ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

358 ಸ್ಥಾನ ಅವಿರೋಧ ಆಯ್ಕೆ

ಗ್ರಾ.ಪಂ ಚುನಾವಣೆ: 5,464 ಅಭ್ಯರ್ಥಿಗಳು ಅಂತಿಮ ಕಣದಲ್ಲಿ
Last Updated 26 ಮೇ 2015, 20:19 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 5,464 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದು, 358 ಅಭ್ಯರ್ಥಿ ಗಳು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ.

2373 ಸ್ಥಾನಗಳಿಗೆ ಸಲ್ಲಿಕೆಯಾಗಿದ್ದ 8179 ಕ್ರಮಬದ್ಧ ನಾಮಪತ್ರಗಳ ಪೈಕಿ 2715 ಅಭ್ಯರ್ಥಿಗಳು ನಾಮಪತ್ರ ಗಳನ್ನು ಹಿಂತೆಗೆದುಕೊಂಡಿದ್ದಾರೆ  ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಬೆಂಗಳೂರು ಉತ್ತರ ಮತ್ತು ಉತ್ತರ (ಹೆಚ್ಚುವರಿ) ತಾಲ್ಲೂಕಿನಲ್ಲಿ 2658 ಅಭ್ಯರ್ಥಿಗಳಲ್ಲಿ 893 ಮಂದಿ ನಾಮಪತ್ರ ಹಿಂತೆಗೆದುಕೊಂಡಿದ್ದು, ಅಂತಿಮವಾಗಿ 1792 ಮಂದಿ ಸ್ಪರ್ಧಿಸುತ್ತಿದ್ದಾರೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ಕ್ರಮಬದ್ಧವಾಗಿದ್ದ 1698 ನಾಮಪತ್ರಗಳ ಪೈಕಿ 498 ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಂಡು, 1200 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ.

ಬೆಂಗಳೂರು ಪೂರ್ವ ತಾಲ್ಲೂಕಿನಲ್ಲಿ 890 ಅಭ್ಯರ್ಥಿಗಳ ಪೈಕಿ 329 ಮಂದಿ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. 561 ಮಂದಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ.

ಆನೇಕಲ್ ತಾಲ್ಲೂಕಿನಲ್ಲಿ 2906 ಅಭ್ಯರ್ಥಿಗಳ ಪೈಕಿ 995 ಮಂದಿ ನಾಮಪತ್ರ ಹಿಂತೆಗೆದುಕೊಂಡು, 1911 ಮಂದಿ ಸ್ಪರ್ಧೆಯಲ್ಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪಕ್ಷದ ಪ್ರಚಾರ ಬೇಡ: ‘ಗ್ರಾಮ ಪಂಚಾಯಿತಿ ಚುನಾವಣೆಗಳು ಪಕ್ಷಾತೀತ ವಾಗಿರುವುದರಿಂದ ಅಭ್ಯರ್ಥಿಗಳು ಯಾವುದೇ ಪಕ್ಷದ ಹೆಸರಿನಲ್ಲಿ ಪ್ರಚಾರ ನಡೆಸುವಂತಿಲ್ಲ’ ಎಂದು ನಗರ ಜಿಲ್ಲಾಧಿಕಾರಿ ವಿ. ಶಂಕರ್ ಅವರು ತಿಳಿಸಿದ್ದಾರೆ.

‘ಚುನಾವಣೆ ಪ್ರಚಾರದ ಸಮಯ ದಲ್ಲಿ ಪಕ್ಷದ ಬಾವುಟ, ಮುಖಂಡ ಭಾವಚಿತ್ರ, ಪಕ್ಷದ ಚಿಹ್ನೆ ಪ್ರದರ್ಶಿಸು ವುದಾಗಲಿ ಅಥವಾ ಕರಪತ್ರಗಳಲ್ಲಿ ಮುದ್ರಿಸಿ ಹಂಚುವುದಾಗಲಿ ಮಾಡಿದರೆ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು  ಎಚ್ಚರಿಸಿದ್ದಾರೆ.

ಕಣದಲ್ಲಿ 880 ಅಭ್ಯರ್ಥಿಗಳು
ಬೆಂಗಳೂರು:
ಬೆಂಗಳೂರು ಉತ್ತರ (ಹೆಚ್ಚುವರಿ) ತಾಲ್ಲೂಕಿನ ಯಲಹಂಕ, ಹೆಸರಘಟ್ಟ ಹಾಗೂ ಜಾಲ ಹೋಬಳಿ ವ್ಯಾಪ್ತಿಯ 17 ಗ್ರಾಮ ಪಂಚಾಯಿತಿಗಳ ಚುನಾವಣೆ ಕಣದಲ್ಲಿ ಅಂತಿಮವಾಗಿ 880 ಅಭ್ಯರ್ಥಿಗಳು ಉಳಿದಿದ್ದಾರೆ.

376 ಸ್ಥಾನಗಳ ಪೈಕಿ ಈಗಾಗಲೇ 42 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ 334 ಸ್ಥಾನಗ ಳಿಗಷ್ಟೇ ಚುನಾವಣೆ ನಡೆಯಲಿದೆ.

ದೊಡ್ಡ ಅರಳಗೆರೆ ಗ್ರಾಪಂ
ಹೊಸಕೋಟೆ:
ತಾಲ್ಲೂಕಿನ ದೊಡ್ಡ ಅರಳಗೆರೆ ಗ್ರಾಮ ಪಂಚಾಯಿತಿಯ 19 ಸ್ಥಾನಗಳ ಪೈಕಿ 12 ಅಭ್ಯರ್ಥಿಗಳು (8 ಗ್ರಾಮಗಳಿಂದ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇದರೊಂದಿಗೆ ತಾಲ್ಲೂಕಿನ 26 ಗ್ರಾಮ ಪಂಚಾಯಿತಿಗಳಿಗೆ ಒಟ್ಟು 42 ಅಭ್ಯರ್ಥಿಗಳು ಅವಿರೋಧ ಆಯ್ಕೆ ನಡೆದಿದೆ. ದೊಡ್ಡ ಹುಲ್ಲೂರಿನಲ್ಲಿ 5, ವಾಗಟದಲ್ಲಿ  8,ಗಿಡ್ಡಪ್ಪನಹಳ್ಳಿ ಮತ್ತು ಕಂಬಳೀಪುರದಲ್ಲಿ ತಲಾ 4, ಲಕ್ಕೊಂಡಹಳ್ಳಿ ಹಾಗೂ ಗಣಗಲೂರಿನಲ್ಲಿ ತಲಾ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಸದ್ಯ, 452 ಸ್ಥಾನಗಳಿಗಾಗಿ ಒಟ್ಟು 1019 ಅಭ್ಯರ್ಥಿಗಳು ಕಣದಲ್ಲಿ ಸೆಣಸಲು ಸಿದ್ಧರಾಗಿದ್ದಾರೆ. ಅವರಲ್ಲಿ 501 ಮಹಿಳೆಯರು ಹಾಗು 518 ಪುರುಷರು ಸೇರಿದ್ದಾರೆ.

ಕಣದಲ್ಲಿ 1270 ಅಭ್ಯರ್ಥಿಗಳು
ನೆಲಮಂಗಲ:
‘ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳ 447 ಸ್ಥಾನಗಳ ಪೈಕಿ 31 ಸದಸ್ಯರು ಅವಿರೋಧ ಆಯ್ಕೆಯಾಗಿದ್ದು, 416 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ’ ಎಂದು ತಹಶೀಲ್ದಾರ್‌ ಎಂ.ಸಿ.ನರಸಿಂಹಮೂರ್ತಿ ತಿಳಿಸಿದ್ದಾರೆ.

‘ಒಟ್ಟು 2028 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅವುಗಳ ಪೈಕಿ 55 ನಾಮಪತ್ರಗಳು ತಿರಸ್ಕೃತಗೊಂಡಿದ್ದವು. 703 ನಾಮಪತ್ರಗಳನ್ನು ವಾಪಸ್‌ ಪಡೆಯಲಾಗಿದೆ. ಅಂತಿಮವಾಗಿ 1270 ಮಂದಿ  ಚುನಾವಣಾ ಕಣದಲ್ಲಿದ್ದಾರೆ’ ಎಂದು ಹೇಳಿದರು. ‘ತಾಲ್ಲೂಕಿನ 24 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಒಟ್ಟು 1,36,127 ಮತದಾರರಿದ್ದಾರೆ.  67 ಅತಿ ಸೂಕ್ಷ್ಮ, 94 ಸೂಕ್ಷ್ಮ, 61 ಸಾಮಾನ್ಯ. ಹೀಗೆ ಒಟ್ಟು 222 ಮತಗಟ್ಟೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT