ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಕೋಟಿ ಹೊಸ ಖಾತೆ

Last Updated 29 ಸೆಪ್ಟೆಂಬರ್ 2014, 19:34 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಕೇಂದ್ರ ಸರ್ಕಾರದ ‘ಜನ ಧನ’ ಯೋಜನೆಯಡಿ  ಸೆ.25ರವರೆಗೆ ಒಟ್ಟಾರೆ 5 ಕೋಟಿ ಖಾತೆಗಳನ್ನು ತೆರೆಯಲಾಗಿದ್ದು, 3,500 ಕೋಟಿ ಠೇವಣಿ ಸಂಗ್ರಹಿಸ­ಲಾಗಿದೆ ಎಂದು ಕೇಂದ್ರ ಹಣಕಾಸು ಸೇವೆಗಳ ಕಾರ್ಯದರ್ಶಿ ಜಿ.ಎಸ್‌. ಸಂಧು ಹೇಳಿದರು.

ಇಲ್ಲಿ ಸೋಮವಾರ ನಡೆದ ಭಾರತ–ಅಮೆರಿಕ ವಾಣಿಜ್ಯೋದ್ಯಮಿ­ಗಳ ವಾರ್ಷಿಕ ಸಭೆಯಲ್ಲಿ ಮಾತ­ನಾಡಿದ ಅವರು, ಆ.28ರಿಂದ ಸೆ.25ರವರೆಗೆ 5 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ಒಟ್ಟಾರೆ 7.5 ಕೋಟಿ ಖಾತೆಗಳನ್ನು ತೆರೆಯುವುದು ಯೋಜನೆ­ಯ ಉದ್ದೇಶಿತ ಗುರಿ. ಅದರಲ್ಲಿ ಶೇ70­ರಷ್ಟನ್ನು ಈಗಾಗಲೇ ಸಾಧಿಸಿ­ದ್ದೇವೆ. ಈ ಮುನ್ಸೂಚನೆ ಅರಿತು­ಕೊಂಡೇ ಭಾರತೀಯ ರಿಸರ್ವ್  ಬ್ಯಾಂಕ್‌ (ಆರ್‌ಬಿಐ) ಗವರ್ನರ್‌ ರಘುರಾಂ ರಾಜನ್‌ ಅವರು ಖಾತೆ ತೆರೆಯಲು ಬ್ಯಾಂಕುಗಳು ತೋರು­ತ್ತಿರುವ ಆತುರದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು ಎಂದು ಸುದ್ದಿಗಾರರಿಗೆ ತಿಳಿಸಿದರು.

ಯೋಜನೆಯ ಉದ್ದೇಶಿತ ಗುರಿ ಮೀರದಂತೆ ಎಚ್ಚರಿಕೆ ವಹಿಸುವ ಕುರಿತಾಗಿ ಆರ್‌ಬಿಐ ಜತೆ ಚರ್ಚೆ ನಡೆಸಿದ್ದೇವೆ.  ಈ ಸಂಬಂಧ ರಾಜನ್‌ ಅವರು ಬ್ಯಾಂಕುಗಳ ಜತೆಯೂ ಮಾತುಕತೆ ನಡೆಸಿದ್ದಾರೆ ಎಂದು ಹೇಳಿದರು. ಖಾತೆ ನಕಲು ಆಗುವುದನ್ನು ತಡೆಯಲು ಖಾತೆದಾರರ ಬಯೋಮೆ­ಟ್ರಿಕ್‌ ಮಾಹಿತಿ ಪಡೆಯುವ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT