ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ನೇ ಟೆಸ್ಟ್‌: ಆಮ್ಲಾ ಬಳಗಕ್ಕೆ 310 ರನ್‌ಗಳ ಗೆಲುವಿನ ಗುರಿ

2ನೇ ಇನಿಂಗ್ಸ್‌ನಲ್ಲೂ ದ.ಆಫ್ರಿಕಾಗೆ ಆರಂಭಿಕ ಆಘಾತ
Last Updated 26 ನವೆಂಬರ್ 2015, 11:30 IST
ಅಕ್ಷರ ಗಾತ್ರ

ನಾಗಪುರ (ಪಿಟಿಐ): ವಿಕೆಟ್ ದಾಹಿ ಜಮ್ತಾ ಪಿಚ್‌ನಲ್ಲಿ ರನ್‌ ಗಳಿಸಲು ಪರದಾಡಿದ ಭಾರತ ಎರಡನೇ ಇನಿಂಗ್ಸ್‌ನಲ್ಲಿ 46.3 ಓವರ್‌ಗಳಲ್ಲಿ 173 ರನ್‌ಗಳಿಗೆ ಸರ್ವ ಪತನ ಕಂಡಿದ್ದು, ಎದುರಾಳಿ ದಕ್ಷಿಣ ಆಫ್ರಿಕಾಗೆ 310 ರನ್‌ಗಳ ಗೆಲುವಿನ ಗುರಿ ನೀಡಿದೆ.

ಬೃಹತ್ ಗೆಲುವಿನ ಗುರಿ ಬೆನ್ನಟ್ಟಿರುವ ಆಮ್ಲಾ ಪಡೆ 14 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 36 ರನ್‌ ಗಳಿಸಿದೆ.

‌ಆರಂಭಿಕ ಆಟಗಾರ ಡೀನ್ ಎಲ್ಗರ್ (10) ಹಾಗೂ ನಾಯಕ ಆಮ್ಲಾ (3) ಕ್ರೀಸ್‌ನಲ್ಲಿದ್ದಾರೆ.

ವಾನ್ ಜಿಲ್ (5) ಹಾಗೂ ಇಮ್ರಾನ್ ತಾಹೀರ್ (8) ಬೇಗನೆ ಔಟಾದರು. ಅವರು ಕ್ರಮವಾಗಿ ಆರ್. ಅಶ್ವಿನ್ ಹಾಗೂ ಅಮಿತ್ ಮಿಶ್ರಾ ಎಸೆತಗಳಲ್ಲಿ ವಿಕೆಟ್ ಒಪ್ಪಿಸಿದರು.

ಭಾರತಕ್ಕೂ ತಪ್ಪದ ಸಂಕಷ್ಟ: ಮೂರನೇ ಟೆಸ್ಟ್‌ನ ಎರಡನೇ ದಿನವಾದ ಗುರುವಾರ ಮೊದಲ ಅವಧಿಯಲ್ಲಿ ಪ್ರವಾಸಿ ಬಳಗವನ್ನು ವಿರಾಟ್ ಕೊಹ್ಲಿ ನೇತೃತ್ವದ ಪಡೆ ಅಲ್ಪ ಮೊತ್ತಕ್ಕೆ ಕಟ್ಟಿಹಾಕಿತು.

ಬಳಿಕ 136 ರನ್‌ಗಳ ಮುನ್ನಡೆ ಪಡೆದು ಬ್ಯಾಟಿಂಗ್ ಆರಂಭಿಸಿದ ಭಾರತ ಸವಾಲಿನ ಪಿಚ್‌ನಲ್ಲಿ ರನ್‌ ಕಲೆ ಹಾಕಲು ಪರದಾಡಿತು. ಯಾರೊಬ್ಬರಿಗೂ ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಕೊಹ್ಲಿ ಪಡೆ 46.3 ಓವರ್‌ಗಳಲ್ಲಿ 173 ರನ್‌ಗಳಿಗೆ ಸರ್ವಪತನ ಕಂಡು ಪ್ರವಾಸಿ ತಂಡದ ಗೆಲುವಿಗೆ 310 ರನ್‌ಗಳ ಗುರಿ ನೀಡಿತು.

ಸ್ಪಿನ್ನರ್ ಇಮ್ರಾನ್ ತಾಹೀರ್ ಐದು ವಿಕೆಟ್ ಕಬಳಿಸಿದರೆ ವೇಗಿ ಮಾರ್ನೆ ಮಾರ್ಕೆಲ್ 3 ವಿಕೆಟ್ ಪಡೆದರು. ಜೆ.ಪಿ.ಡುಮಿನಿ ಹಾಗೂ ಸಿಮನ್ ಹಾರ್ಮರ್ ತಲಾ ಒಂದು ವಿಕೆಟ್ ಪಡೆದರು.

ನಡೆಯದ ಜಾದು: ಇದಕ್ಕೂ ಮೊದಲು ಗುರುವಾರ 2 ವಿಕೆಟ್‌ಗೆ 11 ರನ್‌ಗಳಿಂದ ಆಟ ಆರಂಭಿಸಿದ ಹಾಶಿಮ್ ಆಮ್ಲಾ ಬಳಗ, ಭಾರತದ ಸ್ಪಿನ್ ದಾಳಿಗೆ ತತ್ತರಿಸಿತು. ಕೇವಲ 79 ರನ್‌ಗಳಿಗೆ ಆಲೌಟ್‌ ಆಯಿತು.

ಭಾರತದ ಪರ ಅಶ್ವಿನ್‌ ಐದು ಹಾಗೂ ಜಡೇಜ್ ನಾಲ್ಕು ವಿಕೆಟ್ ಪಡೆದು ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT