ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3.35 ಲಕ್ಷಕ್ಕೆ ಫ್ಯಾನ್ಸಿ ಸಂಖ್ಯೆ ಹರಾಜು

Last Updated 29 ಜುಲೈ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಾಹನಗಳ ಫ್ಯಾನ್ಸಿ ನೋಂದಣಿ ಸಂಖ್ಯೆಗೆ ನಗರದಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ಶಾಂತಿನಗರದ ಸಾರಿಗೆ ಇಲಾಖೆ ಕಚೇರಿಯಲ್ಲಿ ಬುಧವಾರ ನಡೆದ ಹರಾಜಿನಲ್ಲಿ ಫ್ಯಾನ್ಸಿ ಸಂಖ್ಯೆಯೊಂದು ₨ 3.35 ಲಕ್ಷಕ್ಕೆ ಬಿಕರಿಯಾಯಿತು.

‘9999’ ನೋಂದಣಿ ಸಂಖ್ಯೆಗೆ ಮೂರು ಜನ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ವಾಹನದ ಮಾಲೀಕರೊಬ್ಬರು ₨ 3.30 ಲಕ್ಷಕ್ಕೆ ಹರಾಜು ಕೂಗಿದರು. ಅಂತಿಮವಾಗಿ ಅದು ₨ 3.35 ಲಕ್ಷಕ್ಕೆ  ಬಿಜೆಪಿ ಶಾಸಕ ಗುರುಪಾದಪ್ಪ ನಾಗಮಾರಪಲ್ಲಿ ಅವರ ಪಾಲಾಯಿತು.

‘ಒಟ್ಟು 12 ನೋಂದಣಿ ಸಂಖ್ಯೆಗಳನ್ನು ಹರಾಜು ಮೂಲಕ ನೀಡಲಾಯಿತು. ಅದರಲ್ಲಿ 0001 ಸಂಖ್ಯೆಯು ₨ 2.10 ಲಕ್ಷ, 0007 ಸಂಖ್ಯೆಯು 1.35  ಲಕ್ಷ , 99 ಸಂಖ್ಯೆಯು ₨ 55 ಸಾವಿರ ಮತ್ತು 0009 ಸಂಖ್ಯೆಯು ₨ 50 ಸಾವಿರಕ್ಕೆ ಹರಾಜಾದವು. ಈ ಪ್ರಕ್ರಿಯೆಯಿಂದ ಬುಧವಾರ  ಒಂದೇ ದಿನ ₨ 17 ಲಕ್ಷ ಸಂಗ್ರಹವಾಗಿದೆ’ ಎಂದು ಸಾರಿಗೆ ಇಲಾಖೆ ಆಯುಕ್ತ ಡಾ.ರಾಮೇಗೌಡ ಅವರು ತಿಳಿಸಿದರು.

ಸಾರ್ವಜನಿಕರು ಸುಲಭವಾಗಿ ಫ್ಯಾನ್ಸಿ  ನೋಂದಣಿ ಸಂಖ್ಯೆ ಪಡೆಯಲು ಸಾರಿಗೆ ಇಲಾಖೆಯು ಹರಾಜು ಮೂಲಕ ನೋಂದಣಿ ಸಂಖ್ಯೆ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT