ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

300 ಶವ, ಕಪ್ಪು ಪೆಟ್ಟಿಗೆ ಹಸ್ತಾಂತರ

Last Updated 22 ಜುಲೈ 2014, 12:33 IST
ಅಕ್ಷರ ಗಾತ್ರ

ಉಕ್ರೇನ್(ರಾಯಿಟರ್ಸ್): ಮಲೇಷ್ಯಾ ಏರ್ ಲೈನ್ಸ್ ವಿಮಾನ ದುರಂತದಲ್ಲಿ ಮೃತಪಟ್ಟ ಸುಮಾರು 300 ಜನರ ಮೃತ ದೇಹಗಳ ಅವಶೇಷಗಳನ್ನು ಮಂಗಳವಾರ ಉಕ್ರೇನ್ ನಿಂದ ನೆದರ್ ಲೆಂಡ್ ಗೆ ತರಲಾಗುತ್ತಿದೆ. ಇದೇ ವೇಳೆ ಉಕ್ರೇನ್ ಪ್ರತ್ಯೇಕವಾದಿಗಳ ನಾಯಕ ಪತನವಾದ ವಿಮಾನದ ಕಪ್ಪು ಪೆಟ್ಟಿಗೆಯನ್ನು ಮಲೇಷ್ಯಾದ ತಜ್ಞರಿಗೆ ಹಸ್ತಾಂತರಿಸಿದ್ದಾರೆ.

ಚೀಲಗಳಲ್ಲಿ ಇರಿಸಿದ 200 ಮೃತ ದೇಹಗಳನ್ನು ಹೊತ್ತ ರೈಲು ಸೋಮವಾರ ಅಲ್ಲಿಂದ ಹೊರಟಿದ್ದು, ಬಂಡುಕೋರರ ವಶದಲ್ಲಿರುವ ಪ್ರದೇಶದ ಡೊನೆಟಸ್ ಮೂಲಕ ಕಾರ್ ಕಿವ್ ತಲುಪಲಿದೆ. ಶವಗಳನ್ನು ನಂತರ ಗುರುತು ಪತ್ತೆ ಸಲುವಾಗಿ ನೆದರ್ ಲೆಂಡ್ ಗೆ ಕಳುಹಿಸಿಕೊಡಲಾಗುವುದು ಎಂದು ಡಚ್ ನ ಪ್ರಧಾನಿ ಮಾರ್ಕ್ ರೂಟ್ ಸುದ್ದಿಗಾರರಿಗೆ ತಿಳಿಸಿದರು.

ಮಲೇಷ್ಯಾ ಪ್ರಧಾನಿ ಮತ್ತು ಉಕ್ರೇನ್ ಬಂಡುಕೋರರ ನಡುವೆ ಒಪ್ಪಂದ ಆದ ನಂತರ ಬಂಡುಕೋರರು ಮೃತ ದೇಹಗಳನ್ನು ಹಸ್ತಾಂತರಿಸಿದ್ದಾರೆ. ನಂತರ ಶವಗಳನ್ನು ಹೊತ್ತ ರೈಲು ನೆದರ್ ಲೆಂಡ್ ನತ್ತ ಹೊರಟಿತು. 

ಬಂಡುಕೋರರ ನಾಯಕ ಅಲೆಕ್ಸಾಂಡರ್ ಬೊರೊಡೈ ಮಂಗಳವಾರ ಡೊನೆಟಸ್ ನಗರದಲ್ಲಿ ಕಪ್ಪು ಪೆಟ್ಟಿಗೆಯನ್ನು ಹಸ್ತಾಂತರಿಸಿದ್ದಾರೆ.

‘ಎರಡು ಕಪ್ಪು ಪೆಟ್ಟಿಗೆಗಳು ಲಭ್ಯವಾಗಿದ್ದು, ಅವುಗಳು ಸುಸ್ಥಿತಿಯಲ್ಲಿವೆ’ ಎಂದು ಮಲೇಷ್ಯಾದ ರಾಷ್ಟ್ರೀಯ ಭದ್ರತಾ ಮಂಡಳಿಯ ಅಧಿಕಾರಿ ಮೊಹಮ್ಮದ್ ಸಾಕ್ರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT