ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1.14 ಲಕ್ಷ ‘ಮಕ್ಕಳು’ ವಿವಾಹಿತರು!

Last Updated 28 ಆಗಸ್ಟ್ 2015, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 1,14,206 ಮಕ್ಕಳು (14 ವರ್ಷದೊಳಗಿನವರು) ವಿವಾಹಿತರು.  1,164 ಮಂದಿ ಬಾಲ ವಿಧುರರು, 2,911  ಮಂದಿ ಬಾಲವಿಧವೆಯರು!

ಜನಗಣತಿ ನಿರ್ದೇಶನಾಲಯವು ಬಿಡುಗಡೆ ಮಾಡಿರುವ 2011ರ ಜನಗಣತಿ ಅಂಕಿಅಂಶಗಳಲ್ಲಿ ಈ ವಿಚಾರ ಬಹಿರಂಗವಾಗಿದೆ.

ಅಂಕಿಅಂಶಗಳ ಪ್ರಕಾರ, ಬಾಲ್ಯ ವಿವಾಹಕ್ಕೆ ಒಳಗಾದ 2,111 ಬಾಲಕರು ಹಾಗೂ 2,209 ಬಾಲಕಿಯರು ಪ್ರತ್ಯೇಕವಾಗಿ ಜೀವಿಸುತ್ತಿದ್ದಾರೆ.  204 ಬಾಲಕರ ಮತ್ತು   237 ಬಾಲಕಿಯರ ಮದುವೆ ಮುರಿದು ಬಿದ್ದಿದೆ.

ದೇಶದಲ್ಲಿ ಹುಡುಗರು ಮದುವೆಯಾಗುವುದಕ್ಕೆ 21 ವರ್ಷ ಆಗಬೇಕೆಂಬ ನಿಯಮ ಇದೆ. ಆದರೆ ರಾಜ್ಯದಲ್ಲಿ 19 ವರ್ಷದೊಳಗಿನ 1,30,638 ಹುಡುಗರು ವಿವಾಹ ಆಗಿದ್ದಾರೆ.  ಈ ಪೈಕಿ 3,046 ಮಂದಿ ವಿಧುರರಾಗಿದ್ದಾರೆ. 4,316 ಮಂದಿ  ಪ್ರತ್ಯೇಕವಾಗಿ ಜೀವಿಸುತ್ತಿದ್ದಾರೆ. 456 ಮಂದಿ ಮದುವೆ ಮುರಿದು ಬಿದ್ದಿದೆ.

ಬಾಲ್ಯ ವೈಧವ್ಯ:  ರಾಜ್ಯದಲ್ಲಿ 9,735 ಹುಡುಗಿಯರು 19 ವರ್ಷ ತುಂಬುವ ಮುನ್ನವೇ ವಿಧವೆಯರಾಗಿದ್ದಾರೆ.   6,105 ಮಂದಿ ಪತಿಯಿಂದ ಬೇರ್ಪಟ್ಟು ಬದುಕುತ್ತಿದ್ದಾರೆ. 818 ಮಂದಿ ಮದುವೆ ಮುರಿದು ಬಿದ್ದಿದೆ. ಬಾಲ್ಯ ವಿವಾಹದ ಪ್ರಮಾಣ ಹೆಚ್ಚು ಇರುವುದು (ಶೇಕಡಾ 58.25) ಗ್ರಾಮೀಣ ಪ್ರದೇಶದಲ್ಲೆ. ‌ಅತಿ ಹೆಚ್ಚು ಸಂಖ್ಯೆ ಬಾಲ್ಯ ವಿವಾಹ ನಡೆದಿರುವುದು ಬೆಂಗಳೂರು ನಗರ ಜಿಲ್ಲೆಯಲ್ಲಿ. ಈ ಸಂಖ್ಯೆ ಅತಿ ಕಡಿಮೆ ಇರುವುದು ರಾಮನಗರ ಜಿಲ್ಲೆಯಲ್ಲಿ.

ಪುರುಷರೇ ಹೆಚ್ಚು ಅವಿವಾಹಿತರು: ರಾಜ್ಯದಲ್ಲಿ ಅವಿವಾಹಿತ ಮಹಿಳೆಯರಿಗಿಂತ ಅವಿವಾಹಿತ ಪುರುಷರ ಪ್ರಮಾಣವೇ ಹೆಚ್ಚು ಇದೆ. ಆದರೆ ವಿಧುರರಿಗಿಂತ ವಿಧವೆಯರ ಸಂಖ್ಯೆ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT