ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ವರ್ಷಗಳಲ್ಲಿ ‘ಗಂಗಾ’ ಶುದ್ಧೀಕರಣ

ಸುಪ್ರೀಂಕೋರ್ಟ್‌ಗೆ ನೀಲನಕ್ಷೆ ಮುಂದಿಟ್ಟ ಕೇಂದ್ರ ಸರ್ಕಾರ
Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪವಿತ್ರ ಗಂಗಾ ನದಿಯ ಶುದ್ಧೀಕರಣಕ್ಕೆ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿಯ 18 ವರ್ಷಗಳ ಯೋಜನೆಯ ನೀಲ­ನಕ್ಷೆ­ಯನ್ನು ಮೋದಿ ನೇತೃತ್ವದ ಸರ್ಕಾರವು ಸುಪ್ರೀಂಕೋರ್ಟ್ ಮುಂದಿಟ್ಟಿದೆ.

ಗಂಗಾ ನದಿ ಶುದ್ಧೀಕರಣಕ್ಕೆ ಸಂಬಂಧಿಸಿದಂತೆ ಸರ್ಕಾ­ರದ ವಿಳಂಬ ಧೋರಣೆಗೆ ಸುಪ್ರೀಂಕೋರ್ಟ್ ಇತ್ತೀಚೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ಮೊದಲ ಹಂತದಲ್ಲಿ ಗಂಗಾ ನದಿಯ ದಡದಲ್ಲಿ ಬರುವ 118 ಪಟ್ಟಣಗಳಲ್ಲಿ ನದಿಗೆ ಒಳಚರಂಡಿ ನೀರು, ಕಸಕಡ್ಡಿಗಳು, ಮತ್ತು ಕೊಳಚೆ  ಸೇರದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿರುವ ನೀಲನಕ್ಷೆ ಯೋಜನೆಯಲ್ಲಿ ತಿಳಿಸಲಾಗಿದೆ.

ಗಂಗಾ ನದಿ ಪುನಶ್ಚೇತನಕ್ಕಾಗಿ ಕಾಲ ಮಿತಿಯ ಬಹು ಹಂತದ ಯೋಜನೆಗಳನ್ನು ರೂಪಿಸಲಾಗಿದೆ. ಮೂರು ವರ್ಷಗಳ ಅಲ್ಪಾವಧಿ ಯೋಜನೆ, ಅದರ ನಂತರದ ಐದು ವರ್ಷಗಳ ಮಧ್ಯಮಾವಧಿ ಯೋಜನೆ ಹಾಗೂ ಅದರ ನಂತರದ 10 ವರ್ಷಗಳ ದೀರ್ಘಾವಧಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಸುಪ್ರೀಂ­ಕೋರ್ಟ್‌ಗೆ ಸಲ್ಲಿಸಲಾಗಿರುವ ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ. ಇದಕ್ಕಾಗಿ ಸಾವಿರಾರು ಕೋಟಿಗಳ ಬಂಡವಾಳ ಬೇಕಾಗುತ್ತದೆ ಎಂದೂ ಹೇಳಿದೆ.

2,500 ಕಿ. ಮೀ. ಉದ್ದದ ನದಿಯನ್ನು ಶುದ್ಧ ಮಾಡುವ ಯೋಜನೆಯನ್ನು ಜಾರಿ ಮಾಡಬೇಕಾಗಿ­ರುವ ಐದು ರಾಜ್ಯ ಸರ್ಕಾರಗಳ ಜತೆ ಸಮಾಲೋಚಿ­ಸಿದ ನಂತರ ಮೂರು ಹಂತದ ಕಾಲಮಿತಿ ಯೋಜನೆ­ಯನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಲಾಗಿದೆ.

ಮೊದಲ ಹಂತದಲ್ಲಿ 118 ಪಟ್ಟಣಗಳನ್ನು ಗುರುತಿ­ಸ­ಲಾಗಿದ್ದು, ಈ ಪಟ್ಟಣಗಳಲ್ಲಿ ಸಂಪೂರ್ಣ ಒಳಚ­ರಂಡಿ ವ್ಯವಸ್ಥೆ, ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ.

ಗಂಗಾ ನದಿ ಹೆಚ್ಚು ಮಲಿನಗೊಳ್ಳುವ ಕೇದಾರ­ನಾಥ್, ಹರಿದ್ವಾರ, ವಾರಾಣಸಿ , ಕಾನ್ಪುರ, ಅಲಹಾ­ಬಾದ್, ಪಟ್ನಾ ಮತ್ತು ದೆಹಲಿ ಹೀಗೆ ಏಳು ಪ್ರದೇಶ­ಗಳನ್ನು ಗುರುತಿಸಲಾಗಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ. ಗಂಗಾ ನದಿಯ ದಡದ ಮೇಲಿರುವ 1649 ಗ್ರಾಮಪಂಚಾಯತ್‌ಗಳಲ್ಲಿ ಒಳಚರಂಡಿ ವ್ಯವಸ್ಥೆ ಮತ್ತು ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪನೆಗೆ 51 ಸಾವಿರ ಕೋಟಿ ರೂಪಾಯಿಗಳನ್ನು ವ್ಯಯ ಮಾಡಲು ಉದ್ದೇಶಿಸಲಾಗಿದೆ.

ಗಂಗಾ ಶುದ್ಧೀಕರಣದ ದೀರ್ಘಾವಧಿ ಯೋಜನೆ­ಯನ್ನು ಏಳು ಐಐಟಿಗಳ ತಜ್ಞರ ಸಲಹೆ ಪಡೆದು ರೂಪಿಸ­ಲಾಗಿದೆ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT