ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 5.81 ಕೋಟಿ ಸಾಲ ವಿತರಣೆ

ಅಲ್ಪಸಂಖ್ಯಾತ ನಿಗಮದಿಂದ 2,687 ಜನರಿಗೆ ಸೌಲಭ್ಯ
Last Updated 25 ನವೆಂಬರ್ 2015, 4:45 IST
ಅಕ್ಷರ ಗಾತ್ರ

ಪಡುಬಿದ್ರಿ: ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮುಸ್ಲಿಂ, ಕ್ರಿಶ್ಚಿಯನ್, ಜೈನ ಸಮು ದಾಯದ ಒಟ್ಟು 2,687 ಫಲಾನುಭವಿ ಗಳಿಗೆ ಅಕ್ಟೋಬರ್ ಅಂತ್ಯದವರೆಗೆ ವಿವಿಧ ಯೋಜನೆಗಳಡಿಯಲ್ಲಿ ₹ 5.81 ಸಾಲ ವಿತರಿಸಿದೆ.

ಜಿಲ್ಲೆಯ ಇತಿಹಾಸದಲ್ಲೇ ಅಲ್ಪಸಂಖ್ಯಾತ ವರ್ಗದ ಜನರಿಗೆ ಬೃಹತ್ ಪ್ರಮಾಣದ ಸೌಲಭ್ಯಗಳನ್ನು ವಿತರಿಸಲು ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಸೂದ್ ಪೌಝ್ದಾರ್, ಆಡಳಿತ ನಿರ್ದೇಶಕ ಮೊಹಮ್ಮದ್ ಸಲೀಂ, ಉಡುಪಿ ಜಿಲ್ಲಾ ವ್ಯವಸ್ಥಾಪಕ ಶ್ರೀಧರ ಭಂಡಾರಿ ಹಾಗೂ ಜಿಲ್ಲೆಯ ಶಾಸಕರಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗದ ಅಧ್ಯಕ್ಷರಾದ ಎಂ.ಪಿ. ಮೊದಿನಬ್ಬ ಕೃತಜ್ಞತೆ ಸಲ್ಲಿಸಿದ್ದಾರೆ.

ಸ್ವಾವಲಂಬನಾ ಯೋಜನೆಯಡಿ ಯಲ್ಲಿ ಮುಸ್ಲಿಂ ಸಮುದಾಯದ 34 ಫಲಾನುಭವಿಗಳಿಗೆ ₹ 8.63 ಲಕ್ಷ, ಕ್ರಿಶ್ಚಿಯನ್ ಸಮುದಾಯದ 2 ಫಲಾನು ಭವಿಗಳಿಗೆ ₹ 50 ಸಾವಿರ, ಶ್ರಮಶಕ್ತಿ ಯೋಜನೆಯಡಿಯಲ್ಲಿ ಮುಸ್ಲಿಂ ಸಮಾಜದ 266 ಫಲಾನುಭವಿಗಳಿಗೆ ₹ 53.20 ಲಕ್ಷ, ಕ್ರಿಶ್ಚಿಯನ್ ಸಮುದಾಯದ 329 ಫಲಾನುಭವಿಗಳಿಗೆ ₹ 82.25 ಲಕ್ಷ, ಜೈನ್ ಸಮುದಾಯದ 15 ಫಲಾನು ಭವಿಗಳಿಗೆ ₹ 3 ಲಕ್ಷ, ಕಿರು ಸಾಲ ಯೋಜನೆಯಡಿ ಮುಸ್ಲಿಂ ಸಮು ದಾಯದ 632 ಫಲಾನುಭವಿಗಳಿಗೆ ₹ 63.20 ಲಕ್ಷ, ಕ್ರಿಶ್ಚಿಯನ್ ಸಮುದಾಯದ 558 ಫಲಾನುಭವಿಗಳಿಗೆ ₹ 55.80 ಲಕ್ಷ, ಜೈನ್ ಸಮುದಾಯದ 193 ಫಲಾನುಭವಿಗಳಿಗೆ ₹ 19.30 ಲಕ್ಷ ಸಾಲ ನೀಡಲಾಗಿದೆ.

ಅರಿವು ಯೋಜನೆಯಡಿ ಮುಸ್ಲಿಂ ಸಮುದಾಯದ 194 ಫಲಾನು ಭವಿಗಳಿಗೆ ₹ 82.34 ಲಕ್ಷ, ಕ್ರಿಶ್ಚಿಯನ್ ಸಮುದಾಯದ 251 ಫಲಾನು ಭವಿಗಳಿಗೆ ₹ 97.32 ಲಕ್ಷ, ಜೈನ್ಸ್ ಸಮುದಾಯದ 21 ಫಲಾನುಭವಿಗಳಿಗೆ ₹ 4.90 ಲಕ್ಷ, ಗಂಗಾಕಲ್ಯಾಣ ಯೋಜನೆ ಯಡಿ ಮುಸ್ಲಿಂ ಸಮುದಾಯದ 2 ಫಲಾನುಭವಿಗಳಿಗೆ ₹ 3 ಲಕ್ಷ, ಕ್ರಿಶ್ಚಿಯನ್ ಸಮುದಾಯದ 11 ಫಲಾನುಭವಿಗಳಿಗೆ ₹ 16.50 ಲಕ್ಷ, ಜೈನ್ ಸಮುದಾಯದ 8 ಫಲಾನುಭವಿಗಳಿಗೆ ₹ 12 ಲಕ್ಷ,  ಗೃಹಸಾಲದ ಮೇಲಿನ ಬಡ್ಡಿ ರಿಯಾಯಿತಿ ಸಹಾಯಧನ ಯೋಜನೆಯಡಿ ಮುಸ್ಲಿಂ ಸಮುದಾಯದ 147 ಫಲಾನುಭವಿಗಳಿಗೆ ₹ 67.93 ಲಕ್ಷ, ಕ್ರಿಶ್ಚಿಯನ್ ಸಮುದಾಯದ 10 ಫಲಾನುಭವಿಗಳಿಗೆ ₹ 5.83 ಲಕ್ಷ, ಜೈನ ಸಮುದಾಯದ 14 ಫಲಾನುಭವಿಗಳಿಗೆ ₹ 6.22 ಲಕ್ಷ ರೂ.ಗಳ ಸೌಲಭ್ಯಗಳನ್ನು ವಿತರಿಸಲಾಗಿದೆ ಎಂದು ಮೊದಿನಬ್ಬ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT