ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

` 5 ಭಕ್ಷೀಸು ಕೊಟ್ಟಿದ್ದ ಧವನ್‌!

Last Updated 20 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೊ) ನಮ್ಮ ಯುವ ವಿಜ್ಞಾನಿಗಳ ತಂಡಕ್ಕೆ ಒಪ್ಪಿಸಲಾಗಿದ್ದ ಯೋಜನೆ ಯಶಸ್ವಿ ಗೊಳಿಸಿದರೆ ಒಂದು ತಿಂಗಳ ಪೂರ್ತಿ ಸಂಬಳವನ್ನು ಕೊಡುವ ಭರವಸೆ ನೀಡಿದ್ದ ಪ್ರೊ. ಸತೀಶ್‌ ಧವನ್‌, ಕೊನೆಗೆ ಕೊಟ್ಟಿದ್ದು ಮಾತ್ರ ಐದು ರೂಪಾಯಿ’

1970ರ ದಶಕದಲ್ಲಿ ನಡೆದ ಆ ಘಟನೆ ನೆನಪಿಸಿಕೊಂಡು ಸಭೆಯನ್ನು ನಗೆಗಡಲಲ್ಲಿ ತೇಲಿಸಿದವರು ಹಿರಿಯ ಬಾಹ್ಯಾಕಾಶ ವಿಜ್ಞಾನಿ ಡಾ. ಕೆ. ಕಸ್ತೂರಿರಂಗನ್‌. ಭಾರತೀಯ ಎಂಜಿನಿ ಯರ್‌ಗಳ ಸಂಸ್ಥೆಯ ರಾಜ್ಯ ಘಟಕ ಸೋಮವಾರ ಏರ್ಪಡಿಸಿದ್ದ ಕಾರ್ಯ ಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

‘ನಮ್ಮ ತಂಡಕ್ಕೆ ವಹಿಸಿದ್ದ ಯೋಜನೆ ವಿಫಲವಾಗುವಂತೆ ತೋರುತ್ತಿತ್ತು. ಆಗ ಪ್ರೊ. ಧವನ್‌ ಯೋಜನೆಯನ್ನು ಯಶಸ್ವಿ ಗೊಳಿಸಿದರೆ ನಾನು ಒಂದು ತಿಂಗಳ ಸಂಬಳ ಕೊಡುತ್ತೇನೆ. ವಿಫಲವಾದರೆ ನೀವೆಲ್ಲ ತಿಂಗಳ ಸಂಬಳವನ್ನು ಬಿಟ್ಟು ಕೊಡಬೇಕು ಎಂಬ ಪಂಥಾಹ್ವಾನ ನೀಡಿದರು. ಆ ಸವಾಲು ಸ್ವೀಕರಿಸಿದ ನಾವು ಯೋಜನೆಯನ್ನು ಯಶಸ್ವಿಗೊ ಳಿಸಿದೆವು’ ಎಂದು ಸ್ಮರಿಸಿದರು.

‘ಯೋಜನೆ ಯಶಸ್ವಿಯಾದ ಬಳಿಕ ಪ್ರೊ. ಧವನ್‌ ಬಳಿ ಹೋಗಿ ಅವರ ಸವಾಲನ್ನು ನೆನಪು ಮಾಡಿಕೊಟ್ಟಾಗ ತಕ್ಷಣ ಜೇಬಿನಿಂದ ಐದು ರೂಪಾಯಿ ತೆಗೆದು ಸಹಿ ಮಾಡಿಕೊಟ್ಟರು. ನಾವೆಲ್ಲ ಹುಸಿಮುನಿಸು ತೋರಿ, ತಿಂಗಳ ಸಂಬಳ ಬೇಕು ಸರ್‌ ಎಂಬ ಪಟ್ಟು ಹಿಡಿದೆವು’ ಎಂದು ಹೇಳಿದರು.

‘ನನಗೆ ಸಂಬಳ ಕೊಡುವುದು ಭಾರ ತೀಯ ವಿಜ್ಞಾನ ಸಂಸ್ಥೆ. ಇಸ್ರೊ ದಿಂದ ಪ್ರತಿ ತಿಂಗಳು  1 ಗೌರವ ಧನವ ನ್ನಷ್ಟೇ ಸಂಬಳವನ್ನಾಗಿ ಪಡೆಯುತ್ತಿದ್ದೇನೆ. ಹೀಗಾಗಿ ನಾನು ಇಸ್ರೊದಿಂದ ಪಡೆದ ಐದು ತಿಂಗಳ ಸಂಬಳವನ್ನು ನಿಮಗೆ ಕೊಟ್ಟಿದ್ದೇನೆ’ ಎಂಬ ವಿವರಣೆಯನ್ನು ಪ್ರೊ. ಧವನ್‌ ಕೊಟ್ಟಾಗ ನಾವು ಮೂಕವಿಸ್ಮಿತರಾಗಿ ನಿಂತೆವು’ ಎಂದು ತಿಳಿಸಿದರು.

‘ವಿಜ್ಞಾನ ಕ್ಷೇತ್ರದಲ್ಲಿ ಹಲವು ಪ್ರತಿಷ್ಠಿತ ಪದವಿಗಳನ್ನು ಪಡೆದಿದ್ದ ಪ್ರೊ. ಧವನ್‌, ಇಂಗ್ಲಿಷ್‌ ಸಾಹಿತ್ಯದಲ್ಲೂ ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದರು. ಹೀಗಾಗಿ ನಮ್ಮ ಪ್ರಬಂಧದ ಸಣ್ಣ ದೋಷವನ್ನೂ ಅವರು ಗುರುತಿಸುತ್ತಿದ್ದರು. ಒಂದು ಯೋಜನೆ ಕುರಿತ ಪ್ರಬಂಧದ ಮೇಲೆ ಅವರು, ‘ಇದರಲ್ಲಿ ಯಾವ ಸಮ ಸ್ಯೆಯೂ ಇಲ್ಲವೆ? ನನಗೆ ಏಕೋ ಆತಂಕ ವಾಗುತ್ತಿದೆ’ ಎಂಬ ಶರಾ ಬರೆದಿದ್ದರು’ ಎಂದು ಕಸ್ತೂರಿರಂಗನ್‌ ಹೇಳಿದಾಗ ಸಭಾಂಗಣದಲ್ಲಿ ನಗೆಯ ಅಲೆ ಎದ್ದಿತು.

‘ಬಾಹ್ಯಾಕಾಶ ಕ್ಷೇತ್ರದ ಸಂಶೋಧನೆಗೆ ಮೊದಲಿನಿಂದಲೂ ಆರ್ಥಿಕ ಸಂಪನ್ಮೂ ಲದ ಕೊರತೆ ಇದ್ದೇ ಇದೆ. ಹೀಗಾಗಿ  ಅವರು, ಸಂಶೋಧನಾ ಕ್ಷೇತ್ರದಲ್ಲೂ ಸಾರ್ವಜನಿಕ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ಸಿಗಬೇಕು ಎನ್ನುವ ಪ್ರತಿಪಾ ದನೆ ಮಾಡಿದ್ದರು’ ಎಂದು ಹೇಳಿದರು. ‘ವೈಫಲ್ಯಗಳ ಬಗೆಗೂ ಅಧ್ಯಯನ ಮಾಡಬೇಕು ಎನ್ನುತ್ತಿದ್ದ ಅವರು, ಅತ್ಯಂತ ಕ್ಲಿಷ್ಟ ಪ್ರಶ್ನೆಗಳನ್ನೇ ಮುಂದಿ ಡುತ್ತಿದ್ದರು’ ಎಂದು ತಿಳಿಸಿದರು.

‘ಬಾಹ್ಯಾಕಾಶ ಸಂಶೋಧನಾ ಕ್ಷೇತ್ರಕ್ಕೆ ದೇಶದಲ್ಲಿ ಬೀಜಾಂಕುರ ಮಾಡಿದ ಮತ್ತೊಬ್ಬ ಶ್ರೇಷ್ಠ ವಿಜ್ಞಾನಿ ಎಂದರೆ ಅದು ವಿಕ್ರಮ್‌ ಸಾರಾಭಾಯಿ. ಸಂವಹನ ತುಂಬಾ ಕಷ್ಟವಾಗಿದ್ದ ದಿನಗಳವು. ದೇಶದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಟೆಲಿಗ್ರಾಂ ತಲು ಪಲು ಹತ್ತು ದಿನ ಬೇಕಾಗುತ್ತಿತ್ತು. ಆ ಬವಣೆ ತಪ್ಪಿಸಲು ಸಾರಾಭಾಯಿ ಅವರು ನೀಡಿದ ಕೊಡುಗೆ ದೊಡ್ಡದು’ ಎಂದು ಅವರು ಸ್ಮರಿಸಿದರು.
‘ಸಾರಾಭಾಯಿ ಅವರು ಹಾಕಿಕೊಟ್ಟ ಬುನಾದಿ ಮೇಲೆಯೇ ಇಸ್ರೊ ಇಷ್ಟೊಂ ದು ದೊಡ್ಡದಾಗಿ ಬೆಳೆದಿದೆ’ ಎಂದ ಅವರು, ‘ಯುವ ವಿಜ್ಞಾನಿಗಳ ಸಂಶೋ ಧನಾ ಚಟುವಟಿಕೆ ವೀಕ್ಷಿಸಲು ಅವರು ನಸುಕಿನಲ್ಲಿ ಎದ್ದು ಕ್ಯಾಂಪಸ್‌ಗೆ ಬರುತ್ತಿ ದ್ದರು’ ಎಂದು ಮೆಲುಕು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT