ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ಸೈನಿಕರ ಹತ್ಯೆ ವಿಡಿಯೋ ಬಿಡುಗಡೆ

Last Updated 5 ಜುಲೈ 2015, 11:04 IST
ಅಕ್ಷರ ಗಾತ್ರ

ಬೈರೂತ್‌ (ಎಪಿ): ಸಿರಿಯಾದ ಬಹು ಭಾಗವನ್ನು ಆಕ್ರಮಿಸಿಕೊಂಡಿರುವ ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಸಿರಿಯಾ ಸರ್ಕಾರದ 25 ಸೈನಿಕರನ್ನು ಸಾಮೂಹಿಕವಾಗಿ ಗುಂಡಿಕ್ಕಿ ಹತ್ಯೆ ಮಾಡಿರುವ ವಿಡಿಯೋವನ್ನು ಪ್ರಕಟಿಸಿದ್ದಾರೆ.

ಇಲ್ಲಿನ ಪುರಾತನ ಪಲ್‌ಮೈರಾ ನಗರದಲ್ಲಿನ ಆ್ಯಂಪಿ ಥಿಯೇಟರ್‌ ಮುಂಭಾಗದಲ್ಲಿ ಸಿರಿಯಾದ 25 ಸೈನಿಕರನ್ನು ಸಾಲಾಗಿ ನಿಲ್ಲಿಸಿ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಹತ್ಯೆಯನ್ನು ನೂರಾರು ನಾಗರಿಕರು, ಮೂಕ ಪ್ರೇಕ್ಷರಾಗಿ ನೋಡುತ್ತಿರುವುದು ಆ ವಿಡಿಯೋದಲ್ಲಿ ದಾಖಲಾಗಿದೆ. 

ಈ ಘಟನೆ ಯಾವಾಗ ನಡೆದಿದೆ ಎಂಬುದು ತಿಳಿದು ಬಂದಿಲ್ಲ, ಆದರೆ ಬ್ರಿಟನ್‌ನ ಮಾನವ ಹಕ್ಕುಗಳ ಸಂಘಟನೆಯೊಂದು ಈ ಘಟನೆ ಮೇ, 27ರಂದು ನಡೆದಿದೆ ಎಂದು ತಿಳಿಸಿದೆ.

ಮೃತ ಸೈನಿಕರು ಐಎಸ್‌ ಉಗ್ರರ ಬಳಿ ಹಲವು ದಿನಗಳಿಂದ ಒತ್ತೆಯಾಳುಗಳಾಗಿದ್ದರು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT