ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12ರ ಬಾಲಕಿ ಈಗ ತಾಯಿ!

Last Updated 17 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): ಹನ್ನೆರಡು ವರ್ಷದ ಬಾಲಕಿ ಹಾಗೂ ಆಕೆಯ ಹದಿಮೂರು ವರ್ಷದ ಪ್ರಿಯಕರ ಈಗ ಬ್ರಿಟನ್‌ನ ಅತ್ಯಂತ ಕಿರಿಯ ಪಾಲಕರು ಎಂಬ ದಾಖಲೆ ಬರೆದಿದ್ದಾರೆ.

ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಈ ಇಬ್ಬರೂ,  ಈಗ  ಹೆಣ್ಣು ಮಗುವೊಂದಕ್ಕೆ ಜನ್ಮ ನೀಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

ಉತ್ತರ ಲಂಡನ್‌ ನಿವಾಸಿಗಳಾದ ಈ  ಜೋಡಿಗೆ ಕಳೆದ ವಾರ ಮಗು ಜನಿಸಿದೆ. ಬಾಲಕಿ ಆರೋಗ್ಯ­ವಾಗಿದ್ದಾಳೆ.
ಈ ಪೋಷಕರ ಚಿತ್ರಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದೆ  ಎಂದು ‘ದಿ ಮಿರರ್’ ಪತ್ರಿಕೆ ವರದಿ ಮಾಡಿದೆ.

‘ಆಕೆಯ ತಾಯಿ ಇಂಗ್ಲೆಂಡ್‌ನ ಕಿರಿಯ ಅಜ್ಜಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು,  ಕಿರಿಯ ದಂಪತಿಯ ಪೋಷಕರು ಹಾಗೂ ಕುಟುಂಬ ಸದಸ್ಯರು ಈ ಘಟನೆಯನ್ನು ಸಮರ್ಥಿಸಿಕೊಂಡು ಪ್ರೋತ್ಸಾಹಿಸಿ­ದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಕಾನೂನಿನ ಕಾರಣದಿಂದಾಗಿ ಬಾಲಕಿ ಹೆಸರನ್ನು ಬಹಿರಂಗಪಡಿಸಿಲ್ಲ. ಈ ಹಿಂದೆ ಬ್ರಿಟನ್‌ನ ಅತಿ ಕಿರಿಯ ತಾಯಿಯಾಗಿದ್ದ ಟ್ರೆಸಾ ಮಿಡ್ಲಟನ್‌ಗಿಂತ  ಈಕೆ ಐದು ತಿಂಗಳು ಕಿರಿಯಳು.

ಎಡಿನ್‌ಬರೊದ ಟ್ರೆಸಾ ೨೦೦೬ರಲ್ಲಿ ಕೇವಲ ೧೨ ವರ್ಷ ೮  ತಿಂಗಳು ಆಗಿದ್ದಾಗಲೇ ಮಗುವಿಗೆ ಜನ್ಮ ನೀಡಿದ್ದಳು.  
ಪೆರುವಿನ ಲೀನಾ ಮೆಡಿನಾ ೧೯೩೯­ರಲ್ಲೇ ವಿಶ್ವದ ಅತಿ ಕಿರಿಯ ತಾಯಿ ಎಂಬ ದಾಖಲೆ ಬರೆದಿದ್ದು, ಐದು ವರ್ಷ ಏಳು ತಿಂಗಳು ಆಗಿದ್ದಾಗ ಮಗುವಿಗೆ ಜನ್ಮ ನೀಡಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT