ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2,485 ದಿನಗೂಲಿ ನೌಕರರಿಗೆ ಸೇವಾ ಭದ್ರತೆ

ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಸೇರಿದಂತೆ ಹಲವು ಸೌಲಭ್ಯ
Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ­­ಯತ್‌ ರಾಜ್‌ ಇಲಾ­ಖೆಯ 2,485 ದಿನಗೂಲಿ ನೌಕರರನ್ನು ಕರ್ನಾ­ಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಕಾಯ್ದೆಯ ವ್ಯಾಪ್ತಿಗೆ ತಂದು, ಸೇವಾ ಭದ್ರತೆ ಒದಗಿಸಲಾಗಿದೆ ಎಂದು ಗ್ರಾಮೀ­ಣಾಭಿವೃದ್ಧಿ ಮತ್ತು ಪಂಚಾ­ಯತ್‌ ರಾಜ್‌ ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ಗುರುವಾರ ವಿಧಾನಸಭೆಯಲ್ಲಿ ಪತ್ರಕ­ರ್ತರ ಜೊತೆ ಮಾತನಾಡಿದ ಅವರು, ‘ದಿನ­ಗೂಲಿ ನೌಕರರಿಗೆ ಸಾಮಾಜಿಕ ಭದ್ರತೆ ಒದಗಿಸಲು ಈ ಕಾಯ್ದೆ ಜಾರಿಗೆ ತರ­ಲಾಗಿದೆ. ಈ 2006ರ   ಏಪ್ರಿಲ್‌ 10ಕ್ಕೆ ಹತ್ತು ವರ್ಷ ಸೇವೆ ಪೂರೈಸಿದ ದಿನಗೂಲಿ ನೌಕರರನ್ನು ಈ ಕಾಯ್ದೆಯ ವ್ಯಾಪ್ತಿಗೆ ತಂದು ಅಧಿಸೂಚನೆ ಹೊರಡಿ­ಸ­ಲಾಗಿದೆ’ ಎಂದರು.

ನೌಕರರು ಸಲ್ಲಿಸಿದ್ದ ಅರ್ಜಿಗಳನ್ನು ಪರಿ­ಶೀಲಿ­ಸಿದ ಬಳಿಕ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಯಾವುದೇ ನೌಕ­ರರ ಹೆಸರು ಕೈಬಿಟ್ಟು ಹೋಗಿದ್ದರೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಕಾಯ್ದೆಯ ವ್ಯಾಪ್ತಿಗೆ ಬರುವ ಎಲ್ಲ ನೌಕ­ರರಿಗೆ ಅವರ ಹುದ್ದೆಗೆ ಸರಿಸಮ­ನಾದ ವೇತನ ಶ್ರೇಣಿ, ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಮತ್ತು ರಜಾ ಸೌಲಭ್ಯ­ಗಳು ದೊರೆಯುತ್ತವೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿಗಳ ಪುನರ್‌­ವಿಂಗ­ಡಣೆ ಕುರಿತು ಮಾಜಿ ಶಾಸಕ ನಂಜ­ಯ್ಯ­ನ­ಮಠ ನೇತೃತ್ವದ ಸಮಿತಿ ವರದಿ ಸಲ್ಲಿ­ಸಿದೆ. ರದಿಯನ್ನು ಶೀಘ್ರ­ದಲ್ಲೇ ಸಚಿವ ಸಂಪುಟ ಸಭೆಯ ಮುಂದಿಡಲಾ­ಗು­ವುದು. ಸಂಪುಟದ ಒಪ್ಪಿಗೆ ದೊರೆತ ಬಳಿಕ ಗ್ರಾಮ ಪಂಚಾಯಿ­ತಿಗಳ ಪುನರ್‌­ವಿಂಗ-ಡಣೆ ಸಂಬಂಧ ಆಕ್ಷೇಪಣೆ ಆಹ್ವಾ­ನಿ­ಸ­­ಲಾ­ಗುವುದು. ಅಂತಿಮವಾಗಿ ವಿಂಗ­ಡಣೆ ಕುರಿತು ಆದೇಶ ಹೊರಡಿ­ಸಲಾ­ಗು­ವುದು ಎಂದರು.

ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಸ್ಥಾನಕ್ಕೆ ನೇರ ಚುನಾವಣೆ ನಡೆಸಬೇಕು ಎಂದು ಈ ಸಮಿತಿ ಶಿಫಾರಸು ಮಾಡಿದೆ. ಆದರೆ, ಪಂಚಾಯತ್‌ ರಾಜ್‌ ವ್ಯವಸ್ಥೆ ಸುಧಾ­ರಣೆ ಕುರಿತು ಶಾಸಕ ಕೆ.ಆರ್‌. ರಮೇಶ್‌­ಕುಮಾರ್‌ ನೇತೃತ್ವದ ಸಮಿತಿ ಅಧ್ಯ­ಯನ ನಡೆಸುತ್ತಿದೆ. ಈ ಸಮಿತಿಯ ವರದಿ ಬಂದ ಬಳಿಕ ನಿರ್ಧಾರ ಕೈಗೊಳ್ಳ­ಲಾ­ಗುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT