ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16ನೇ ಲೋಕಸಭೆ ರಚನೆ ಪ್ರಕ್ರಿಯೆ

Last Updated 17 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): 15 ನೇ ಲೋಕಸಭೆ ವಿಸರ್ಜನೆಗೆ ಸಚಿವ ಸಂಪುಟ ಶನಿವಾರ ಶಿಫಾರಸು ಮಾಡಿತು. ಅತಿ ಹೆಚ್ಚು ಬಾರಿ ಅಡೆತಡೆ ಎದುರಿಸಿದ ಲೋಕಸಭೆ ಎಂಬ ಅಪಖ್ಯಾತಿ ಈ ಅವಧಿಗೆ ಸೇರಿದೆ.   ಚುನಾವಣಾ ಫಲಿತಾಂಶ ಪ್ರಕಟ ವಾಗುವ ಹಿಂದಿನ ದಿನ ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದಲ್ಲಿ ಸೇರಿದ್ದ ಕೊನೆಯ ಸಂಪುಟ ಲೋಕಸಭೆ ವಿಸರ್ಜನೆಗೆ ಒಪ್ಪಿಗೆ ನೀಡಿತ್ತು.

ಚುನಾವಣಾ ಆಯೋಗ ಅಧಿಸೂಚನೆ ಯನ್ನು ಹೊಸದಾಗಿ ಆಯ್ಕೆ ಮಾಡಿದ ಸಂಸದರಿಗೆ ಕಳುಹಿಸಿದ ನಂತರ ಹೊಸ ಲೋಕ ಸಭೆ ರಚನೆಯ ಪ್ರಕ್ರಿಯೆ  ಆರಂಭವಾಗಲಿದೆ.

15 ನೇ ಲೋಕಸಭೆಯಲ್ಲಿ ಮೂವರು ಮಹಿಳೆ­ಯರು ಪ್ರಮುಖ ಸ್ಥಾನದಲ್ಲಿದ್ದುದು ವಿಶೇಷವಾಗಿತ್ತು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಸ್ಪೀಕರ್‌ ಮೀರಾ ಕುಮಾರ್‌್ ಮತ್ತು ವಿರೋಧಪಕ್ಷದ ನಾಯಕಿ ಸುಷ್ಮಾ ಸ್ವರಾಜ್‌ ಸದನದಲ್ಲಿದ್ದರು. ಇವರಲ್ಲಿ ಸೋನಿಯಾ ಮತ್ತು ಸುಷ್ಮಾ 16 ನೇ ಲೋಕಸಭೆಗೆ ಆಯ್ಕೆ ಯಾಗಿದ್ದರೆ, ಮೀರಾ ಕುಮಾರ್‌ ಬಿಹಾರದ ಸಾಸಾರಾಂ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ.

16ನೇ ಲೋಕಸಭೆ ಪಕ್ಷಗಳ ಬಲಾಬಲ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT