ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

42 ಕಿ.ಮೀ. ಗುರಿ ಮುಟ್ಟಿದ 92ರ ಅಜ್ಜಿ!

ಧನ ಸಂಗ್ರಹಕ್ಕಾಗಿ ಹ್ಯಾರಿಟ್ಟೆ ಥಾಮ್ಸನ್‌ ದಿಟ್ಟ ಸಾಹಸ
Last Updated 1 ಜೂನ್ 2015, 19:30 IST
ಅಕ್ಷರ ಗಾತ್ರ

ಸ್ಯಾನ್ ಡಿಯಗೊ (ಎಪಿ): ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿರುವ 92 ವರ್ಷದ ಹ್ಯಾರಿಟ್ಟೆ ಥಾಮ್ಸನ್‌ ಮ್ಯಾರ ಥಾನ್ ಸ್ಪರ್ಧೆಯನ್ನು ಸಂಪೂರ್ಣಗೊಳಿ ಸಿದ ಅತ್ಯಂತ ಹಿರಿಯ ಓಟಗಾರ್ತಿಯಾಗಿ ದಾಖಲೆ ಪುಸ್ತಕ ಸೇರಿದರು.

ಉತ್ತರ ಕೆರೊಲಿನಾದವರಾದ ಹ್ಯಾರಿಟ್ಟೆ ಭಾನುವಾರ ನಡೆದ ‘ರಾಕ್‌ ಎನ್ ರೋಲ್’ ಮ್ಯಾರಥಾನ್ ಓಟವನ್ನು (42 ಕಿ.ಮೀ) 7ಗಂಟೆ, 24 ನಿಮಿಷ, 36ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು.  ಅವರು ವಿಜಯದ ಗೆರೆಯನ್ನು ಮುಟ್ಟುತ್ತಿ ದಂತೆಯೇ  ನೂರಾರು ಅಭಿಮಾನಿಗಳು ಅವರನ್ನು ಸುತ್ತುವರಿದು ಅಭಿನಂದಿಸಿದರು. 

ಕಳೆದ ವರ್ಷದ ಮ್ಯಾರಥಾನ್‌ನಲ್ಲಿ ಅವರು 7ಗಂಟೆ, 7ನಿಮಿಷ , 42 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು.  90 ಮತ್ತು 90 ವರ್ಷ ಮೇಲಿನ ಮಹಿಳಯರ ವಿಭಾಗದಲ್ಲಿ ಈ ಬಾರಿ ಅವರು ದಾಖಲೆ ಬರೆದರು.

70ನೇ ವಯಸ್ಸಿನಲ್ಲಿ ಅವರು ಮ್ಯಾರ ಥಾನ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದ್ದರು. ಲುಕೆಮಿಯಾ ಮತ್ತು ಲಿಂಪೊಮಿಯಾ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಧನಸಂಗ್ರಹಕ್ಕಾಗಿ ಅವರು ಮ್ಯಾರಥಾನ್‌ನಲ್ಲಿ ಓಡಿದ್ದರು. 2010ರ ಹೊನಲುಲು ಮ್ಯಾರಥಾನ್‌ನಲ್ಲಿ ಗುರಿ ಮುಟ್ಟಿದ್ದ ಗ್ಲ್ಯಾಡಿಸ್ ಬರಿಲ್ (92 ವರ್ಷ, 19ದಿವಸ) ಅವರ ಹೆಸರಲ್ಲಿದ್ದ ದಾಖಲೆ ಯನ್ನು ಹ್ಯಾರಿಟ್ಟೆ ಅಳಿಸಿಹಾಕಿದರು.

‘ನನ್ನ ಕುಟುಂಬದಲ್ಲಿ ಕ್ಯಾನ್ಸರ್‌ನಿಂದಾಗಿ ಕೆಲವರು ಸಾವನ್ನಪ್ಪಿ ದ್ದರು. ಆದ್ದರಿಂದ ಧನಸಂಗ್ರಹಕ್ಕಾಗಿ ನಾನು ಓಟದಲ್ಲಿ ಭಾಗವಹಿಸುತ್ತಿದ್ದೇನೆ. ಇದು ನನ್ನ ಮನಸ್ಸಿಗೆ ಸಂತೋಷ ಕೊಡುತ್ತದೆ’ ಎಂದು ಹ್ಯಾರಿಟ್ಟೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT