ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2016ರ ಟಿ –20 ಕ್ರಿಕೆಟ್ ವಿಶ್ವಕಪ್‌ಗೆ ಭಾರತದ ಆತಿಥ್ಯ

Last Updated 29 ಜನವರಿ 2015, 13:19 IST
ಅಕ್ಷರ ಗಾತ್ರ

ದುಬೈ (ಐಎಎನ್‌ಎಸ್) : 2016ರ ಮಾರ್ಚ್‌ 11ರಿಂದ ಏಪ್ರಿಲ್ 3ರ ತನಕ ನಡೆಯಲಿರುವ ಟ್ವಂಟಿ –20 ವಿಶ್ವಕಪ್‌ ಕ್ರಿಕೆಟ್‌ಗೆ ಭಾರತ ಆತಿಥ್ಯವನ್ನು ವಹಿಸಲಿದೆ.

ದುಬೈನಲ್ಲಿ ನಡೆದ ಐಸಿಸಿ  (ಅಂತರರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ) ಮಂಡಳಿ  ಸಭೆಯು ಈ  ದಿನಾಂಕವನ್ನು ಒಪ್ಪಿಕೊಂಡು ಗುರುವಾರ ಘೋಷಿಸಿತು. 2019ರ 50ಓವರ್‌ಗಳ  ಏಕದಿನ ವಿಶ್ವಕಪ್ ಕ್ರಿಕೆಟ್‌ ಇಂಗ್ಲೆಂಡ್‌ನ ಆತಿಥ್ಯದಲ್ಲಿ ಮೇ 30 ರಿಂದ ಜೂನ್‌ 15ರವರೆಗೆ ನಡೆಯಲಿದೆ.

ವಿಶ್ವಕಪ್‌ನ ಫೈನಲ್‌ ಪಂದ್ಯ ‘ಟೈ’ ಆದರೆ ಸೂಪರ್‌ ಓವರ್ : ದುಬೈಯಲ್ಲಿ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ಮತ್ತೊಂದು ತೀರ್ಮಾನವನ್ನು ಕೈಗೊಂಡಿತು. ವಿಶ್ವಕಪ್ ಫೈನಲ್ ಪಂದ್ಯವು ಟೈ ಆದರೆ  ಅದಕ್ಕೆ ಸೂಪರ್‌ ಓವರ್‌ನ ಮೂಲಕ ಪಂದ್ಯದ ಫಲಿತಾಂಶವನ್ನು ಕಂಡುಕೊಳ್ಳಲಾಗುವುದು ಎಂದು ಸಭೆಯು ತೀರ್ಮಾನ ತೆಗೆದುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT