ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

47 ಪ್ರಯಾಣಿಕರ ಸಾವು

ತೈವಾನ್‌ ವಿಮಾನ ಪತನ
Last Updated 23 ಜುಲೈ 2014, 19:30 IST
ಅಕ್ಷರ ಗಾತ್ರ

ತೈಪೆ (ರಾಯಿಟರ್ಸ್‌/ಎಪಿ): ತೈವಾನ್‌ ರಾಜಧಾನಿ ತೈಪೆಯಿಂದ ಪೆಂಘು ದ್ವೀಪ­ಸಮೂಹದ ಮಕಾಂಗ್‌ ದ್ವೀಪಕ್ಕೆ ತೆರಳು­ತ್ತಿದ್ದ ವಿಮಾನವು ಪ್ರತಿಕೂಲ ಹವಾ­ಮಾನದ ಕಾರಣ ತುರ್ತು ಭೂಸ್ಪರ್ಶ ಮಾಡುವಾಗ ಅಪ್ಪಳಿಸಿ 47 ಜನ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.

‘ಟ್ರಾನ್ಸ್‌ ಏಷ್ಯಾ ಏರ್‌ವೇಸ್‌ನ ಎಆರ್‌ಟಿ–72 ವಿಮಾನದಲ್ಲಿ 54 ಪ್ರಯಾ­ಣಿಕರು ಹಾಗೂ ನಾಲ್ವರು ಸಿಬ್ಬಂದಿ ಇದ್ದರು. ಗಾಯಗೊಂಡ 11 ಮಂದಿಯನ್ನು ಆಸ್ಪತ್ರೆಗೆ ಕಳಿಸಿದ್ದೇವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ಅಪ್ಪಳಿಸಿದ ಜಾಗದಲ್ಲಿ ರನ್‌ವೇ ಪಕ್ಕದಲ್ಲಿರುವ ಕಟ್ಟಡಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಆದರೆ ಅಲ್ಲಿನ ನಿವಾಸಿಗಳು ಯಾರೂ ಮೃತಪಟ್ಟಿಲ್ಲ.

ತೈವಾನ್‌ಗೆ ಬುಧವಾರ ‘ಮಾಟ್ಮೊ’ ಚಂಡ­ಮಾರುತ ಅಪ್ಪಳಿ­ಸಿದ್ದು,  ಬಿರುಗಾಳಿ­ಯಿಂದ ಕೂಡಿದ ಮಳೆ ಸುರಿಯುತ್ತಿದೆ. ವಿಮಾನ ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT