ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16 ಮಕ್ಕಳ ದುರ್ಮರಣ

ಚಾಲಕನ ನಿರ್ಲಕ್ಷ್ಯ: ಶಾಲಾ ವಾಹನಕ್ಕೆ ರೈಲು ಡಿಕ್ಕಿ
Last Updated 24 ಜುಲೈ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್‌ (ಪಿಟಿಐ): ನಾಂದೇಡ್‌–ಸಿಕಂದರಾಬಾದ್‌ ಪ್ರಯಾಣಿಕರ ರೈಲು, ಶಾಲಾ ವಾಹನಕ್ಕೆ ಡಿಕ್ಕಿಯಾಗಿ ದೂರದ­ವರೆಗೆ ಎಳೆದು­ಕೊಂಡು ಹೋದ ಕಾರಣ ಬಸ್‌ನಲ್ಲಿದ್ದ 16 ಮಕ್ಕಳು ಸೇರಿ 18 ಮಂದಿ ಮೃತಪಟ್ಟ ಘಟನೆ ತೆಲಂಗಾಣದ ಮೆದಕ್‌ ಜಿಲ್ಲೆಯ ಮಾಸಾಯಿಪೇಟ ಗ್ರಾಮದಲ್ಲಿ ಗುರುವಾರ ನಡೆದಿದೆ.

ಮೆದಕ್‌ನ ಯೆಲ್ದುರ್ತಿ ಮಂಡಳದ ಕಾವ­ಲುರಹಿತ ರೈಲ್ವೆ ಕ್ರಾಸಿಂಗ್‌ನಲ್ಲಿ ಬೆಳಿಗ್ಗೆ 9.10ಕ್ಕೆ ನಡೆದ ಈ ಅವಘಡ­ದಲ್ಲಿ ಚಾಲಕ ಹಾಗೂ ಕ್ಲೀನರ್‌ ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯ­ಗೊಂಡ 22 ಮಕ್ಕಳು ಹೈದರಾಬಾದ್‌ನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯು­ತ್ತಿದ್ದಾರೆ.

ರೈಲು ದೂರ­ದಿಂ­ದಲೇ ಹಾರ್ನ್‌ ಮಾಡುತ್ತ ಬರುತ್ತಿತ್ತು. ಆದರೆ, ಶಾಲಾ ವಾಹನದ ಚಾಲಕ ಇದನ್ನು ನಿರ್ಲ­ಕ್ಷಿ­ಸಿದ. ರೈಲು ವಾಹನಕ್ಕೆ ಡಿಕ್ಕಿ ಹೊಡೆ­­ದಾಗ ದೊಡ್ಡ ಶಬ್ದ ಕೇಳಿ­ಬಂತು. ವಾಹನ ಮೇಲಕ್ಕೆ ಚಿಮ್ಮಿತು ಎಂದು ಪ್ರತ್ಯಕ್ಷ­ದರ್ಶಿ ಬಾಲಾ ಮಹೇಶ್‌ ಹೇಳಿದ್ದಾರೆ.

ಕಾಕತಿಯ ಟೆಕ್ನೊ ಸ್ಕೂಲ್‌ ವಾಹನ­ದಲ್ಲಿ 36 ಮಕ್ಕಳು ಇದ್ದರು.   ಅತಿ ವೇಗ­ದಲ್ಲಿ ಚಲಿಸುತ್ತಿದ್ದ ರೈಲು ಬಸ್ಸನ್ನು ಒಂದು ಕಿ.ಮೀ. ದೂರದವರೆಗೆ ಎಳೆದುಕೊಂಡು ಹೋಗಿ ನಿಂತಿತು. ಬಸ್‌ ಸಂಪೂರ್ಣ ಜಖಂ­ಗೊಂಡಿದ್ದು, ಮಕ್ಕಳ ಬ್ಯಾಗ್‌ ಹಾಗೂ ತಿಂಡಿ ಡಬ್ಬಿಗಳು ಚೆಲ್ಲಾಪಿಲ್ಲಿ­ಯಾಗಿ ಬಿದ್ದಿದ್ದವು. ಮೃತ ಮಕ್ಕಳೆಲ್ಲ 5–-15ರ ವಯೋಮಾನ­ದವರು.

ಸಿಕಂದ­ರಾಬಾದ್‌–ನಿಜಾಬಾಮಾದ್‌ ರೈಲು ನಿಲ್ದಾಣಗಳ ಮಾಸಾಯಿಪೇಟ ಹಾಗೂ ವಡಿಯಾರಾಮ್‌ ನಡುವಣ ರೈಲ್ವೆ ಕ್ರಾಸಿಂಗ್‌ನಲ್ಲಿ ದುರಂತ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT