ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

371 (ಜೆ) ಸೌಲಭ್ಯ ಬಳಕೆಗೆ ಸಲಹೆ

Last Updated 5 ಮಾರ್ಚ್ 2015, 6:03 IST
ಅಕ್ಷರ ಗಾತ್ರ

ಔರಾದ್: ಉದ್ಯೋಗ ಮತ್ತು ಶಿಕ್ಷಣ­ದಲ್ಲಿ ನೀಡಲಾದ 371(ಜೆ) ಮೀಸಲು ಸೌಲಭ್ಯ ಬಳಸಿಕೊಳ್ಳುವಂತೆ ಉಪ ವಿಭಾಗಾಧಿಕಾರಿ ಅನೀಸ್ ಕೆ. ಜಾಯ್‌ ಸಲಹೆ ನೀಡಿದರು.

ಇಲ್ಲಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರ­ದಲ್ಲಿ ಬುಧವಾರ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ 371(ಜೆ) ತಿಳಿವಳಿಕೆ ಕಾರ್ಯಾಗಾರ­ದಲ್ಲಿ ಅವರು ಮಾತನಾಡಿದರು.

ಔರಾದ್‌ ತಾಲ್ಲೂಕಿನ ವಿದ್ಯಾರ್ಥಿ­ಗಳು, ಯುವಕರು 371 (ಜೆ) ಅಡಿ ಪ್ರಮಾಣ ಪತ್ರ ಪಡೆಯಲು ಅಷ್ಟೊಂದು ಆಸಕ್ತಿ ತೋರುತ್ತಿಲ್ಲ. ಈಚೆಗೆ ಕಲಬುರ್ಗಿ­ಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿ ಮಾಡಲು  ನಿರ್ಧರಿಸ­ಲಾಗಿದೆ. ಜೂನ್ ವೇಳೆಗೆ ಈ  ನೇಮಕಾತಿ ಪ್ರಕ್ರಿಯೆ ಮುಗಿಯಲಿರು­ವುದರಿಂದ ನಿರುದ್ಯೋಗಿ ಪದವೀಧರರು ಇದರ ಲಾಭ ಪಡೆದುಕೊಳ್ಳಬೇಕು ಎಂದರು.

ಮೀಸಲು ಸೌಲಭ್ಯ ಅರ್ಹರಿಗೆ ತಲುಪಿ­ಸುವ ನಿಟ್ಟಿನಲ್ಲಿ ಪ್ರಮಾಣಪತ್ರ ನೀಡು­ವಾಗ ಕಟ್ಟುನಿಟ್ಟಿನ ಪರಿಶೀಲನೆ ನಡೆಸ­ಲಾಗು­ತ್ತಿದೆ. ಇದಕ್ಕಾಗಿ ಕೆಲ ನಿಯಮಾ­ವಳಿ ರೂಪಿಸಿರುವುದರಿಂದ ಅವುಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ ಎಂದು ಹೇಳಿದರು.

ಸಿಇಟಿ ಬರೆಯುವ ವಿದ್ಯಾರ್ಥಿಗಳು ಕಾಲೇಜು ಪ್ರಾಚಾರ್ಯರ ಮೂಲಕ ಅರ್ಜಿ ಸಲ್ಲಿಸಿದರೂ ಅವರಿಗೆ ಅರ್ಹತಾ ಪ್ರಮಾ­­ಣ­ಪತ್ರ ನೀಡಲಾಗುವುದು. ಪ್ರಮಾ­ಣ­ಪತ್ರ ಯಾವ ಉದ್ದೇಶಕ್ಕೆ ಎಂಬು­­­­­­ದನ್ನು ನಮೂದಿಸುವುದು ಕಡ್ಡಾಯ ಎಂದು ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದರು.

ಅರ್ಹತಾ ಪತ್ರ ಹೊಂದುವ ಅಭ್ಯರ್ಥಿ ಈ ಭಾಗ­ದಲ್ಲಿ ಓದಿರುವ ಶಾಲೆಗಳಿಂದ ವ್ಯಾಸಂಗ ಪ್ರಮಾಣಪತ್ರ ದೃಢೀಕರಣ­ದೊಂದಿಗೆ ತಹಶೀಲ್ದಾರ್ ಕಚೇರಿಗೆ ಸಲ್ಲಿಸಬೇಕು. ಇದರ ಜೊತೆಗೆ ಮನೆ– ಹೊಲ ಇದ್ದವರು ಖಾತಾ ನಮೂನೆ, ಪಹಣಿ ಪತ್ರ, ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್ ಸೇರಿದಂತೆ ತಾವು 10 ವರ್ಷದಿಂದ ಈ ಭಾಗದಲ್ಲೇ ವಾಸವಿರುವ ಗುರುತಿನಪತ್ರ ಒದಗಿಸ­ಬೇಕು ಎಂದು ಹೇಳಿದರು.

ತಹಶೀಲ್ದಾರ್ ಜಗನ್ನಾಥರೆಡ್ಡಿ ಮಾತ­ನಾಡಿ, ಅರ್ಹತಾ ಪ್ರಮಾಣಪತ್ರ ಪಡೆ­ಯಲು ತಮ್ಮ ಕಚೇರಿಯಲ್ಲಿ ವಿಳಂಬ ಆಗದಂತೆ ನೋಡಿಕೊಳ್ಳ­ಲಾಗುವುದು ಎಂದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ­­ನಿರ್ದೇಶಕ ಎಸ್‌.ಡಿ. ಕಾಂಬಳೆ, ಪ್ರಾಚಾರ್ಯ ವಿ.ಎಂ. ಸ್ವಾಮಿ, ಮನೋ­ಹರ ಬಕಾಲೆ, ಹಾವಗಿರಾವ ವಟಗೆ, ಬಸವರಾಜ ಫುಲಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT