಟಿಯರು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ಒಪ್ಪಿದ್ದು ಅವರ ದೊಡ್ಡತನ. ಅವರ ಬಗ್ಗೆ ಅವರಿಗೆ ಎಷ್ಟು ನಂಬಿಕೆ ಇದೆ ಎಂಬುದನ್ನು ಇದು ತೋರಿಸುತ್ತದೆ. ಇಬ್ಬರೂ ಅವರವರ ಪಾತ್ರಗಳಿಗೆ ಮೆಚ್ಚುಗೆ ಸೂಚಿಸಿದ್ದು ನನಗೆ ಬಹಳ ಖುಷಿ ನೀಡಿದೆ. ಕರೀನಾ ಮತ್ತು ಪ್ರೀತಿ ಅವರಿಂದ ಚಿತ್ರಕ್ಕೆ ಮತ್ತಷ್ಟು ಮೆರಗು ಬಂದಿದೆ. ನಿಜ ಜೀವನದಲ್ಲಿ ಒಂದಾಗಿರುವ ಎರಡು ಜೋಡಿಗಳು ಬೇರೆಯಾಗುವ ದೃಶ್ಯವನ್ನು ಪರದೆ ಮೇಲೆ ನೋಡುವುದೇ ವಿಶೇಷ’ ಎಂದೂ ತಿಳಿಸಿದ್ದಾರೆ.

‘ಇನ್ನೊಂದು ಅತಿಥಿ ಪಾತ್ರಕ್ಕೆ ಬೇರೊಬ್ಬ ನಟನನ್ನು ಹಾಕಿಕೊಂಡು ಚಿತ್ರ ಮಾಡುವ ಉದ್ದೇಶವಿತ್ತು. ಆದರೆ, ಕೊನೆಗೆ ಸೈಫ್‌ ಅವರನ್ನೇ ಹಾಕಿಕೊಂಡು ಅದನ್ನು ಮಾಡಿದ್ದೇನೆ. ಯೋಗಿ ಪಾತ್ರದಲ್ಲಿ ಅವರು ಬಹಳ ಉಲ್ಲಾಸದಿಂದ ಕಾಣಿಸಿಕೊಂಡರೆ, ಯುಡಿ ಪಾತ್ರ ಅದಕ್ಕೆ ಸಂಪೂರ್ಣವಾಗಿ ತದ್ವಿರುದ್ಧವಾಗಿದೆ’ ಎಂದು ರಾಜ್‌ ನಿದಿಮೋರು ವಿವರಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT