ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18ರಂದು ಕೊಡವ ಮಕ್ಕಡಕೂಟ

Last Updated 12 ಫೆಬ್ರುವರಿ 2016, 7:29 IST
ಅಕ್ಷರ ಗಾತ್ರ

ಮಡಿಕೇರಿ: ಕೊಡವ ಮಕ್ಕಡಕೂಟ ಮತ್ತು ವಿರಾಜಪೇಟೆ ಕೊಡವ ತಕ್ಕ್ ಎಳ್ತ್ ಕಾರಡಕೂಟದ ಸಂಯುಕ್ತ ಆಶ್ರಯದಲ್ಲಿ ಫೆ.18 ರಂದು ನಗರದ ಕೊಡವ ಸಮಾಜದಲ್ಲಿ ಕೊಡವ ಮಕ್ಕಡಕೂಟದ 3ನೇ ವರ್ಷಾಚರಣೆ ಹಾಗೂ ಸಾಹಿತಿ ಮಂಡೀರ ಜಯಾಅಪ್ಪಣ್ಣ ಸ್ಮರಣ ಕಾರ್ಯಕ್ರಮ ನಡೆಯಲಿದೆ ಎಂದು ಕರುಣ ಕಾಳಯ್ಯ ತಿಳಿಸಿದ್ದಾರೆ.

ಅಂದು ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಕೊಡವ ಎಳ್ತ್ ಕಾರಡಕೂಟದ ಅಧ್ಯಕ್ಷ ಕಾಳಿಮಾಡ.ಯಂ. ಮೋಟಯ್ಯರವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮೂವೆರ ಶಂಭು ಸುಬ್ಬಯ್ಯ, ಕೊಡವ ಮಕ್ಕಡಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಕೊಡಗು ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್‌ ಕುಟ್ಟಪ್ಪ, ಬರಹಗಾರ್ತಿ ಮೊಣ್ಣಂಡ ಶೋಭ ಸುಬ್ಬಯ್ಯ, ಬರಹಗಾರ ಅಮ್ಮಣಿಚಂಡ ಪ್ರವೀಣ್‌ ಚಂಗಪ್ಪ ಭಾಗವಹಿಸಲಿದ್ದಾರೆ.

ಉದಿಯಂಡ ಜಯಂತಿ ಮಂದಣ್ಣ 'ಕೊಡವ ಸಂಸ್ಕ್ರತಿಯ ಬೆಳವಣಿಗೆಯಲ್ಲಿ ಮಕ್ಕಳ ಜವಾಬ್ದಾರಿ' ಎಂಬ ವಿಚಾರವಾಗಿ ವಿಷಯ ಮಂಡನೆ ಮಾಡಲಿದ್ದಾರೆ. ಕೂಟದ ವತಿಯಿಂದ ಅಜ್ಜಮಾಡ ರಮೇಶ್‌ ಕುಟ್ಟಪ್ಪನವರಿಗೆ ಸನ್ಮಾನ ಮಾಡಲಾಗುವುದು.

ಕಾರ್ಯಕ್ರಮದಲ್ಲಿ ಕೊಡವ ಎಳ್ತ್‌ ಕಾರಡ ಕೂಟದ 143 ಹಾಗೂ 144ನೇ ಪುಸ್ತಕ ಬಿಡುಗಡೆ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಸಾಹಿತಿ ಮಂಡೀರ ಜಯಅಪ್ಪಣ್ಣ ಬರೆದ ಹಾಡುಗಾರಿಕಾ ಪೈಪೋಟಿ, ಕಾಲೇಜು ಹಾಗೂ ಸಾರ್ವಜನಿಕರಿಗೆ ಸಾಹಿತಿ ಮಂಡೀರ ಜಯಅಪ್ಪಣ್ಣ ಬರೆದ ಕೊಡವ ಜಯಭಾರತ ಓದುವ ಪೈಪೋಟಿ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT