ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19ರಿಂದ ಕಾರಂತ ರಂಗೋತ್ಸವ

Last Updated 15 ಸೆಪ್ಟೆಂಬರ್ 2014, 20:13 IST
ಅಕ್ಷರ ಗಾತ್ರ

ಬೆಂಗಳೂರು: ‘ರಂಗಕರ್ಮಿ ಬಿ.ವಿ.ಕಾರಂತ್‌ ಅವರ 85ನೇ  ಜನ್ಮದಿನಾಚರಣೆ ಅಂಗವಾಗಿ ಸೆ.19ರಿಂದ ಮೂರು ದಿನಗಳ ಕಾಲ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರಂತ್‌ ರಂಗೋತ್ಸವವನ್ನು ಹಮ್ಮಿಕೊಳ್ಳಲಾಗಿದೆ’  ಎಂದು ಬೆನಕ  ತಂಡದ ಅಧ್ಯಕ್ಷ ಎಂ.ಕೆ.ಸುಂದರ್‌ ರಾಜ್‌ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ‘ಬಿ.ವಿ.ಕಾರಂತ್ ಅಸಾಧಾರಣ ಪ್ರತಿಭೆ. ಇಂದಿನ  ಯುವ ರಂಗಕರ್ಮಿಗಳಿಗೆ ಅವರು ಸ್ಫೂರ್ತಿಯ ಸೆಲೆ. ಅವರು ಬಿಟ್ಟು ಹೋದ ರಂಗಪ್ರಯೋಗಗಳು ಇಂದಿನ ರಂಗಭೂಮಿ ಬೆಳವಣಿಗೆಗೆ ಪ್ರೇರಕ’ ಎಂದು ಹೇಳಿದರು.

‘ಬೆನಕ ತಂಡವು  ರಂಗೋತ್ಸವದಲ್ಲಿ ‘ಗೋಕುಲ ನಿರ್ಗಮನ’ ಮತ್ತು ‘ಸತ್ತವರ ನೆರಳು’ ನಾಟಕ ಪ್ರದರ್ಶಿಸಲಿದೆ. ವಿಚಾರ ಸಂಕಿರಣ, ಛಾಯಾಚಿತ್ರ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನಗಳು ನಡೆಯಲಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT