ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26 ತಮಿಳರ ಬಂಧನ

ಆಸ್ಟ್ರೇಲಿಯಾಗೆ ಅಕ್ರಮ ಪ್ರಯಾಣ
Last Updated 3 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಚೆನ್ನೈ(ಪಿಟಿಐ): ದೋಣಿ ಮೂಲಕ ಆಸ್ಟ್ರೇಲಿಯಾಕ್ಕೆ ಅಕ್ರಮವಾಗಿ ಪ್ರಯಾ­ಣಿ­ಸುತ್ತಿದ್ದ  ಶ್ರೀಲಂಕಾದ 26 ತಮಿಳ­ರನ್ನು ಅಂಡಮಾನ್‌ ಬಳಿ, ಭಾರ­ತೀಯ ಸಾಗರ ಭದ್ರತಾ ಪಡೆಯವರು ಬಂಧಿಸಿ ಅವ­ರನ್ನು ಗುರುವಾರ ಪುನಃ ಶ್ರೀಲಂಕಾಗೆ ಕಳುಹಿಸಿದ್ದಾರೆ.

ಅಕ್ರಮವಾಗಿ ಪ್ರಯಾಣ ಬೆಳೆಸಿದ್ದ 26 ಜನರನ್ನು ಅಂಡಮಾನ್ ಪೊಲೀಸರು ಇಲ್ಲಿಗೆ ಕರೆತಂದು ಸ್ಪೈಸ್‌ ಜೆಟ್ ವಿಮಾನದ ಮೂಲಕ ಶ್ರೀಲಂಕಾಗೆ ಮರಳಿ ಕಳುಹಿಸಿದ್ದಾರೆ ಎಂದು ಚೆನ್ನೈನ ವಿಮಾ ನಿಲ್ದಾಣದ ಮೂಲಗಳು ತಿಳಿಸಿವೆ.

ಕಡಲು ಭದ್ರತಾ ಸಿಬ್ಬಂದಿ ಎರಡು ದಿನಗಳ ಹಿಂದೆ ಗಸ್ತಿನಲ್ಲಿದ್ದಾಗ 26 ಜನರು ದೋಣಿಯಲ್ಲಿ ಪ್ರಯಾ­ಣಿ­ಸು­ತ್ತಿದ್ದರು. ನಂತರ ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಕೆಲಸ ಹುಡುಕಾಟ­ಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳುತ್ತಿರು­ವು­ದಾಗಿ ತಿಳಿಸಿದ್ದಾರೆ. ಅಲ್ಲದೇ, ಅವರನ್ನೆಲ್ಲ ಆಸ್ಟ್ರೇಲಿಯಾಕ್ಕೆ ಬಿಡಲು ದೋಣಿ ನಿರ್ವಾಹಕನಿಗೆ ಲಕ್ಷಾಂತರ ಹಣ ಕೊಟ್ಟಿರುವುದಾಗಿ ತಿಳಿಸಿದ್ದಾರೆ. 

ಶ್ರೀಲಂಕಾದಲ್ಲಿ 2009ರಲ್ಲಿ ನಡೆದ ನಾಗರಿಕ ಯುದ್ಧದ ನಂತರ ಲಂಕಾ ತಮಿಳರು ಕೆಲಸ ಹುಡುಕಲು ಆಸ್ಟ್ರೇ­ಲಿಯಾಗೆ ಅಕ್ರಮವಾಗಿ ವಲಸೆ ಹೋಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT