ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ವಿದ್ಯಾರ್ಥಿಗಳಲ್ಲಿ ಒಬ್ಬರು ವೇಶ್ಯಾ ವೃತ್ತಿಯಲ್ಲಿ ಸಕ್ರಿಯ!

Last Updated 27 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): ಸುಲಭವಾಗಿ ಹಣ ಗಳಿಸುವ ಉದ್ದೇಶಕ್ಕಾಗಿ ಇಲ್ಲಿನ ವಿದ್ಯಾರ್ಥಿಗಳು ವೇಶ್ಯಾ ವೃತ್ತಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎಂಬ ಆತಂಕಕಾರಿ ವಿಷಯವನ್ನು ಹೊಸ ಸಮೀಕ್ಷೆ ಬಹಿರಂಗಗೊಳಿಸಿದೆ.

ಸ್ವಾನ್‌ಸೇನಾ ವಿಶ್ವವಿದ್ಯಾಲಯದ ಸಂಶೋಧಕರು ಈ ಸಮೀಕ್ಷೆ ನಡೆಸಿದ್ದು, 20ರಲ್ಲಿ ಒಬ್ಬ ವಿದ್ಯಾರ್ಥಿ ಲೈಂಗಿಕ ವೃತ್ತಿಗೆ ಪ್ರವೇಶಿಸುತ್ತಿದ್ದಾರೆ. ಅಲ್ಲದೆ ವೇಶ್ಯಾ ವೃತ್ತಿಯಲ್ಲಿ  ತೊಡಗುವವರ ಸಂಖ್ಯೆ ಹುಡುಗಿಯರಿಗಿಂತ  ಹುಡುಗರದ್ದೇ ಹೆಚ್ಚಿದೆ ಎಂದಿದ್ದಾರೆ.

‘ಬ್ರಿಟನ್‌ನಾದ್ಯಂತ ಬಹುತೇಕ ವಿದ್ಯಾರ್ಥಿಗಳು ವೇಶ್ಯಾ ವೃತ್ತಿಯಲ್ಲಿ ತೊಡಗಿಕೊಂಡಿದ್ದು, ದೂರವಾಣಿಯಲ್ಲಿ ಲೈಂಗಿಕ ಸಂಭಾಷಣೆ, ಮಾದಕ ನೃತ್ಯದಲ್ಲಿ ತೊಡಗಿಸಿ­ಕೊಳ್ಳುತ್ತಿದ್ದಾರೆ. ಹೀಗೆ ಲೈಂಗಿಕ ವೃತ್ತಿಯಲ್ಲಿ ತೊಡಗಿಕೊಳ್ಳುವವರಲ್ಲಿ ಕೆಲವರು ಗೌಪ್ಯವಾಗಿ ಆ ವೃತ್ತಿಯಲ್ಲೇ ಮುಂದು­ವರಿಯುತ್ತಾರೆ’ ಎಂದು ಅಧ್ಯಯನ ನೇತೃತ್ವ ವಹಿಸಿದ್ದ ಟ್ರೇಸಿ ಸಾಗರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT