ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5ರಂದು ಮುಂಗಾರು ಕೇರಳಕ್ಕೆ

Last Updated 1 ಜೂನ್ 2014, 19:30 IST
ಅಕ್ಷರ ಗಾತ್ರ

ತಿರುವನಂತಪುರ:  ರಾಷ್ಟ್ರದ ಕೃಷಿ ಚಟು­ವಟಿ­ಕೆಗಳ ಜೀವಾಧಾರವಾದ ನೈರುತ್ಯ ಮುಂಗಾರು ಕೇರಳ ರಾಜ್ಯವನ್ನು ನಾಲ್ಕು ದಿನಗಳಷ್ಟು ತಡವಾಗಿ, ಅಂದರೆ ಜೂನ್‌ 5ರಂದು ಪ್ರವೇಶಿಸುವ ನಿರೀಕ್ಷೆ ಇದೆ. ಇದನ್ನು ಅಂದಾಜಿಸಿರುವ ಹವಾ­ಮಾನ ಇಲಾಖೆಯು, ಈ ಲೆಕ್ಕಾಚಾರ­ದಲ್ಲಿ ನಾಲ್ಕು ದಿನಗಳಷ್ಟು ಹೆಚ್ಚು ಅಥವಾ ಕಡಿಮೆ ಆಗಬಹುದು ಎಂದಿದೆ.

ಮುಂಗಾರು ಕೇರಳಕ್ಕೆ ಸಾಮಾನ್ಯ­ವಾಗಿ ಜೂನ್‌ 1ರಂದು ಕಾಲಿಡುತ್ತದೆ. ಈ ಬಾರಿ ಸ್ವಲ್ಪ ತಡವಾಗಬಹುದು ಎಂಬುದು ತಜ್ಞರ ಊಹೆ.
ಮುಂಗಾರು ಮಾರುತಗಳು ಮುಂದಿನ ಕೆಲವೇ ದಿನಗಳಲ್ಲಿ ಮಾಲ್ಡೀವ್‌್ಸ, ಶ್ರೀಲಂಕಾ ಹಾಗೂ ಬಂಗಾಳ ಕೊಲ್ಲಿಯ ನೈರುತ್ಯ ಭಾಗಗಳೆಡೆಗೆ ಚಲಿಸಲು ಪೂರಕವಾದ ಸನ್ನಿವೇಶ ಕಂಡುಬರುತ್ತಿದೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಊಹಿಸಿರು­ವಂತೆ ಮುಂಗಾರು ಮಳೆ ಜೂನ್‌ 5ರಂದು ರಾಜ್ಯಕ್ಕೆ ಕಾಲಿಡಲಿದೆ ಎಂದು ಇಲ್ಲಿನ ಹವಾಮಾನ ಕೇಂದ್ರದ ನಿರ್ದೇಶಕ ಕೆ.ಸಂತೋಷ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಮಧ್ಯೆ ಕೇರಳದ ಕೋಯಿಕ್ಕೋಡ್‌, ಕಾಂಜಿರಪಳ್ಳಿ, ಕಣ್ಣೂರು, ವಯನಾಡ್‌, ಅಲೆಪ್ಪಿ ಜಿಲ್ಲೆಗಳ ಹಲವೆಡೆ ಭಾನುವಾರ ಸಾಧಾರಣ ಮಳೆ ಸುರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT