ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2016: ಆರು ತಿಂಗಳಲ್ಲಿ ದಾಖಲೆಯ ತಾಪಮಾನ

Last Updated 20 ಜುಲೈ 2016, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಈ ವರ್ಷದ ಜನವರಿಯಿಂದ ಜೂನ್‌ವರೆಗಿನ ಅವಧಿಯಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ತಿಳಿಸಿದೆ.

1979ರಿಂದ ಈಚೆಗೆ ನಾಸಾ ಉಪಗ್ರಹ ಆಧಾರಿತ ದತ್ತಾಂಶಗಳನ್ನು ಸಂಗ್ರಹಿಸತೊಡಗಿದ ಮೇಲೆ ಇಲ್ಲಿಯವರೆಗಿನ ಅತಿ ಹೆಚ್ಚು ಮತ್ತು ಅತ್ಯಂತ ಕಡಿಮೆ ದಾಖಲೆಯ ತಾಪಮಾನ ಇದಾಗಿದೆ. ಆರ್ಕಿಟಿಕ್‌ ಸಮುದ್ರದಲ್ಲಿ ಅತ್ಯಂತ ಕಡಿಮೆ ಉಷ್ಣಾಂಶ ದಾಖಲಾಗಿದೆ 

ಅಮೆರಿಕದ ಬಾಹ್ಯಾಕಾಶ ಸಂಸ್ಥೆಯ  ಭೂ ಆಧಾರಿತ ವೀಕ್ಷಣೆಗಳ ವಿಶ್ಲೇಷಣೆಗಳು ಹಾಗೂ ಉಪಗ್ರಹ ದತ್ತಾಂಶಗಳ ಪ್ರಕಾರ,  ಎರಡು ಪ್ರಮುಖ ವಾತಾವರಣ ಬದಲಾವಣೆ ಸೂಚಕಗಳಾದ ಜಾಗತಿಕ ಮೇಲ್ಮೈ ತಾಪಮಾನ ಹಾಗೂ ಆರ್ಕಿಟಿಕ್‌ ಸಮುದ್ರ ಪ್ರದೇಶಗಳಲ್ಲಿ 2016ರ ಅರ್ಧ ವರ್ಷದಲ್ಲಿ ಅನೇಕ ದಾಖಲೆಗಳನ್ನು ಮುರಿದಿದೆ.
ಅಮೆರಿಕದಲ್ಲಿನ ನಾಸಾದ ಗೊಡ್ಡಾರ್ಡ್‌ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ಈ ಅಧ್ಯಯನವನ್ನು ನಡೆಸಿದೆ.

19ನೇ ಶತಮಾನಕ್ಕೆ ಹೋಲಿಸಿದರೆ 2016ರ ಜನವರಿಯಿಂದ ಜೂನ್‌ವರೆಗೆ ಸರಾಸರಿ 1.3 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.
ಈ ಎರಡು ಬೆಳವಣಿಗೆಗಳು    ಮಹತ್ವದ್ದಾಗಿದ್ದು,  ಜಾಗತಿಕ ಹವಾಮಾನ ವೈಪರೀತ್ಯ ಮುಂದುವರಿಯುವ ಸೂಚನೆ ನೀಡಿವೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.
ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್‌ ಹಾಗೂ ಹಸಿರು ಮನೆ ಅನಿಲಗಳು ಹೆಚ್ಚಳ ಆಗಿರುವುದೇ ಈ ಬೆಳವಣಿಗೆಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ಜೂನ್‌ನಲ್ಲಿ ದಾಖಲೆ ತಾಪಮಾನ

137 ವರ್ಷಗಳಿಗೆ ಹೋಲಿಸಿದರೆ ಕಳೆದ ಜೂನ್‌ ತಿಂಗಳಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿದೆ ಎಂದು ಅಮೆರಿಕದ ಹವಾಮಾನ ತಜ್ಞರು ತಿಳಿಸಿದ್ದಾರೆ.
ಭೂಮಿಯ ಮೇಲ್ಮೈ ಹೆಚ್ಚು ಬೆಚ್ಚಗಿದ್ದರಿಂದ ಜೂನ್‌ ತಿಂಗಳಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ. 1880ರಿಂದ ಮೊದಲ ಬಾರಿಗೆ ಭೂಮಿಯ ಮೇಲ್ಮೈ ತಾಪಮಾನ ಅಧಿಕವಾಗಿದೆ.


ಜೂನ್‌ನಲ್ಲಿ ದಾಖಲಾದ ತಾಪಮಾನವು 20ನೇ ಶತಮಾನದ ಸರಾಸರಿ ಉಷ್ಣಾಂಶಕ್ಕಿಂತ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT