ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5ನೇ ನಂಬರ್‌ ಬಂಗಲೆಗೆ ಮೋದಿ

Last Updated 30 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಐದು ದಿನಗಳ ಬಳಿಕ ನರೇಂದ್ರ ಮೋದಿ ಅವರು ರೇಸ್‌ಕೋರ್ಸ್‌ ರಸ್ತೆಯ ಪ್ರಧಾನಿ­ಯವರ ಅಧಿಕೃತ ನಿವಾಸ 7ನೇ ನಂಬರಿನ ಬಂಗಲೆ ಬದಲಿಗೆ 5ನೇ ನಂಬರಿನ ಬಂಗಲೆಗೆ ಶುಕ್ರವಾರ ತೆರಳಿದರು.

ಇಲ್ಲಿನ ಗುಜರಾತ್‌ ಭವನದಲ್ಲಿ ತಾತ್ಕಾಲಿಕವಾಗಿ ಉಳಿದುಕೊಂಡಿದ್ದ ಮೋದಿ ಅವರು, ತಮ್ಮ ಪಕ್ಷದ ನಾಯಕರು ವಾಸಿಸಿದ್ದ ರೇಸ್‌ಕೋರ್ಸ್‌ ರಸ್ತೆಯ 5ನೇ ನಂಬರಿನ ಬಂಗಲೆಗೆ ತೆರಳಿದ ಬಳಿಕ ಪೂಜಾ ವಿಧಿವಿಧಾನ­ಗಳನ್ನು ನಡೆಸಿದರು. ಸಾಮಾನುಗಳನ್ನೂ ಬಂಗಲೆಗೆ ವರ್ಗಾಯಿಸಲಾಯಿತು.

ಮೇ 26ರಂದು ಮೋದಿ ಅ1ವರು ಪ್ರಮಾಣ ವಚನ ಸ್ವೀಕರಿಸಿದ ನಂತರ­ದಲ್ಲಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ರೇಸ್‌ಕೋರ್ಸ್‌ ರಸ್ತೆಯ 7ನೇ ನಂಬರಿನ ಬಂಗಲೆಯನ್ನು ತೆರವು­ಗೊಳಿಸಿದ್ದರು. ಬಂಗಲೆಯ ನವೀಕರಣ ಕೆಲಸ ನಡೆಯುತ್ತಿದ್ದ ಕಾರಣ ಮೋದಿ ಅವರು 7ನೇ ನಂಬರಿನ ಬಂಗಲೆಗೆ ಸ್ಥಳಾಂತರಗೊಂಡಿರಲಿಲ್ಲ. ಈ ಬಂಗಲೆ­-ಯನ್ನು ಅವರು ತಮ್ಮ ಕಚೇರಿಯಾಗಿ ಉಪಯೋಗಿಸುವರು ಎಂದು ತಿಳಿದು­ಬಂದಿದೆ.

ಜಶೋದಾ ಬೆನ್‌ಗೆ ಪೊಲೀಸ್‌ ರಕ್ಷಣೆ

ಅಹಮದಾಬಾದ್‌(ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಪತ್ನಿ ಜಶೋದಾ ಬೆನ್‌ ಅವರಿಗೆ ಗುರುವಾರದಿಂದ  ಪೊಲೀಸ್‌ ರಕ್ಷಣೆ

ಒದಗಿಸಲಾಗಿದೆ.

ಜಶೋದಾ ಬೆನ್‌ ಅವರು ಮೆಹ್ಸಾನ ಜಿಲ್ಲೆಯ ಉಂಝ ನಗರದ ಸಮೀಪದ ಬ್ರಾಹ್ಮಣವಾಡ ಗ್ರಾಮದಲ್ಲಿ ವಾಸವಾಗಿದ್ದು, ಮೆಹ್ಸಾನದ ಪೊಲೀಸ್‌ ಠಾಣೆ ಐವರು ಸಿಬ್ಬಂದಿ ಅವರ ಮನೆ ಎದುರು ಗುರುವಾರದಿಂದ ಕಾವಲು ಕಾಯತೊಡಗಿದ್ದಾರೆ.

ಮೋದಿ ತಾಯಿ ಹೀರಾಬಾಯಿ ಅವರು ಮೋದಿ ಅವರ ಕಿರಿಯ ಸಹೋದರ ಪಂಕಜ್‌ ಮೋದಿ ಅವರೊಡನೆ ಗಾಂಧಿನಗರದಲ್ಲಿ ವಾಸವಿದ್ದಾರೆ. ಅವರಿಗೆ ಯಾವುದೇ ಪೊಲೀಸ್‌ ರಕ್ಷಣೆ ಒದಗಿಸಿಲ್ಲ.

‘ಈ ಕುರಿತು ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ನಮಗೆ ಯಾವುದೇ ಆದೇಶವೂ ಬಂದಿಲ್ಲ’ ಎಂದು ಗಾಂಧಿನಗರದ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

‘ಜೀವನ ಚರಿತ್ರೆ ಬೇಡ’
‌ಗಾಂಧಿನಗರ (ಪಿಟಿಐ):
ಗುಜರಾತ್‌ನ ಶಾಲಾ ಪಠ್ಯಗಳಲ್ಲಿ ಪ್ರಧಾನಿ ಮೋದಿ ಅವರ ಜೀವನ ಚರಿತ್ರೆಯನ್ನು ಸೇರಿಸಲು  ಶಿಕ್ಷಣ ಇಲಾಖೆ ಹೊರಟಿತ್ತು. ಆದರೆ ಸ್ವತಃ ಮೋದಿ ಇದಕ್ಕೆ ವಿರೋಧ  ವ್ಯಕ್ತಪಡಿಸಿದ್ದರಿಂದ ಅಂಥ ಪ್ರಯತ್ನ ಕೈಬಿಡಲಾಗಿದೆ.

ಶುಕ್ರವಾರ ಬೆಳಿಗ್ಗೆ ಮೋದಿ ಅವರು ಗುಜರಾತ್‌ ಶಿಕ್ಷಣ ಮಂತ್ರಿ ಭೂಪೇಂದ್ರ ಸಿನ್ಹಾ ಚೂಡಾಸಂ ಅವರಿಗೆ ಕರೆ ಮಾಡಿ ಪಠ್ಯಪುಸ್ತಕಗಳಲ್ಲಿ ತಮ್ಮ ಬಗ್ಗೆ ಏನೂ ಸೇರಿಸದಿರಲು ತಿಳಿಸಿದ್ದಾರೆ.

‘ಬದುಕಿರುವ ವ್ಯಕ್ತಿಯ ಜೀವನ ಸಾಧನೆಗಳನ್ನು ಪಠ್ಯದಲ್ಲಿ ಸೇರಿಸುವುದು ಸರಿಯಲ್ಲ ಎಂದು ನರೇಂದ್ರ ಭಾಯಿ ಫೋನ್‌ ಕರೆ ಮಾಡಿ ತಿಳಿಸಿದ್ದಾರೆ.  ಇದನ್ನು ಮುಂದುವರಿಸದಂತೆ ಅವರು ಸೂಚಿಸಿದ್ದಾರೆ’ ಎಂದು ಚೂಡಾಸಂ ಸ್ಪಷ್ಟಪಡಿಸಿದ್ದಾರೆ.

‘ಜೀವಂತ ಇರುವವರ ಜೀವನ ಚರಿತ್ರೆಯನ್ನು ಶಾಲಾ ಪಠ್ಯಗಳಲ್ಲಿ ಸೇರಿಸಬಾರದು ಎಂಬುದು ನನ್ನ ದೃಢ ನಿಲುವು. ಕೆಲವು ರಾಜ್ಯಗಳು ನನ್ನ ಹೋರಾಟದ ಜೀವನವನ್ನು ಶಾಲಾ ಪಠ್ಯದ ಭಾಗವಾಗಿ ಸೇರಿಸಲು ಆಲೋಚನೆ ಮಾಡುತ್ತಿವೆ. ಈ ಇದನ್ನು ಸುದ್ದಿಗಳನ್ನು ನಾನು ಗಮನಿಸುತ್ತಿದ್ದೇನೆ. ಇದು ಸರಿಯಲ್ಲ’ ಎಂದು ಮೋದಿ  ಟ್ವಿಟರ್‌ನಲ್ಲಿ ತಮ್ಮ ವಿರೋಧ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT