ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ತಿಂಗಳಲ್ಲಿ ಡಿವಿಎಸ್ ಆಸ್ತಿ ದುಪ್ಪಟ್ಟು

Last Updated 24 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌): ಹೊಸ ಸರ್ಕಾರ ರಚನೆಯಾದ ಐದು ತಿಂಗಳ ಅವಧಿಯಲ್ಲಿ ರೈಲ್ವೆ ಸಚಿವ ಡಿ.ವಿ. ಸದಾನಂದ ಗೌಡ ಸೇರಿ ಕೇಂದ್ರದ ಮೂವರು ಸಚಿವರ ಆಸ್ತಿ ಮೌಲ್ಯ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ‘ನ್ಯಾಷನಲ್‌ ಎಲೆಕ್ಷನ್‌ ವಾಚ್‌’ ಮತ್ತು ‘ಪ್ರಜಾಸತ್ತೀಯ ಸುಧಾರಣಾ ಸಂಘ’ ಶುಕ್ರವಾರ ಹೇಳಿವೆ.

ಚುನಾವಣಾ ಸಂದರ್ಭದಲ್ಲಿ 9.88 ಕೋಟಿಯಷ್ಟು ಆಸ್ತಿಯನ್ನು ಸದಾನಂದ ಗೌಡ ಅವರು ಘೋಷಿಸಿ­ಕೊಂಡಿದ್ದರು. ಕೇಂದ್ರ ಮಂತ್ರಿ ಮಂಡಲದ ಸದಸ್ಯರ ಆಸ್ತಿ ಘೋಷಣೆ ನಿಯಮದಯಡಿ­ಯಲ್ಲಿ ಇತ್ತೀಚೆಗೆ  ಪ್ರಧಾನಿ ಕಾರ್ಯಾ­ಲಯಕ್ಕೆ ಅವರೇ ಸಲ್ಲಿಸಿ­ರುವ ಘೋಷಣೆ­ಯಲ್ಲಿ 20.35 ಕೋಟಿ ಆಸ್ತಿಯನ್ನು ಘೋಷಿ­ಸಿ­­­ಕೊಂಡಿ­ದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಭಾರಿ ಕೈಗಾರಿಕೆ ಮತ್ತು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಖಾತೆ ರಾಜ್ಯ ಸಚಿವ ಪಿ.ರಾಧಾಕೃಷ್ಣನ್‌ ಅವರ ಆಸ್ತಿ ಮೌಲ್ಯ 2.98 ಕೋಟಿ, ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ಆಸ್ತಿ 1.1 ಕೋಟಿಯಷ್ಟು ವೃದ್ಧಿಸಿದೆ. ಇದೇ ವೇಳೆಗೆ 16 ಸಚಿವರು ಆಸ್ತಿ ಮೌಲ್ಯ ಇಳಿಕೆಯಾಗಿದೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು 3.89 ಕೋಟಿಯಷ್ಟು ಆಸ್ತಿ ಇಳಿದಿದೆ. ಅವರು ಚುನಾವಣಾ ಸಂದರ್ಭದಲ್ಲಿ 17.55 ಕೋಟಿ ಆಸ್ತಿ ಘೋಷಿಸಿದ್ದರು. ಹಾಗೆಯೇ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಖಾತೆ ರಾಜ್ಯ ಸಚಿವ ವಿ.ಕೆ. ಸಿಂಗ್‌ ಅವರ ಆಸ್ತಿಯಲ್ಲಿ 3.13 ಕೋಟಿ, ಆರೋಗ್ಯ ಸಚಿವ ಹರ್ಷವರ್ಧನ್‌ ಅವರ 1.28 ಕೋಟಿಯಷ್ಟು ಆಸ್ತಿ ಇಳಿಕೆ ಆಗಿದೆ ಎಂದು ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT