ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹3,284ಕ್ಕೆ ಕೊಸ್ರೆ ದ್ವೀಪದ ರೆಸಾರ್ಟ್‌ ಮಾರಾಟ

Last Updated 28 ಜುಲೈ 2016, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್‌ (ಪಿಟಿಐ): ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು, ಬಹು ಕೋಟಿ ಬೆಲೆಬಾಳುವ ಕೊಸ್ರೆ ದ್ವೀಪದ ರೆಸಾರ್ಟ್‌ ಅನ್ನು ಕೇವಲ ₹ 3,284ಕ್ಕೆ (49 ಅಮೆರಿಕನ್‌ ಡಾಲರ್‌) ತನ್ನದಾಗಿಸಿಕೊಳ್ಳುವ ಮೂಲಕ ಅದೃಷ್ಟಶಾಲಿ ಎನಿಸಿದ್ದಾರೆ.

ಹೊಸ ದಕ್ಷಿಣ ವೇಲ್ಸ್‌ನ ಜೋಷುವಾ ಎನ್ನುವವರು, 16 ಕೊಠಡಿಗಳಿರುವ ‘ದಿ ಕೊಸ್ರೆ ನಾಟಿಲಸ್‌ ರೆಸಾರ್ಟ್‌’ ಅನ್ನು ಲಾಟರಿ ಮೂಲಕ ಪಡೆದುಕೊಂಡಿದ್ದಾರೆ.
ಕೊಸ್ರೆ ದ್ವೀಪವು ದಟ್ಟ ಅರಣ್ಯ, ಗುಹೆಗಳು ಮತ್ತು ಹವಳದ ದಿಬ್ಬಗಳಿಂದ ಸಂಪದ್ಭರಿತವಾಗಿದೆ.

ಇಲ್ಲಿರುವ ರೆಸಾರ್ಟ್‌ ಮಾಲೀಕರಾದ ಆಸ್ಟ್ರೇಲಿಯಾ ದಂಪತಿ ತಮ್ಮ ಅಜ್ಜ–ಅಜ್ಜಿಯೊಂದಿಗೆ ನೆಲೆಸುವ ಉದ್ದೇಶದಿಂದ ಮಾರಾಟ ಮಾಡಲು ನಿರ್ಧರಿಸಿದ್ದರು.
ಇದಕ್ಕಾಗಿ ಒಟ್ಟು 75,485 ಲಾಟರಿ ಟಿಕೆಟ್‌ಗಳನ್ನು 150 ದೇಶಗಳಲ್ಲಿ ಮಾರಾಟ ಮಾಡಲಾಗಿತ್ತು. ಪ್ರತಿ ಟಿಕೆಟ್‌ಗೆ ₹ 3,284 ದರ   ನಿಗದಿಪಡಿಸಲಾಗಿತ್ತು.
ದಂಪತಿಯ ಕನಸಿನ ‘ದಿ ಕೊಸ್ರೆ ನಾಟಿಲಸ್‌ ರೆಸಾರ್ಟ್‌’ನ್ನು ಎರಡು ದಶಕಗಳ ಹಿಂದೆ ನಿರ್ಮಿಸಲಾಗಿತ್ತು.

ದ್ವೀಪದೊಂದಿಗೆ ಭಾವನಾತ್ಮಕವಾಗಿ ಬೆರೆತುಹೋಗಿದ್ದ ದಂಪತಿ, ವ್ಯಕ್ತಿಗಳಿಗಿಂತಲೂ ಅಲ್ಲಿನ ಪರಿಸರವನ್ನು ಬಹುವಾಗಿ ಗೌರವಿಸುತ್ತಿದ್ದರು.
ಇಂತಹ ಅದ್ಭುತ ಅವಕಾಶ ಕಲ್ಪಿಸಿದ ದಂಪತಿ ಮತ್ತು ಅವರ ಕುಟುಂಬದ ಎಲ್ಲ ಸದಸ್ಯರಿಗೆ ಜೋಷುವಾ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
‘ರೆಸಾರ್ಟ್‌ನ್ನು ಉದ್ಘಾಟಿಸಲು ನಾನು ಕಾತುರನಾಗಿದ್ದೇನೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ದ್ವೀಪವು ಬ್ರಿಸ್‌ಬೇನ್‌ನಿಂದ 3800 ಕಿ.ಮೀ ದೂರದಲ್ಲಿದ್ದು, ಸರ್ಫಿಂಗ್‌ಗೆ ಹೆಸರುವಾಸಿಯಾಗಿದೆ. ಅಲ್ಲದೇ ಎರಡನೇ ಜಾಗತಿಕ ಯುದ್ಧದಲ್ಲಿ ಮಡಿದವರ ಸ್ಮಾರಕಗಳೂ ಅಲ್ಲಿ ಇವೆ.

ರೆಸಾರ್ಟ್‌ ಸಾಲಮುಕ್ತವಾಗಿದ್ದು, ನಿರ್ವಹಣೆಗೆ ಅಗತ್ಯ ಸಿಬ್ಬಂದಿ ಈಗಾಗಲೇ ಇರುವುದರಿಂದ ಜೋಷುವಾ ಅವರಿಗೆ ಲಾಭದಾಯಕವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT