ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₨ 3,674 ಕೋಟಿ ಮೌಲ್ಯದ ಬೆಳೆನಾಶ

Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಶ್ರೀನಗರ (ಪಿಟಿಐ): ಭೀಕರ ಪ್ರವಾಹದಿಂದ ತತ್ತರಿಸಿರುವ ಲಡಾಖ್‌  ಸೇರಿದಂತೆ ಜಮ್ಮು ಕಾಶ್ಮೀರ­ದಲ್ಲಿ  ಸುಮಾರು 3 ಲಕ್ಷ ಹೆಕ್ಟೇರ್‌ ಪ್ರದೇಶ­ದಲ್ಲಿ ಬೆಳೆದ ಬೆಳೆಗಳು ಪ್ರವಾಹಕ್ಕೆ ತುತ್ತಾಗಿ, ಇದರಿಂದ  ₨ 3,674 ಕೋಟಿ ನಷ್ಟ ಉಂಟಾಗಿದೆ ಎಂದು  ಕೃಷಿ ಇಲಾಖೆ ಮಾಹಿತಿ ನೀಡಿದೆ.

ಜಮ್ಮ–ಕಾಶ್ಮೀರ ಕೃಷಿ ಇಲಾಖೆ ಪ್ರವಾಹ ಪೀಡಿತ ಪ್ರದೇಶ­ದಲ್ಲಿ ಬೆಳೆಹಾನಿ ಕುರಿತು ಪರಿಶೀಲನೆ ನಡೆಸಿದೆ. ಪುಲ್ವಮ ಜಿಲ್ಲೆ­ಯಲ್ಲಿ ಹೆಚ್ಚು ಬೆಳೆಹಾನಿ ಸಂಭವಿಸಿದ್ದು,  ಸುಮಾರು ₨1,104 ಕೋಟಿ ನಷ್ಟವುಂಟಾಗಿದೆ ಎನ್ನಲಾಗಿದೆ.

ಸೇನಾನೆಲೆಗಳು  ನಾಶ: ಶಿಬಿರಗಳು, ಬಂಕರು­ಗಳು ಸೇರಿ­ದಂತೆ 70 ಸೇನಾ ನೆಲೆ­ಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಆದರೆ ಭದ್ರತಾ ಪಡೆ ಬೇರೆ ಸ್ಥಳ­ಗಳಿಗೆ ತಮ್ಮ ಸೇನಾ ಶಿಬಿರಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. 

ಸೇನಾನೆಲೆಗಳು ಭಾಗಶಃ ಅಥವಾ ಸಂಪೂರ್ಣ­ವಾಗಿ ನೀರಿನಲ್ಲಿ ಮುಳುಗಡೆ­ಯಾ­ಗಿತ್ತು. ಆದರೆ ರಕ್ಷಣಾ ಕಾರ್ಯಾ­ಚರಣೆ­­ಯಲ್ಲಿ ತೊಡಗಿದ್ದ ಸಿಬ್ಬಂದಿ ಎಲ್ಲ ಸೇನಾ ಪಡೆಯವರನ್ನು ರಕ್ಷಿಸಿ­ದ್ದಾರೆ.

‘ಗಡಿ ನಿಯಂತ್ರಣ ರೇಖೆ ಸೇರಿದಂತೆ ಕಾಶ್ಮೀರ ಕಣಿವೆ­ಯಲ್ಲಿ­ರುವ 30–40 ಸೇನಾ ಶಿಬಿರ, ನೆಲೆ ಹಾಗೂ ಬಂಕರು­ಗಳು ಪ್ರವಾಹದಿಂದ ಹಾನಿಗೊಳ­ಗಾಗಿವೆ. 10–15 ಬಂಕರುಗಳು ನೀರಿನಲ್ಲಿ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ’ ಎಂದು ಹಿರಿಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT