ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19 ಕಂಪೆನಿಗಳಿಗೆ ರೂ1ಕೋಟಿ ದಂಡ

Last Updated 22 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಸ್ಪೆಕ್ಟ್ಯಾಕಲ್‌ ಇನ್ಫೊಟೆಕ್‌ (ಎಸ್‌ಐಎಲ್‌) ಕಂಪೆನಿಯ ಷೇರುಗಳನ್ನು ಅಕ್ರಮವಾಗಿ ವಹಿವಾಟು ನಡೆಸಿದ ಆರೋಪದಡಿ 19 ಕಂಪೆನಿಗಳಿಗೆ  ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಒಟ್ಟಾರೆ ರೂ. 1ಕೋಟಿ ದಂಡ ವಿಧಿಸಿದೆ.

ಈ ಕಂಪೆನಿಗಳು ಎಸ್‌ಐಎಲ್‌ ಷೇರಿನ ಮೌಲ್ಯವನ್ನು ಕೃತಕವಾಗಿ ಹೆಚ್ಚಿಸುವ ಮೂಲಕ ತಪ್ಪು ಮಾಹಿತಿ ನೀಡಿವೆ. ಅಲ್ಲದೆ ದಳ್ಳಾಳಿಗಳ ನಿಯಮಗಳನ್ನೂ ಉಲ್ಲಂಘಿಸಿ ಎಂದು ಸೆಬಿ ತನ್ನ ಆದೇಶದಲ್ಲಿ ತಿಳಿಸಿದೆ.

1 ಮೇ 2010ರಿಂದ 31ನೇ ಜನವರಿ 2011ರ ಅವಧಿಯಲ್ಲಿ ಈ 19 ಕಂಪೆನಿಗಳು ಎಸ್‌ಐಎಲ್‌ ಷೇರಿನ ಬೆಲೆಯನ್ನು ರೂ. 21.75 ರಿಂದ ರೂ. 162.80ಕ್ಕೆ ಗರಿಷ್ಠ ಏರಿಕೆ ಮಾಡಿರುವುದು ಮತ್ತು ದಿನದ ವಹಿವಾಟಿನಲ್ಲಿ ಗರಿಷ್ಠ  79,68,043 ಷೇರುಗಳು ಹಾಗೂ ಕನಿಷ್ಠ 31 ಷೇರುಗಳು ಮಾರಾಟ­ವಾಗಿವೆ ಎಂದು ತಪ್ಪಾಗಿ ಮಾಹಿತಿ ನೀಡಿರುವುದು ಸೆಬಿ ನಡೆಸಿದ ವಿಚಾರಣೆಯಿಂದ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT