ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14 ಜೋಡಿಗಳ ಸಾಮೂಹಿಕ ವಿವಾಹ

Last Updated 27 ಏಪ್ರಿಲ್ 2015, 8:58 IST
ಅಕ್ಷರ ಗಾತ್ರ

ಮಡಿಕೇರಿ:  ಅಲ್–ಅಮೀನ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಬಡ ಹಾಗೂ ಅನಾಥ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಮಡಿಕೇರಿಯ ಕಾವೇರಿ ಹಾಲ್‌ ನಲ್ಲಿ ನಡೆಯಿತು. ಸುಮಾರು 14 ಜೋಡಿ ಗಳು ವಿವಾಹ ಬಂಧನಕ್ಕೆ ಒಳಪಟ್ಟರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರಿನ ಸಯ್ಯದ್‌ ಯಾಹ್ಯಾ ತಂಞಳ್‌ ಮಾತನಾಡಿ, ಅಲ್‌–ಅಮೀನ್‌ ಸಂಘಟನೆ ಕೈಗೊಂಡಿರುವ ಈ ಕೆಲಸ ಪುಣ್ಯದ ಕೆಲಸ. ಎಲ್ಲ ಜೋಡಿಗಳು ಉತ್ತಮವಾಗಿ ಜೀವನ ನಡೆಸಬೇಕೆಂದು ಹಾರೈಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ ಮಾತನಾಡಿ, ಈ ರೀತಿಯ ಸಾಮೂಹಿಕ ವಿವಾಹಗಳಿಂದ ವರದಕ್ಷಿಣೆಯ ಪಿಡುಗನ್ನು ದೂರ ಮಾಡ ಬಹುದು. ಅಲ್ಲದೆ ಪರಸ್ಪರ ಸಾಮರಸ್ಯ ಮನೋಭಾವ ವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.  ಅಲ್‌ ಅಮೀನ್‌ ಕೊಡಗು ಜಿಲ್ಲಾ ಸಮಿತಿಯ ಮಹಾ ಪೋಷಕ ಹಾಗೂ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಅಧ್ಯಕ್ಷತೆ ವಹಿಸಿ ಮಾತನಾಡಿ ದರು.

ಕಳೆದ ಎಂಟು ವರ್ಷಗಳಿಂದ ನಡೆಯುತ್ತಿರುವ ಸಾಮೂಹಿಕ ವಿವಾಹಕ್ಕೆ ಕೊಡಗು ಅಲ್ಲದೇ, ಹೊರ ಜಿಲ್ಲೆಗ ಳಿಂದಲೂ ಸಹಕಾರ ದೊರೆಯುತ್ತಿದೆ. ಇಲ್ಲಿಯವರೆಗೆ 262 ಜೋಡಿಗಳಿಗೆ ವಿವಾಹ ಮಾಡಿಸಲಾಗಿದೆ ಎಂದರು.

ಮುಸ್ಲಿಂ ಮಕ್ಕಳ ಶಿಕ್ಷಣಕ್ಕೆ ವಕ್ಫ್‌ ಮಂಡಳಿ ಅನುದಾನವನ್ನು ನೀಡುತ್ತಿರು ವುದರಿಂದ ಬಡಕುಟುಂಬದವರು ಇದರ ಪ್ರಯೋಜನ ಪಡೆದು, ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಮೂಲ ಸೌಲಭ್ಯ ಹಾಗೂ ಹಕ್ಕುಗಳನ್ನು ಪಡೆಯಲು ರಾಜಕೀಯ ವಾಗಿಯೂ ಮುಂದೆ ಬರಬೇಕು ಎಂದು ಕರೆ ನೀಡಿದರು.

ಪ್ರತಿ ವಧುವಿಗೆ ತಲಾ 40 ಗ್ರಾಂ ಚಿನ್ನ ಸೇರಿದಂತೆ ಜೋಡಿಗಳಿಗೆ ತಲಾ ₨ 1.25 ಲಕ್ಷ ಮೊತ್ತದ ಬಟ್ಟೆ, ಸೂಟ್‌ಕೇಸ್‌ ಮತ್ತು ಕೈಗಡಿಯಾರಗಳನ್ನು ವಿತರಿಸಲಾಗುತ್ತಿದೆ ಎಂದರು.

ಬಳ್ಳಾರಿಯ ಹಫೀಸ್‌ ಸೂಫಿಯಾನ್‌ ಸಖಾಫಿ, ಮೈಸೂರಿನ ರಾಮಚಂದ್ರ, ಉದ್ಯಮಿ ಪಿ.ಸಿ. ಹಸೈನಾರ್‌, ಅಬೂಬಕರ್‌, ಸಮಿತಿಯ ಅಧ್ಯಕ್ಷ ಎಫ್‌.ಎ. ಮಹಮ್ಮದ್‌ ಹಾಜಿ, ಪದಾಧಿಕಾರಿಗಳಾದ ನೂರುದ್ದೀನ್‌, ಹಾರೂನ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT