ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1993ರ ಮುಂಬೈ ಸ್ಫೋಟದಿಂದ, ಮೆಮನ್ ಗಲ್ಲಿನವರೆಗೆ...

Last Updated 30 ಜುಲೈ 2015, 19:34 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  2015 ಜುಲೈ 29 ಯಾಕೂಬ್‌ನ ಪರಿಹಾರಾತ್ಮಕ ಅರ್ಜಿ ತಿರಸ್ಕರಿಸಿ, ಗಲ್ಲುಶಿಕ್ಷೆ ಎತ್ತಿಹಿಡಿದ ಸುಪ್ರೀಂಕೋರ್ಟ್

* 1993 ಮಾರ್ಚ್ 12: ಮುಂಬೈನಲ್ಲಿ 13 ಬಾಂಬ್‌ಗಳ ಸರಣಿ ಸ್ಫೋಟ. 257 ಬಲಿ, 713 ಜನರಿಗೆ ಗಾಯ.

* ಏಪ್ರಿಲ್ 19: ಸ್ಫೋಟ ಪ್ರಕರಣದ ಆರೋಪಿ, ನಟ ಸಂಜಯ್ ದತ್ (ಆರೋಪಿ ಸಂಖ್ಯೆ 117) ಬಂಧನ.

* ನವೆಂಬರ್ 4: ನಟ ಸಂಜಯ್ ದತ್ ಸೇರಿದಂತೆ 189 ಆರೋಪಿಗಳ ವಿರುದ್ಧ 10 ಸಾವಿರ ಪುಟಗಳಷ್ಟು ದೀರ್ಘವಾದ ಆರೋಪ ಪಟ್ಟಿ ಸಲ್ಲಿಕೆ.

* ನವೆಂಬರ್ 19: ಸಿಬಿಐಗೆ ಪ್ರಕರಣ ಹಸ್ತಾಂತರ

* 1994ರ ಏಪ್ರಿಲ್ 1: ಮುಂಬೈನ ಸೆಷೆನ್ಸ್ ಮತ್ತು ಸಿವಿಲ್ ನ್ಯಾಯಾಲಯದಿಂದ ಅರ್ಥರ್‌ ರೋಡ್ ಕೇಂದ್ರ ಕಾರಾಗೃಹದ ಆವರಣಕ್ಕೆ ಟಾಡಾ ನ್ಯಾಯಾಲಯ ಸ್ಥಳಾಂತರ.

* 1995ರ ಏಪ್ರಿಲ್ 10: 26 ಆರೋಪಿಗಳ ವಿರುದ್ಧದ ಆರೋಪಪಟ್ಟಿ ಕೈಬಿಟ್ಟ ಟಾಡಾ ನ್ಯಾಯಾಲಯ. ಉಳಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲು.

* ಏಪ್ರಿಲ್ 19: ವಿಚಾರಣೆ ಆರಂಭ.

* ಏಪ್ರಿಲ್–ಜೂನ್: ಆರೋಪಿಗಳ ವಿರುದ್ಧ ಪ್ರಕರಣ ದಾಖಲು.

* ಜೂನ್ 30: ಮಾಫಿ ಸಾಕ್ಷಿಗಳಾಗಲು ಒಪ್ಪಿದ ಪ್ರಕರಣದ ಇಬ್ಬರು ಆರೋಪಿಗಳಾದ ಮಹಮ್ಮದ್ ಜಮೀಲ್ ಮತ್ತು ಉಸ್ಮಾನ್ ಝಂಕನನ್.

* ಅಕ್ಟೋಬರ್ 14: ಸುಪ್ರೀಂಕೋರ್ಟ್‌ನಿಂದ ನಟ ಸಂಜಯ್ ದತ್‌ಗೆ ಜಾಮೀನು.

* 1996ರ  ಮಾರ್ಚ್ 23: ನ್ಯಾಯಾಧೀಶರಾದ ಜೆ.ಎನ್.ಪಟೇಲ್ ಅವರ ವರ್ಗ ಮತ್ತು ಹೈಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ.

* ಮಾರ್ಚ್ 29: ಪ್ರಕರಣದ ವಿಚಾರಣೆಗಾಗಿ ಟಾಡಾ ವಿಶೇಷ ನ್ಯಾಯಾಧೀಶರಾಗಿ ಪಿ.ಡಿ.ಕೋಡೆ  ಅವರ ನೇಮಕ.

* 2000ರ ಅಕ್ಟೋಬರ್: 684 ಸಾಕ್ಷಿಗಳ ಪರಿಶೀಲನೆ ಪೂರ್ಣ.

* 2001ರ ಮಾರ್ಚ್ 9ರಿಂದ ಜುಲೈ 18: ಆರೋಪಿಗಳ ಹೇಳಿಕೆ ದಾಖಲು.

* 2003ರ ಫೆಬ್ರುವರಿ 20: ನ್ಯಾಯಾಲಯದ ಎದುರು ದಾವೂದ್ ಗುಂಪಿನ ಸದಸ್ಯ ಇಜಾಸ್ ಪಠಾಣ್ ಹಾಜರು.

* ಸೆಪ್ಟೆಂಬರ್ 12: ತೀರ್ಪು. ಮೆಮನ್ ಕುಟುಂಬದ ನಾಲ್ವರು ತಪ್ಪಿತಸ್ಥರು, ಮೂವರ ಖುಲಾಸೆ.  12 ಮಂದಿಗೆ ಮರಣ ದಂಡನೆ, 20 ಮಂದಿಗೆ ಜೀವಾವಧಿ ಶಿಕ್ಷೆ.

* 2011ರ ನವೆಂಬರ್ 1: ಮಹಾರಾಷ್ಟ್ರ ಸರ್ಕಾರದ ಮತ್ತು 100 ಕೈದಿಗಳ ಮೇಲ್ಮನವಿಯ ವಿಚಾರಣೆ ಆರಂಭಿಸಿದ ಸುಪ್ರೀಂಕೋರ್ಟ್.

* 2012ರ ಆಗಸ್ಟ್ 29: ಮೇಲ್ಮನವಿಗಳ ಮೇಲಿನ ತನ್ನ ಆದೇಶ ಕಾಯ್ದಿರಿಸಿದ ಸುಪ್ರೀಂಕೋರ್ಟ್.

* 2013ರ ಮಾರ್ಚ್ 21: ಯಾಕೂಬ್ ಮೆಮನ್‌ಗೆ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್. ಇತರ 10 ಜನರಿಗೆ ವಿಧಿಸಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತನೆ. 18 ಜನರಲ್ಲಿ 16 ಜನರ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್.

* ಜುಲೈ 30: ಯಾಕೂಬ್ ಮೆಮನ್‌ನ ಮೊದಲ ಮರುಪರಿಶೀಲನಾ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್.

* ಆಗಸ್ಟ್ 14: ಮರಣ ದಂಡನೆ ಜಾರಿ ದಿನಾಂಕ ಘೋಷಣೆ.

* 2014ರ ಏಪ್ರಿಲ್ 11: ಯಾಕೂಬ್ ಮೆಮನ್‌ನ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ.

* ಜೂನ್ 2: ಮರಣದಂಡನೆ ಪ್ರಕರಣಗಳ ವಿಚಾರಣೆ ಬಹಿರಂಗ ನ್ಯಾಯಾಲಯದಲ್ಲಿ ನಡೆಸುವಂತೆ ಕೋರಿದ್ದ ಯಾಕೂಬ್‌ನ ಮರುಪರಿಶೀಲನಾ ಅರ್ಜಿಯ ಮೇರೆಗೆ, ಯಾಕೂಬ್‌ನ ಗಲ್ಲುಶಿಕ್ಷೆಗೆ ಸುಪ್ರೀಂಕೋರ್ಟ್‌ನಿಂದ ತಡೆ.

* 2015ರ ಏಪ್ರಿಲ್ 9: ಮರಣದಂಡನೆಯನ್ನು ಎತ್ತಿ ಹಿಡಿದಿದ್ದ ಸುಪ್ರೀಂಕೋರ್ಟ್‌ನ ತೀರ್ಪಿನ ವಿರುದ್ಧ ಯಾಕೂಬ್ ಮೆಮನ್ ಸಲ್ಲಿಸಿದ್ದ 2ನೇ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್.

* ಜುಲೈ 21: ಗಲ್ಲುಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಮೆಮನ್‌ಗೆ ಇದ್ದ ಕಟ್ಟಕಡೆಯ ಹಾದಿ, ಪರಿಹಾರಾತ್ಮಕ ಅರ್ಜಿಯನ್ನೂ ತಿರಸ್ಕರಿಸಿದ ಸುಪ್ರೀಂಕೋರ್ಟ್.

* ಜುಲೈ 23: ಜುಲೈ 30ಕ್ಕೆ ನಿಗದಿಯಾಗಿರುವ ಮರಣದಂಡನೆಗೆ ತಡೆ ಕೋರಿ ಸುಪ್ರೀಂಕೋರ್ಟ್‌ಗೆ ಮೆಮನ್ ಮೊರೆ.

* ಜುಲೈ 27: ಸುಪ್ರೀಂಕೋರ್ಟ್‌ನಲ್ಲಿದ್ದ ಪರಿಹಾರಾತ್ಮಕ ಅರ್ಜಿಯ ವಿಚಾರವಾಗಿ ಕಾನೂನು ತೊಡಕು.

* ಜುಲೈ 28: ಪರಿಹಾರಾತ್ಮಕ ಅರ್ಜಿಯ ಬಗ್ಗೆ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠದ ಭಿನ್ನ ತೀರ್ಪು. ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವಂತೆ ಮುಖ್ಯ ನ್ಯಾಯಮೂರ್ತಿಗೆ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT