ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ಸಾವಿರ ಪದವಿ ಪ್ರದಾನ

Last Updated 21 ಸೆಪ್ಟೆಂಬರ್ 2014, 19:38 IST
ಅಕ್ಷರ ಗಾತ್ರ

ಬೆಂಗಳೂರು: ದಯಾನಂದ ಸಾಗರ್‌ ಶಿಕ್ಷಣ ಸಂಸ್ಥೆಯು ಶನಿವಾರ ನಗರದಲ್ಲಿ ಆಯೋಜಿಸಿದ್ದ ಪದವಿ ಪ್ರದಾನ–2014 ಸಮಾರಂಭದಲ್ಲಿ ವಿವಿಧ ವಿಭಾಗಗಳ ಮೂರು ಸಾವಿರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ವಿಶ್ವವಿದ್ಯಾಲಯ ಮಟ್ಟದಲ್ಲಿ ವಿವಿಧ ವಿಭಾಗಗಳಲ್ಲಿ ರ್‌್್ಯಾಂಕ್‌ ಪಡೆದ 56 ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು.

ಸಂಸ್ಥೆಯ ಸಭಾಂಗ­ಣ­ದಲ್ಲಿ ನಡೆದ ಕಾರ್ಯಕ್ರಮ­ದಲ್ಲಿ ಕ್ರೇನ್ಸ್‌ ಸಾಫ್ಟ್‌ವೇರ್‌ ಇಂಟರ್‌­ನ್ಯಾಷ­ನಲ್‌ ಲಿಮಿಟೆಡ್‌ನ ಅಧ್ಯಕ್ಷ ರಿಚರ್ಡ್‌ ಗಾಲ್‌ ಅವರು ಮುಖ್ಯ ಅತಿಥಿ­ಯಾಗಿದ್ದರು.

ಟೆಕ್ಸಾಸ್‌ ಇನ್‌ಸ್ಟ್ರು­ಮೆಂಟ್ಸ್‌ (ಭಾರತ) ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂತೋಷ್‌ ಕುಮಾರ್‌ ಅವರು ವಿದ್ಯಾ­ರ್ಥಿ­ಗಳನ್ನು ಉದ್ದೇಶಿಸಿ ಮಾತನಾಡಿ­ದರು. ಸಂಸ್ಥೆಯ ಉಪಾಧ್ಯಕ್ಷ ಡಾ.ಡಿ. ಪ್ರೇಮಚಂದ್ರ ಸಾಗರ್‌  ಅವರು ರ್‌್್ಯಾಂಕ್‌ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT