ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

23 ಆರೋಪಿಗಳ ವಿರುದ್ಧ ಗೂಂಡಾ ಪ್ರಕರಣ

ರಂಜಾನ್‌ ಪ್ರಯುಕ್ತ ನಡೆದ ಶಾಂತಿ ಸಮಿತಿ ಸಭೆಯಲ್ಲಿ ಎಸ್‌ಪಿ ರವಿ ಚನ್ನಣ್ಣನವರ ಮಾಹಿತಿ
Last Updated 6 ಜುಲೈ 2016, 8:54 IST
ಅಕ್ಷರ ಗಾತ್ರ

ಶಿವಮೊಗ್ಗ:  ‘ಕಳೆದ ಒಂದು ವರ್ಷದ ಅವಧಿಯಲ್ಲಿ 23 ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. 17 ಗೂಂಡಾಗಳನ್ನು ಗಡಿಪಾರು ಮಾಡಲಾಗಿದೆ. ಸಮಾಜದ ಶಾಂತಿ–ಸುವ್ಯವಸ್ಥೆಗೆ ಧಕ್ಕೆ ತರುವ ಯಾರನ್ನೂ ಸುಮ್ಮನೆ ಬಿಡುವುದಿಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ಎಚ್ಚರಿಕೆ ನೀಡಿದರು.

ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಮಂಗಳವಾರ ರಂಜಾನ್  ಹಿನ್ನೆಲೆಯಲ್ಲಿ ನಡೆದ ಜಿಲ್ಲಾ ಶಾಂತಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
‘ಸಮಾಜದ ನೆಮ್ಮದಿಗೆ ಭಂಗ ತರುವ ಹಲವರ ಪಟ್ಟಿ ಸಿದ್ಧಪಡಿಸಲಾಗಿದೆ. ಅವರ ವಿರುದ್ಧ ಶೀಘ್ರ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗುವುದು’ ಎಂದರು.

‘ಹಬ್ಬಗಳ ಆಚರಣೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳ ಲಾಗುವುದು. ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಎಲ್ಲರೂ ಸೌಹಾರ್ದವಾಗಿ ಹಬ್ಬ ಆಚರಿಸಬೇಕು’ ಎಂದರು.

‘ಮುಸ್ಲಿಂ ಸಮುದಾಯದ ಮಂದಿ ತಮ್ಮಲ್ಲಿನ ಒಳ ಜಗಳ, ಸಮಸ್ಯೆಗಳನ್ನು ತಾವೇ ಶಾಂತಿಯುತವಾಗಿ ಬಗೆಹರಿಸಿ ಕೊಳ್ಳಬೇಕು. ಕಾನೂನು ಕೈಗೆ ತೆಗೆದುಕೊಳ್ಳಬಾರದು. ಹಬ್ಬ ಅಥವಾ ಯಾವುದೇ ಸಂದರ್ಭ ಇದ್ದರೂ ಪೊಲೀಸ್ ಇಲಾಖೆ  ಶಾಂತಿ ಕಾಪಾಡಲು ಸನ್ನದ್ಧವಾಗಿರುತ್ತದೆ’ ಎಂದರು.

ನಿರಂತರ 1,500 ಸಭೆಗಳು: ‘ಜಿಲ್ಲಾ ಪೊಲೀಸರು ಸದಾ ಸಾರ್ವಜನಿಕರಿಗೆ ಹತ್ತಿರವಾಗುವ ಪ್ರಯತ್ನ ಮಾಡು ತ್ತಿದ್ದಾರೆ. ಈಗಾಗಲೇ 1,500ಕ್ಕೂ ಅಧಿಕ ಕುಂದು–ಕೊರತೆ ಹಾಗೂ ಶಾಂತಿ ಸಭೆ ನಡೆಸಲಾಗಿದೆ. ಶಾಲೆ ಆಡಳಿತ ಮಂಡಳಿ, ಚಾಲಕರು, ವ್ಯಾಪಾರಸ್ಥರು ಹೀಗೆ ಎಲ್ಲ ವರ್ಗದ  ಜನರ ಜತೆ ಸಭೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯಸ್ಥೆಗೆ ಧಕ್ಕೆ ತರಲು ಯಾರೇ ಪ್ರಯತ್ನಿಸಿದರೂ  ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

‘ಯಾವುದೇ ಸಂಘಟನೆ ಹಿಂಸೆಗೆ ಪ್ರಚೋದನೆ ನೀಡುವುದು, ಗಲಾಟೆ ಗಳಿಗೆ ಕಾರಣವಾಗುವುದು, ಗುಪ್ತ ಸಭೆ ಸಂಘಟಿಸುವುದು ಸಲ್ಲದು. ಇಂತಹ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದು, ವ್ಯಕ್ತಿಗಳ ಪೂರ್ವಾಪರ ಕಲೆ ಹಾಕ ಲಾಗಿದೆ’ ಎಂದು  ಮಾಹಿತಿ ನೀಡಿದರು.

ನಗರದ ವ್ಯವಸ್ಥೆ ಸುಧಾರಿಸಲು ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 80 ಕಡೆಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇನ್ನೂ 20 ಕಡೆಗಳಲ್ಲಿ ಸಿಸಿ ಟಿ.ವಿ ಕ್ಯಾಮೆರಾ ಶೀಘ್ರ ಅಳವಡಿಸಲಾಗುವುದು. ಅತಿವೇಗವಾಗಿ ಬೈಕ್ ಚಾಲನೆ ಮಾಡು ವವರು, ಒಂದೇ ಬೈಕ್‌ನಲ್ಲಿ ಮೂರು ಮಂದಿ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಸುಗಮ ಸಂಚಾರಕ್ಕೆ   ಕ್ರಮ ಕೈಗೊಳ್ಳಲಾಗಿದೆ. ಸಂಚಾರ ವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನಾಗರಿಕರು ಸಂಪೂರ್ಣ ಸಹಕಾರ ನೀಡಬೇಕು’ ಎಂದು ಕೋರಿದರು.

ಮೇಯರ್ ಎಸ್.ಕೆ. ಮರಿಯಪ್ಪ ಮಾತನಾಡಿ, ಶಾಂತಿ ಕಾಪಾಡುವುದು ನಮ್ಮೆಲ್ಲರ ಹೊಣೆ. ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ನಾವೆಲ್ಲರೂ ಸಹಕಾರ ನೀಡುತ್ತೇವೆ. ಶಾಂತಿ ಕದಡಲು ಪ್ರಯತ್ನಿಸಿದರೆ, ಅಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಹಲವು ಸಂಘಟನೆಗಳ ಪ್ರಮುಖರು ಸಲಹೆಗಳನ್ನು ನೀಡಿದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತಕುಮಾರ್, ತಹಶೀಲ್ದಾರ್ ಸತ್ಯನಾರಾಯಣ್, ಪಾಲಿಕೆ ಆಯುಕ್ತೆ ತುಷಾರ ಮಣಿ, ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ ಉಪಸ್ಥಿತರಿದ್ದರು.
***
ಮುಸ್ಲಿಂ ಸಮಾಜದ ಜನರು ತಮ್ಮಲ್ಲಿನ ಒಳ ಜಗಳ, ಸಮಸ್ಯೆಗಳನ್ನು ತಾವೇ ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು. ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು.
–ರವಿ ಡಿ.ಚನ್ನಣ್ಣನವರ,  ಎಸ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT