ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16ರ ಒಳಗೆ ಆಯೋಗಕ್ಕೆ ಮುಖ್ಯಸ್ಥರು

ಯುವತಿ ಮೇಲಿನ ಕಣ್ಗಾವಲು ತನಿಖೆ
Last Updated 2 ಮೇ 2014, 19:30 IST
ಅಕ್ಷರ ಗಾತ್ರ

ಶಿಮ್ಲಾ/ನವದೆಹಲಿ/ಪಟ್ನಾ (ಪಿಟಿಐ): ಗುಜ­ರಾತ್‌ ಯುವತಿ ಮೇಲಿನ ಅಕ್ರಮ ಕಣ್ಗಾ­ವಲು ಪ್ರಕರಣದ ನ್ಯಾಯಾಂಗ ತನಿಖಾ ಆಯೋಗಕ್ಕೆ  ನ್ಯಾಯಾಧೀಶರೊಬ್ಬರನ್ನು ಮೇ 16ಕ್ಕಿಂತ  (ಚುನಾವಣೆಯ ಮತ ಎಣಿಕೆ ದಿನಕ್ಕಿಂತ) ಮೊದಲೇ ನೇಮಿಸ­ಲಾಗುವುದು ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ.

ಗುಜರಾತ್‌ ಮುಖ್ಯಮಂತ್ರಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಸೂಚನೆಯಂತೆ ಯುವತಿಯೊಬ್ಬಳ ಚಲನವಲನದ ಮೇಲೆ ನಿಗಾ ಇಡಲಾಗಿತ್ತು ಎಂಬ ಆರೋಪದಿಂದ ಈ ಪ್ರಕರಣ ಭಾರಿ ವಿವಾದ ಸೃಷ್ಟಿಸಿತ್ತು.

ತೀವ್ರ ಖಂಡನೆ: ಆದರೆ, ಕೇಂದ್ರ ಸರ್ಕಾರದ ಹೇಳಿಕೆ­ಯನ್ನು ಬಿಜೆಪಿಯ ಹಿರಿಯ ಮುಖಂಡ ಅರುಣ್‌ ಜೇಟ್ಲಿ ಟೀಕಿಸಿದ್ದಾರೆ.
‘ಮೋದಿ ಅವರನ್ನು ಗುರಿ­ಯಾಗಿಸಿ­ಕೊಂಡು ನಡೆಸಲಾ­ಗುತ್ತಿರುವ ಈ ರಾಜ­ಕೀಯ ಮತ್ತು ದುರುದ್ದೇಶ ಪೂರಿತ ತನಿಖೆ­ಯಲ್ಲಿ ತೊಡಗಿ­ಕೊಳ್ಳಲು ಯಾವ ನ್ಯಾಯ­ಮೂರ್ತಿಯೂ ಸ್ವತಃ ಮುಂದಾ­ಗು­ವು­ದಿಲ್ಲ’ ಎಂದು ಅವರು ಹೇಳಿದ್ದಾರೆ.

ಶಿಂಧೆ ಸಮರ್ಥನೆ: ‘ಯುವತಿ ಮೇಲಿನ ಅಕ್ರಮವಾಗಿ ಬೇಹು­ಗಾರಿಕೆ ಪ್ರಕರಣದ ತನಿಖೆಗಾಗಿ ನ್ಯಾಯಾಂಗ ಆಯೋಗ­ವನ್ನು ರಚಿಸಲು ಕೇಂದ್ರ ಸಂಪುಟ ಈ ಹಿಂದೆಯೇ ನಿರ್ಧರಿಸಿತ್ತು. ಮೇ 16ರ ಒಳಗಾಗಿ ಆಯೋಗಕ್ಕೆ ನ್ಯಾಯಾಧೀಶ­ರನ್ನು ನಾವು ನೇಮಿಸಲಿದ್ದೇವೆ’ ಕೇಂದ್ರ ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂಧೆ ಶಿಮ್ಲಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಚುನಾವಣೆಯ ಮಧ್ಯದಲ್ಲಿ ಈ ವಿಚಾ­ರವು ನೀತಿ ಸಂಹಿತೆ ವ್ಯಾಪ್ತಿಯಲ್ಲಿ ಬರು­ವುದಿಲ್ಲವೇ ಎಂದು ಕೇಳಿದಾಗ, ‘ತನಿಖಾ ಆಯೋಗ ರಚಿಸುವ ನಿರ್ಧಾರವನ್ನು ನಾಲ್ಕು ತಿಂಗಳ ಹಿಂದೆಯೇ ಕೈಗೊಂಡಿ­ರು­ವು­ದರಿಂದ ಇದು ನೀತಿ ಸಂಹಿತೆ ಅಡಿ­ಯಲ್ಲಿ ಬರು­ವುದಿಲ್ಲ’ ಎಂದು ಅವರು ಉತ್ತರಿಸಿದರು

ನ್ಯಾಯಾಂಗ ತನಿಖೆ: ಮೋದಿ ಅವರ ಸೂಚನೆ ಮೇರೆಗೆ 2009ರಲ್ಲಿ ಯುವತಿ­ಯೊಬ್ಬರ ಚಲನವಲನಗಳ ಮೇಲೆ ನಿಗಾ ಇಡಲಾಗಿತ್ತು ಎಂಬ ಆರೋಪದ ತನಿಖೆಗಾಗಿ ಕೇಂದ್ರ ಸರ್ಕಾರ ಕಳೆದ ಡಿಸೆಂಬರ್‌ 26ರಂದು ನ್ಯಾಯಾಂಗ ಆಯೋಗ ರಚಿಸುವ ನಿರ್ಧಾರ ಕೈಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT