ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

37 ಪಾಕ್‌ ಮೀನುಗಾರರ ಬಿಡುಗಡೆ

Last Updated 30 ಮೇ 2014, 19:30 IST
ಅಕ್ಷರ ಗಾತ್ರ

ಅಟಾರಿ, ಅಮೃತಸರ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ ಸದ್ಭಾ­ವ­ನೆಯ ಸಂಕೇತವಾಗಿ ಪಾಕಿಸ್ತಾನದ 37 ಬಂಧಿತರನ್ನು ಶುಕ್ರವಾರ ಬಿಡುಗಡೆ ಮಾಡಿದೆ.

ಬಿಡುಗಡೆಯಾದವರಲ್ಲಿ ಪಾಕಿಸ್ತಾ­ನದ 32  ಮೀನುಗಾರರು ಮತ್ತು ಭಾರ­ತದ ಗಡಿಯನ್ನು ಅಕ್ರಮವಾಗಿ ಪ್ರವೇಶಿ­ಸಿದ ಐವರು ಪಾಕ್‌ ನಾಗರಿಕರು ಸೇರಿ­ದ್ದಾರೆ ಎಂದು ಅಟಾರಿ ಗಡಿಪ್ರದೇಶ­ದಲ್ಲಿರುವ ಭಾರತೀಯ ಅಧಿಕಾರಿ­ಯೊಬ್ಬರು ಖಚಿತಪಡಿಸಿದ್ದಾರೆ.

ಈ 37 ಬಂಧಿತರನ್ನು ಭಾರತದ ಅಟಾರಿಯ ಗಡಿಠಾಣೆಯ ಸಮೀಪ­ದಲ್ಲಿರುವ ಪಾಕಿಸ್ತಾನದ ರೇಂಜರ್‌ಗಳ ವಶಕ್ಕೆ ಒಪ್ಪಿಸಲಾಗಿದೆ. ಅವರು ಭಾರತದ ವಿವಿಧ ಜೈಲುಗಳಲ್ಲಿ ಕಳೆದ 16 ತಿಂಗ­ಳುಗಳಿಂದ ಸೆರೆವಾಸ ಅನುಭವಿಸು­ತ್ತಿ­ದ್ದರು. ಪಾಕಿಸ್ತಾನದ ಪ್ರಧಾನಿ ನವಾಜ್‌ ಶರೀಫ್‌, ಮೋದಿ ಅವರ ಅಧಿಕಾರ ಗ್ರಹಣ ಸಮಾರಂಭಕ್ಕೆಂದು ಭಾರತಕ್ಕೆ ಬರುವ ಮೊದಲು  ಪಾಕ್‌, 151 ಭಾರತೀಯ ಮೀನುಗಾರರನ್ನು ಮೇ 25ರಂದು ಬಿಡುಗಡೆ ಮಾಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT