ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2050ರ ಹೊತ್ತಿಗೆ ವಿಶ್ವದಲ್ಲಿ ಆಹಾರ ಅಭಾವ

Last Updated 18 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌(ಐಎಎನ್‌ಎಸ್‌):  ಆಹಾರ ಭದ್ರತೆ ಬಗ್ಗೆ ತೀವ್ರವಾಗಿ ಚರ್ಚಿಸುತ್ತಿರುವ ಈ ಹೊತ್ತಿನಲ್ಲಿ ನಿಜಕ್ಕೂ ಇದೊಂದು ಆಘಾತಕಾರಿ ವಿಷಯ. ಇನ್ನು 40 ವರ್ಷಗಳಲ್ಲಿ, ಅಂದರೆ ೨೦50ರೊಳಗೆ  ವಿಶ್ವದಲ್ಲಿ ತೀವ್ರ  ಆಹಾರ ಕೊರತೆ ಎದುರಾಗಲಿದೆ ಎಂದು ಅಂತರರಾಷ್ಟ್ರೀಯ ಅಭಿವೃದ್ಧಿಗೆ ಸಂಬಂಧಿಸಿದ ಅಮೆರಿಕ ಸಂಸ್ಥೆಯೊಂದರ ವಿಜ್ಞಾನಿಗಳ ವರದಿ ಹೇಳಿದೆ.

ಆಹಾರ ಕೊರತೆಯಿಂದ ಜನ ಮತ್ತು ಸರ್ಕಾರಗಳ ಮೇಲೆ ಗಂಭೀರ ಪರಿಣಾಮ  ಉಂಟಾಗಲಿದೆ ಎಂದು ವರದಿ ಎಚ್ಚರಿಸಿದೆ.
‘ಮಾನವ ಇತಿಹಾಸದಲ್ಲಿ ಮೊದಲ ಬಾರಿಗೆ ಆಹಾರ ಉತ್ಪಾದನೆಯು ಭೂಮಿ, ನೀರು, ಮತ್ತು ಶಕ್ತಿ ಸಂಪನ್ಮೂಲಗಳ ಕೊರತೆ ಕಾರಣ ಮಿತಗೊ­ಳ್ಳಲಿದೆ’ ಎಂದು ಸಂಸ್ಥೆಯ ಹಿರಿಯ ವೈಜ್ಞಾನಿಕ ಸಲಹೆಗಾರ ಫ್ರೆಡ್‌ ಡೇವಿಸ್‌ ಹೇಳಿದ್ದಾರೆ.

‘ಪ್ರಸ್ತುತ ಇಂಧನ ಸಮಸ್ಯೆ ರೀತಿಯಲ್ಲಿಯೇ 2050ರ ವೇಳೆಗೆ ಆಹಾರ ಸಮಸ್ಯೆಗಳು ಅಸ್ಥಿರತೆ ಉಂಟು­ಮಾಡುವ ಸಾಧ್ಯತೆ ಇದೆ’ ಎಂದು ಉತ್ತರ ಅಮೆ­ರಿಕ ಕೃಷಿ ಪತ್ರಕರ್ತರ ಸಭೆಯಲ್ಲಿ ಅವರು ತಿಳಿಸಿದರು. ಡೇವಿಸ್‌ ಪ್ರಕಾರ, ವಿಶ್ವದ ಜನಸಂಖ್ಯೆ ಈ ಶತಮಾನದ ಮಧ್ಯ ಭಾಗದಲ್ಲಿ ಶೇ30ರಷ್ಟು ಏರಿಕೆಯಾಗಲಿದೆ. ಇದರಿಂದಾಗಿ ಶೇ 70ರಷ್ಟು ಆಹಾರಕ್ಕೆ ಬೇಡಿಕೆ ಹೆಚ್ಚುತ್ತದೆ.

ಜಗತ್ತಿನಲ್ಲಿ ಎಂಟು ಜನರಲ್ಲಿ ಒಬ್ಬರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಶೇ೭೫ರಷ್ಟು ಕಡುಬಡವರು ಚೀನಾ, ಭಾರತ, ಬ್ರೆಜಿಲ್‌ ಹಾಗೂ ಫಿಲಿಪ್ಪೀನ್ಸ್‌ನಂಥ ಮಧ್ಯಮ ಪ್ರಮಾಣದ ಆದಾಯ ಹೊಂದಿರುವ ದೇಶಗಳಲ್ಲಿದ್ದಾರೆ.

‘ಸಂಪನ್ಮೂಲ ಕೊರತೆ ವಿಶ್ವದ ಆಹಾರ ಪದ್ಧತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.  ಜೈವಿಕ ತಂತ್ರಜ್ಞಾನ, ತಳಿಶಾಸ್ತ್ರ, ಕೃಷಿ ಅರ್ಥಶಾಸ್ತ್ರ ಹಾಗೂ ತೋಟಗಾರಿಕೆಯಿಂದ ಆಹಾರ ಉತ್ಪಾದನೆ ಹೆಚ್ಚಿಸಬಹುದೆಂದು ಹೇಳಲಾಗುತ್ತಿದೆ. ಆದರೆ ಆಹಾರ ಬೇಡಿಕೆ ಪೂರೈಕೆಗೆ ಇವಿಷ್ಟೇ ಸಾಲದು’ ಎಂದು ಡೇವಿಸ್‌್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT