ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ದಿನದಲ್ಲಿ ವಿದ್ಯುತ್‌ ಸಂಪರ್ಕ ಕಡಿತ

ಅನಧಿಕೃತ ಜಾಹೀರಾತು ಫಲಕ ವಿರುದ್ಧ ಕಾರ್ಯಾಚರಣೆ
Last Updated 21 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿರುವ ಅನಧಿ­ಕೃತ ಜಾಹೀ­ರಾತು ಫಲಕಗಳನ್ನು ತೆರವುಗೊಳಿಸುವ ಸಂಬಂಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿ­ಎಂಪಿ) ಮತ್ತು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಬೆಸ್ಕಾಂ) ಅಧಿಕಾರಿಗಳು ಮಂಗಳವಾರ ಸಮನ್ವಯ ಸಭೆ ನಡೆಸಿದರು.

ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀ­ನಾರಾ­ಯಣ ಹಾಗೂ ಬೆಸ್ಕಾಂ ವ್ಯವಸ್ಥಾ­ಪಕ ನಿರ್ದೇಶಕ ಪಂಕಜ­ಕುಮಾರ್‌ ಪಾಂಡೆ ಅವರ ನೇತೃತ್ವದಲ್ಲಿ ಎರಡೂ ಸಂಸ್ಥೆ­ಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ‘ನಗರದಲ್ಲಿ 1,729 ಜಾಹೀರಾತು ಫಲಕಗಳಿದ್ದು, ಅದರಲ್ಲಿ 1,017 ಅನಧಿಕೃತವಾಗಿವೆ’ ಎಂದು ಬಿಬಿ­ಎಂಪಿ ಅಧಿಕಾರಿಗಳು ಸಭೆ ಗಮನಕ್ಕೆ ತಂದರು. ‘ಬೆಸ್ಕಾಂ ಈಗಾಗಲೇ 279 ಅನಧಿಕೃತ ಜಾಹೀರಾತು ಫಲಕ­ಗಳಿಗೆ ನೀಡಲಾಗಿದ್ದ ವಿದ್ಯುತ್‌ ಸಂಪರ್ಕವನ್ನು ಕಡಿತ­ಗೊಳಿ­ಸಿದೆ’ ಎಂದು ಪಾಂಡೆ ವಿವರಿಸಿದರು.

ಉಳಿದಿರುವ ಎಲ್ಲ ಅನಧಿಕೃತ ಜಾಹೀ­ರಾತು ಫಲಕ­ಗಳಿಗೆ ನೀಡಲಾಗಿರುವ ವಿದ್ಯುತ್‌ ಸಂಪರ್ಕವನ್ನು ಇನ್ನು 15 ದಿನಗಳಲ್ಲಿ ಕಡಿತಗೊಳಿಸಬೇಕು. ಅದಕ್ಕೆ ವಾರ್ಡ್‌­ವಾರು ಬೆಸ್ಕಾಂ ಅಧಿಕಾರಿಗಳ ಪಟ್ಟಿಯನ್ನು ಬಿಬಿಎಂಪಿಗೆ ಹಸ್ತಾಂತರಿಸ­ಬೇಕು. ಬೆಸ್ಕಾಂ ಹಾಗೂ ಬಿಬಿಎಂಪಿ ಅಧಿ­ಕಾರಿ­ಗಳು ಜಂಟಿಯಾಗಿ ಕಾರ್ಯಾಚ­ರಣೆ ನಡೆಸಬೇಕು ಎಂದು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಬಿಬಿಎಂಪಿಗೆ ಪರವಾನಗಿ ನವೀಕರಣ­ಕ್ಕಾಗಿ ಒಟ್ಟು 1,729 ಅರ್ಜಿಗಳು ಬಂದಿದ್ದು, ಅವುಗಳನ್ನು ಆದ್ಯತೆ ಮೇರೆಗೆ ಪರಿಶೀಲಿಸಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದೂ ನಿರ್ಧರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT