ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2014: ಫೇಸ್‌ಬುಕ್‌ ಲಾಭ ದುಪ್ಪಟ್ಟು

ಮೊಬೈಲ್‌ ಬಳಕೆ ಹೆಚ್ಚಳವೇ ಕಾರಣ
Last Updated 29 ಜನವರಿ 2015, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌(ಪಿಟಿಐ): ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲೊಂದಾದ ಫೇಸ್‌ಬುಕ್‌ ಲಾಭ ಗಳಿಕೆಯು ಮಾರುಕಟ್ಟೆ ವಿಶ್ಲೇಷಕರ ನಿರೀಕ್ಷೆಗಳನ್ನೂ ಮೀರಿದೆ. 2014ರಲ್ಲಿ ಫೇಸ್‌ಬುಕ್‌ ಲಾಭ ಅಕ್ಷರಶಃ ದುಪ್ಪಟ್ಟಾಗಿದೆ.

ಡಿ. 31ಕ್ಕೆ  ಕೊನೆಗೊಂಡ ವರ್ಷದಲ್ಲಿ ಫೇಸ್‌ಬುಕ್‌  290 ಕೋಟಿ ಡಾಲರ್‌ (ರೂ17,939 ಕೋಟಿ) ನಿವ್ವಳ ಲಾಭ ಗಳಿಸಿದೆ. ಗ್ರಾಹಕರು ಮೊಬೈಲ್‌ ಫೋನ್‌ನಲ್ಲಿ ಫೇಸ್‌ಬುಕ್‌ ಬಳಕೆ ಮಾಡುವುದು ಹೆಚ್ಚುತ್ತಾ ಹೋಗಿದ್ದರಿಂದಲೇ ಇಷ್ಟೊಂದು ದೊಡ್ಡ ಪ್ರಮಾಣದ ಲಾಭ ಗಳಿಕೆ ಸಾಧ್ಯವಾಗಿದೆ ಎಂದು ಕಂಪೆನಿ ಹೇಳಿದೆ.

ಕಂಪೆನಿ ಒಟ್ಟಾರೆ ವರಮಾನವೂ 1247 ಕೋಟಿ ಡಾಲರ್‌ (ರೂ77,140 ಕೋಟಿಗೆ)  ತಲುಪಿದೆ. ಅಂದರೆ, ಹಿಂದಿನ ವರ್ಷಕ್ಕಿಂತ ಶೇ 49ರಷ್ಟು ವೃದ್ಧಿ ಕಂಡುಬಂದಿದೆ.

ಜಾಹೀರಾತು ಮೂಲದ ಗಳಿಕೆ ಶೇ 53ರಷ್ಟು ಹೆಚ್ಚಿರುವುದೇ ಒಟ್ಟಾರೆ ವರಮಾನ ಏರಿಕೆಗೆ  ಕಾರಣ ಎಂದು ಕಂಪೆನಿ ಹೇಳಿದೆ.
ಮೊಬೈಲ್‌ನಲ್ಲಿ ಫೇಸ್‌ಬುಕ್‌ ಬಳಕೆ ಶೇ18 ಅಧಿಕ ಮೊಬೈಲ್‌ನಲ್ಲಿ ಫೇಸ್‌ಬುಕ್‌ ಬಳಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಶೇ 18ರಷ್ಟು ಹೆಚ್ಚುತ್ತಿದೆ. ವಿಶ್ವದಾದ್ಯಂತ ಒಟ್ಟು 139 ಕೋಟಿ ಫೇಸ್‌ಬುಕ್‌ ಬಳಕೆದಾರರಿದ್ದು, ನಿತ್ಯ 74.50 ಕೋಟಿ ಜನರು ಮೊಬೈಲಿನಲ್ಲಿಯೇ ಫೇಸ್‌ಬುಕ್‌ ಬಳಸುತ್ತಿದ್ದಾರೆ. ಏಷ್ಯಾ ವಲಯದಲ್ಲಿಯೇ ಅತಿ ಹೆಚ್ಚಿನ ಫೇಸ್‌ಬುಕ್‌ ಬಳಕೆದಾರರಿದ್ದಾರೆ  ಎಂದು ಕಂಪೆನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT