ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 300 ಕೊಟ್ಟು ಅಂಚೆ ಚೀಟಿಯಲ್ಲಿ ಫೋಟೊ ಹಾಕಿಸಿಕೊಳ್ಳಿ !

Last Updated 30 ಜೂನ್ 2016, 8:27 IST
ಅಕ್ಷರ ಗಾತ್ರ

ನವದೆಹಲಿ: ಅಂಚೆ ಇಲಾಖೆಯು ಇನ್ನು ಮುಂದೆ ಅಂಚೆ ಚೀಟಿಗಳಲ್ಲಿ ಸಾರ್ವಜನಿಕರ ಆಯ್ಕೆಯ ವೈಯಕ್ತಿಕ ಚಿತ್ರಗಳ ಮುದ್ರಿಸಿಕೊಡಲು ನಿರ್ಧರಿಸಿದೆ.

ಜನರಿಗೆ ಮತ್ತಷ್ಟು ಹತ್ತಿರವಾಗಲು  ಅಂಚೆ ಇಲಾಖೆಯು ಈ ನೂತನ ಯೋಜನೆಯನ್ನು ರೂಪಿಸಿದೆ. ಇದರಿಂದ ಇಲಾಖೆಯ ಆದಾಯವು ಹೆಚ್ಚಳವಾಗಲಿದೆ ಎಂದು ಅಂಚೆ ಇಲಾಖೆಯ ಕಾರ್ಯದರ್ಶಿ ಎಸ್‌.ಕೆ ಸಿನ್ಹಾ ತಿಳಿಸಿದ್ದಾರೆ.

* ₹ 300 ರೂಪಾಯಿ ಕೊಟ್ರೆ  ಭಾವ ಚಿತ್ರ!
ಗ್ರಾಹಕರು ಅಂಚೆ ಕಚೇರಿಗೆ ತೆರಳಿ 300 ರೂಪಾಯಿ ನೀಡಿದರೆ, ಇಲಾಖೆಯ ಸಿಬ್ಬಂದಿಗಳು ಕೆಲವೇ ನಿಮಿಷಗಳಲ್ಲಿ  ಜನರ ಆಯ್ಕೆಯ ಭಾವ ಚಿತ್ರಗಳನ್ನು ಅಂಚೆ ಚೀಟಿಯಲ್ಲಿ ಮುದ್ರಿಸಿಕೊಡುತ್ತಾರೆ. ಒಟ್ಟು 12 ಅಂಚೆ ಚೀಟಿಗಳನ್ನು ಮುದ್ರಿಸಿಕೊಡಲಾಗುವುದು.

* ಯಾವ ಫೋಟೊಗಳನ್ನು ಮುದ್ರಿಸಲು ಅವಕಾಶವಿದೆ?
ವಧು, ವರರ ಭಾವಚಿತ್ರಗಳು, ಹುಟ್ಟು ಹಬ್ಬದ ಚಿತ್ರಗಳು, ಸಭೆ, ಸಮಾರಂಭಗಳು, ಸ್ಮಾರಕಗಳು, ಧಾರ್ಮಿಕ ಕೇಂದ್ರಗಳ ಚಿತ್ರಗಳನ್ನು ಮುದ್ರಿಸಬಹುದು.

* ಫೋಟೊ ಮುದ್ರಿಸಲು ಇಲಾಖೆಗೆ ನೀಡಬೇಕಾದ ದಾಖಲೆಗಳೇನು?
ಆಧಾರ್‌ ಕಾರ್ಡ್‌, ಗುರುತಿನ ಚೀಟಿ , ಕಾಯಂ ವಿಳಾಸದ ದಾಖಲೆ ಪತ್ರಗಳನ್ನು ನೀಡಬೇಕು. ಆನ್‌ಲೈನ್‌ ಅಥವಾ ಆಫ್‌ಲೈನ್‌ನಲ್ಲೂ ಫೋಟೊಗಳನ್ನು ಕಳುಹಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT