, ಲಾಕರ್‌ ತೆರೆಯಲು ನಕಲಿ ಕೀ ಬಳಕೆ | ಪ್ರಜಾವಾಣಿ
ಡಿ.ಕೆ. ಶಿವಕುಮಾರ್‌ ಮನೆ ಮೇಲೆ ಐಟಿ ದಾಳಿ

ಲಾಕರ್‌ ತೆರೆಯಲು ನಕಲಿ ಕೀ ಬಳಕೆ

ಐಟಿ ದಾಳಿ ವೇಳೆ ಶಿವಕುಮಾರ್‌ ಅವರ ಸದಾಶಿವನಗರ ನಿವಾಸದಲ್ಲಿ 5 ಲಾಕರ್‌ಗಳು ಪತ್ತೆಯಾಗಿದ್ದವು. ಬುಧವಾರ ಎರಡು ಲಾಕರ್‌ಗಳನ್ನು ತೆರೆದು ಅದರಲ್ಲಿದ್ದ ವಸ್ತುಗಳನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು...

ಲಾಕರ್‌ ತೆರೆಯಲು ನಕಲಿ ಕೀ ಬಳಕೆ

ಬೆಂಗಳೂರು: ಸಚಿವ ಡಿ.ಕೆ. ಶಿವಕುಮಾರ್‌ ಅವರ ಮನೆಯ ಮೇಲೆ ಬುಧವಾರ ದಾಳಿ ನಡೆಸಿದ್ದ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ಗುರುವಾರವೂ ಕೂಡಾ ಅವರ ಮನೆಯಲ್ಲಿ ತಪಾಸಣೆ ಮುಂದುವರಿಸಿದ್ದಾರೆ. ಶಿವಕುಮಾರ್‌ ಅವರ ಮನೆಯಲ್ಲಿದ್ದ ಲಾಕರ್‌ಗಳನ್ನು ತೆಗೆಯಲು ನಕಲಿ ಕೀಲಿಗಳನ್ನು ಬಳಸಲಾಗಿದೆ.

ಐಟಿ ದಾಳಿ ವೇಳೆ ಶಿವಕುಮಾರ್‌ ಅವರ ಸದಾಶಿವನಗರ ನಿವಾಸದಲ್ಲಿ 5 ಲಾಕರ್‌ಗಳು ಪತ್ತೆಯಾಗಿದ್ದವು. ಬುಧವಾರ ಎರಡು ಲಾಕರ್‌ಗಳನ್ನು ತೆರೆದು ಅದರಲ್ಲಿದ್ದ ವಸ್ತುಗಳನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇನ್ನುಳಿದ ಮೂರು ಲಾಕರ್‌ಗಳನ್ನು ತೆರೆಯಲು ಅಧಿಕಾರಿಗಳು ನಕಲಿ ಕೀಲಿಗಳನ್ನು ಬಳಸಿದ್ದಾರೆ. ಲಾಕರ್‌ ತೆರೆಯಲು ನಕಲಿ ಕೀಲಿಗಳನ್ನು ತಯಾರಿಸುವವರನ್ನು ಕರೆತಂದ ಅಧಿಕಾರಿಗಳು ಅವರ ಸಹಾಯದಿಂದ ಲಾಕರ್‌ಗಳನ್ನು ತೆರೆದಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ – ಪರಮೇಶ್ವರ್‌ ಮಾತುಕತೆ
ಶಿವಕುಮಾರ್‌ ಅವರ ಮನೆಗಳ ಮೇಲೆ ಐಟಿ ದಾಳಿ ನಡೆದಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದ ಪರಮೇಶ್ವರ್‌ ಸುಮಾರು ಹೊತ್ತು ಈ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಈಗಲ್ ಟನ್ ರೆಸಾರ್ಟ್‌ಗೆ ಶಾಸಕ ಬಾಲಕೃಷ್ಣ ಭೇಟಿ
ರಾಮನಗರ: ‘ಸಚಿವ ಡಿ.ಕೆ. ಶಿವಕುಮಾರ್ ಮೇಲಿನ ಐ.ಟಿ. ದಾಳಿಯು ಅವರನ್ನು ಮಾನಸಿಕವಾಗಿ ಕುಗ್ಗಿಸುವ ರಾಜಕೀಯ ಪ್ರೇರಿತ ದಾಳಿಯಾಗಿದೆ’ ಎಂದು ಜೆಡಿಎಸ್ ಬಂಡಾಯ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.

ಈಗಲ್ ಟನ್ ರೆಸಾರ್ಟ್ ಬಳಿ ಗುರುವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ‘ಸಂಸದ ಡಿ.ಕೆ. ಸುರೇಶ್ ಅವರನ್ನು ರೆಸಾರ್ಟ್ ಒಳಗೆ ಭೇಟಿ ಮಾಡಿ ಧೈರ್ಯ ಹೇಳಿದ್ದೇನೆ. ರೆಸಾರ್ಟಿನಲ್ಲಿ ಏನೂ ಸಿಗುವುದಿಲ್ಲ ಎಂದು ಐ.ಟಿ. ಅಧಿಕಾರಿಗಳಿಗೆ ಗೊತ್ತಿದ್ದೂ ಹೆದರಿಸುವ ಸಲುವಾಗಿ ದಾಳಿ ನಡೆಸಿದ್ದಾರೆ. ಈ ಮೂಲಕ ಡಿ.ಕೆ. ಶಿವಕುಮಾರ್ ಅವರನ್ನು ಇಡೀ ದೇಶದಲ್ಲೇ ಹೀರೊ ಮಾಡಿದ್ದಾರೆ’ ಎಂದು ಅವರು ಹೇಳಿದರು.

‘ಕೇಂದ್ರದಲ್ಲಿ ಈಗ ಬಿಜೆಪಿ ಅಧಿಕಾರದಲ್ಲಿದೆ. ಮುಂದೆ ಕಾಂಗ್ರೆಸ್ ಕೂಡ ಅಧಿಕಾರಕ್ಕೆ ಬರಬಹುದು ಎಂಬುದನ್ನು ಅವರು ಮರೆಯಬಾರದು. ಐದಾರು ಮಂದಿ ಗುಜರಾತ್ ಶಾಸಕರ ಜೊತೆಯೂ ಮಾತನಾಡಿದೆ. ಅವರು ಆರಾಮವಾಗಿ ಇದ್ದಾರೆ’ ಎಂದು ಹೇಳಿದರು.

Comments
ಈ ವಿಭಾಗದಿಂದ ಇನ್ನಷ್ಟು
ಕುಡಿಯಲು ಕೊಡುತ್ತಾರೆಂದು ಮತಾಂತರ!

ಸಂತ ಸಮಾವೇಶದಲ್ಲಿ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ
ಕುಡಿಯಲು ಕೊಡುತ್ತಾರೆಂದು ಮತಾಂತರ!

26 Feb, 2018

ರಾಜ್ಯ
ಹೆಣ್ಣು ಶಿಶು ಮಾರಾಟ: ಆಶಾ ಕಾರ್ಯಕರ್ತೆಯೇ ಮಧ್ಯವರ್ತಿ!

ಚಿಂಚೋಳಿ ತಾಲ್ಲೂಕಿನ ಚಂದು ನಾಯಕ ತಾಂಡಾದಲ್ಲಿ ಹೆಣ್ಣು ಶಿಶುವಿನ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರು ಹಾಗೂ ಮಧ್ಯವರ್ತಿಯಾಗಿದ್ದ ಆಶಾ ಕಾರ್ಯಕರ್ತೆ ಸೇರಿ ಐದು ಮಂದಿಯನ್ನು...

26 Feb, 2018
ಮಹಾಮಜ್ಜನ ಸಂಪನ್ನ

2030ಕ್ಕೆ 89ನೇ ಭಕ್ತಿ ಭಾವ ಧಾರೆ
ಮಹಾಮಜ್ಜನ ಸಂಪನ್ನ

26 Feb, 2018
‘ಅಲ್ಪಸಂಖ್ಯಾತರಲ್ಲಿ ವಿವಾಹ ನಂತರದ ಕೌಶಲ ಹೆಚ್ಚಿದೆ’

ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ್‌ ಹೆಗಡೆ ವ್ಯಂಗ್ಯ
‘ಅಲ್ಪಸಂಖ್ಯಾತರಲ್ಲಿ ವಿವಾಹ ನಂತರದ ಕೌಶಲ ಹೆಚ್ಚಿದೆ’

26 Feb, 2018
ರಾಹುಲ್–ಶಾ ಜಟಾಪಟಿ

ಜನಾಶೀರ್ವಾದ ಯಾತ್ರೆಯಲ್ಲಿ ಮೋದಿ ವಿರುದ್ಧ ಕಾಂಗ್ರೆಸ್‌ ಅಧ್ಯಕ್ಷ ವಾಗ್ದಾಳಿ
ರಾಹುಲ್–ಶಾ ಜಟಾಪಟಿ

26 Feb, 2018