ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13ರ ಬಾಲಕ ಕಾದಂಬರಿಕಾರ

Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇಲ್ಲಿಯ ಸೇಂಟ್‌ ಮೇರಿಸ್ ಶಾಲೆಯ ಒಂಬ­ತ್ತನೇ ತರಗತಿ ವಿದ್ಯಾರ್ಥಿ ಯಶ­ವರ್ಧನ್ ಶುಕ್ಲಾ 13ನೇ ವರ್ಷ­­­ದಲ್ಲಿಯೇ ಕಾದಂಬರಿ ಬರೆದ ಶ್ರೇಯಕ್ಕೆ ಪಾತ್ರನಾಗಿ­ದ್ದಾನೆ.

ರಾಕ್ಷಸರ ದಾಳಿಯಿಂದ ತನ್ನ ಎಲ್ಲ ಕುಟುಂ­ಬದ ಸದಸ್ಯರನ್ನು ಕಳೆದುಕೊಂಡು ಆಕ­ಸ್ಮಿಕ­ವಾಗಿ ದಕ್ಷಿಣ ಧ್ರುವಕ್ಕೆ ಬಂದಿಳಿ­ಯುವ ಡೇವಿಡ್‌ ಎಂಬ ಶಾಲಾ ಬಾಲಕ ದೇವರು ಮತ್ತು ರಾಕ್ಷಸ­ರೊಂ­­ದಿಗೆ ಮುಖಾ­­ಮುಖಿ­ಯಾಗುವ ಕಥೆ­ಯನ್ನು ಯಶ­ವರ್ಧ­ನ್‌ನ ‘ಗಾಡ್ಸ್‌ ಆಫ್‌ ಅಂಟಾ­ರ್ಟಿಕ’ ಕಾದಂಬರಿ ಒಳಗೊಂಡಿದೆ. ಮೊದಲ ಕಾದಂಬರಿ­ಯ­ಲ್ಲಿಯೇ ಭರವಸೆ ಮೂಡಿ­­ಸಿರುವ ಯಶ್‌, ಪೌರಾ­ಣಿಕ ಕಥೆಗಳು, ಜೆ.ಕೆ. ರೌಲಿಂಗ್‌ ಅವರ ‘ಹ್ಯಾರಿ ಪಾಟರ್‌’ ಕೃತಿ ತನ್ನ ಮೇಲೆ ಪ್ರಭಾವ ಬೀರಿದೆ ಎನ್ನುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT