ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ಸಾವಿರಕ್ಕೂ ಹೆಚ್ಚು ಜನ ಅತಂತ್ರ

ಅಂಡಮಾನ್‌ ಸಮುದ್ರದಲ್ಲಿ ಅಲೆಯುತ್ತಿರುವ ರೋಹಿಂಗ್ಯಾ ಮುಸ್ಲಿಮರ ದೋಣಿಗಳು
Last Updated 22 ಮೇ 2015, 19:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ (ಎಪಿ): ಅಂಡಮಾನ್‌ ಸಮುದ್ರದಲ್ಲಿ ಮೂರು ಸಾವಿರ ಅಥವಾ ಅದಕ್ಕಿಂತಲೂ ಹೆಚ್ಚು ಮ್ಯಾನ್ಮಾರ್‌ನ ರೋಹಿಂಗ್ಯಾ ಮುಸ್ಲಿಮರು ಮತ್ತು ಬಾಂಗ್ಲಾದೇಶಿ ವಲಸಿಗರು ಅತಂತ್ರರಾಗಿ ಅಲೆಯುತ್ತಿರಬಹುದು ಎಂದು ವಿಶ್ವ ಸಂಸ್ಥೆ ಅಂದಾಜು ಮಾಡಿದೆ.

ಮಾಧ್ಯಮದ ವರದಿಗಳು ಮತ್ತು ಇತರ ಮೂಲಗಳ ಮಾಹಿತಿಯನ್ನು ಕ್ರೋಡೀಕರಿಸಿ ಈ ಅಂದಾಜು ಮಾಡ ಲಾಗಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್‌ ತಿಳಿಸಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಕಿರುಕುಳ ತಾಳ ಲಾರದೆ ಪರಾರಿಯಾಗಿರುವ ರೋಹಿಂಗ್ಯಾ ಮುಸ್ಲಿಮರು ಮತ್ತು ಬಾಂಗ್ಲಾ ದೇಶಿ ವಲಸಿಗರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಇಂಡೊನೇಷ್ಯಾ ಮತ್ತು ಮಲೇಷ್ಯಾ ತೀರ ತಲುಪಿದ್ದಾರೆ. ನೂರಕ್ಕೂ ಹೆಚ್ಚು ಜನರು ಥಾಯ್ಲೆಂಡ್‌ ತಲುಪಿದ್ದಾರೆ. ರೋಹಿಂಗ್ಯಾ ಮುಸ್ಲಿಮರಿಗೆ ಮಾತ್ರ ತಾತ್ಕಾಲಿಕ ಆಶ್ರಯ ನೀಡಲು ಇಂಡೊನೇಷ್ಯಾ ಮತ್ತು ಮಲೇಷ್ಯಾ ಒಪ್ಪಿವೆ.

ಸಮುದ್ರದಲ್ಲಿ ವಲಸಿಗರ ದೋಣಿ ಗಳು ಅಲೆದಾಡುತ್ತಿವೆಯೇ ಎಂಬುದನ್ನು ಪತ್ತೆ ಮಾಡುವುದಕ್ಕಾಗಿ ನಾಲ್ಕು ಹಡಗು ಗಳನ್ನು ನಿಯೋಜಿಸಲಾಗಿದೆ. ಮೂರು ಹೆಲಿಕಾಪ್ಟರ್‌ಗಳು ಮತ್ತು ಮೂರು ಯುದ್ಧ ನೌಕೆಗಳನ್ನೂ ಕಾರ್ಯಾಚರಣೆಗೆ ಇಳಿಸ ಲಾಗಿದೆ ಎಂದು ಮಲೇಷ್ಯಾ ನೌಕಾಪಡೆ ಮುಖ್ಯಸ್ಥ ಅಬ್ದುಲ್‌ ಅಜೀಜ್‌ ಜಾಫರ್‌ ತಿಳಿಸಿದ್ದಾರೆ.

‘ಅಮೆರಿಕ ಸೇನೆಯು ಈ ಬಿಕ್ಕಟ್ಟಿಗೆ ಸ್ಪಂದಿಸುತ್ತಿದೆ ಮತ್ತು ಇದನ್ನು ಗಂಭೀರ ವಾಗಿ ಪರಿಗಣಿಸಿದೆ. ಈ ಪ್ರದೇಶದಾದ್ಯಂತ ವಿಮಾನಗಳ ಮೂಲಕ ಶೋಧ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಇಲ್ಲಿನ ಇತರ ದೇಶಗಳೊಂದಿಗೆ ಸೇರಿಕೊಂಡು ಕಾರ್ಯಾಚರಣೆ ನಡೆಸಲಾಗುವುದು’ ಎಂದು ಅಮೆರಿಕ ಸೇನೆಯ ವಕ್ತಾರ ಲೆ. ಕ. ಜೆಫ್ರಿ ಪೂಲ್‌ ಹೇಳಿದ್ದಾರೆ.

ಬೌದ್ಧರು ಬಹುಸಂಖ್ಯಾತರಾಗಿರುವ ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಮುಸ್ಲಿಮ ರನ್ನು ದಶಕಗಳಿಂದ ತಾರತಮ್ಯದಿಂದ ನೋಡಲಾಗುತ್ತಿದೆ. ಸರ್ಕಾರವೂ ಈ ಸಮುದಾಯದ ವಿರುದ್ಧವೇ ಇದೆ. ಅವರಿಗೆ ಪೌರತ್ವ ನೀಡಲಾಗಿಲ್ಲ. ಹಾಗಾಗಿ ಅವರು ದೇಶರಹಿತರಾಗಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ರೋಹಿಂಗ್ಯಾ ಸಮುದಾಯದ ಜನರ ಮೇಲೆ ಹಲವು ದಾಳಿಗಳು ನಡೆದಿದ್ದು ನೂರಾರು ಜನರು ಬಲಿಯಾಗಿದ್ದಾರೆ. ಹೀಗಾಗಿ ರೋಹಿಂಗ್ಯಾ ಸಮುದಾಯದ ಜನರು ಅಕ್ರಮವಾಗಿ ದೋಣಿಗಳ ಮೂಲಕ ಮಲೇಷ್ಯಾ, ಇಂಡೊನೇಷ್ಯಾ, ಆಸ್ಟ್ರೇಲಿಯ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇತ್ತೀಚೆಗೆ ಈ ದೇಶಗಳು ವಲಸೆ ನೀತಿಯನ್ನು ಕಠಿಣಗೊಳಿಸಿ ಅಕ್ರಮವಾಗಿ ದೋಣಿ ಮೂಲಕ ಬಂದವರನ್ನು ದೇಶ ದೊಳಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿ ದ್ದವು. ಹಾಗಾಗಿ ಏಳು ಸಾವಿರಕ್ಕೂ ಹೆಚ್ಚು ವಲಸಿಗರು ಸಮುದ್ರದಲ್ಲಿ ಅತಂತ್ರರಾಗಿದ್ದರು.

ಮುಖ್ಯಾಂಶಗಳು
* ಮಾನವೀಯ ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅಮೆರಿಕ ಸಜ್ಜು

* ರೋಹಿಂಗ್ಯಾ ಜನರಿಗೆ ಮಾತ್ರ ಆಶ್ರಯ ನೀಡಲು ನಿರ್ಧಾರ‌
* ಬಾಂಗ್ಲಾದೇಶದ ವಲಸಿಗರನ್ನು ವಾಪಸ್‌ ಕಳುಹಿಸಲು ಕ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT