ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5.5 ಎಕರೆ ಅಧಿಸೂಚನೆ ರದ್ದು

ಶಿವರಾಮ ಕಾರಂತ ಬಡಾವಣೆ
Last Updated 26 ನವೆಂಬರ್ 2014, 20:35 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಯಲಹಂಕ ಹೋಬಳಿಯ ರಾಮಗೊಂಡ­ಹಳ್ಳಿ­ಯಲ್ಲಿ ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಬೆಂಗಳೂರು ನಗರಾಭಿ­ವೃದ್ಧಿ ಪ್ರಾಧಿಕಾರ ಹೊರಡಿಸಿದ್ದ 5.5 ಎಕರೆಯ ಮೇಲಿನ ಅಧಿಸೂಚನೆಯನ್ನು ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.

ಭೂಸ್ವಾಧೀನ ಅಧಿಸೂಚನೆ ಪ್ರಶ್ನಿಸಿ ಎಸ್.ರಾಮರೆಡ್ಡಿ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ನೀಡಿದೆ.

‘ಬಡಾವಣೆ ನಿರ್ಮಾಣಕ್ಕೆ ೨೦೦೮ರಲ್ಲೇ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿ­ಕಾರವು ಈ ತನಕ ಬಡಾವಣೆ ನಿರ್ಮಾಣದ ಯೋಜನೆಯನ್ನು ತಯಾರಿ­ಸಿಲ್ಲ. ಈಗಾಗಲೇ ಪ್ರಾಥಮಿಕ ಅಧಿಸೂಚನೆ  ಅವಧಿ ಅಂತ್ಯಗೊಂಡಿದೆ’ ಎಂಬ ಕಾರಣ ನೀಡಿ ನ್ಯಾಯಪೀಠವು ಅಧಿಸೂಚನೆಯನ್ನು ರದ್ದುಗೊಳಿಸಿದೆ.

ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಭೂಮಿ ಸ್ವಾಧೀನ­ಪಡಿಸಿಕೊಳ್ಳಲು ಬೆಂಗಳೂರು ನಗರಾಭಿ­ವೃದ್ಧಿ ಪ್ರಾಧಿಕಾರ ೨೦೦೮ರಲ್ಲಿ ಅಧಿ­ಸೂಚನೆ ಹೊರಡಿಸಿತ್ತು. ಈ ವೇಳೆ  ಸುಮಾರು ೩ ಸಾವಿರ ಎಕರೆ ಜಮೀನಿ­ನಲ್ಲಿ ಅಭಿವೃದ್ಧಿಗೊಳಿಸಲು ಯೋಜಿಸ­ಲಾಗಿದ್ದ ಈ ಬಡಾವಣೆಗೆ  ರಾಮ­ಗೊಂಡಹಳ್ಳಿಯ ಸರ್ವೆ ನಂ. ೮ರಲ್ಲಿನ ಅರ್ಜಿದಾರರ  ೫.೫ ಎಕರೆ ಜಮೀನನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ ವಶಪಡಿಸಿಕೊಂಡ ಭೂಮಿ­ಯನ್ನು ಬಡಾವಣೆ ಯೋಜನೆಗೆ ಬಳ­ಸುವ   ದಿಸೆಯಲ್ಲಿ ಯಾವುದೇ ಪ್ರಗತಿ ಆಗಿರಲಿಲ್ಲ. ಇದನ್ನು ಅರ್ಜಿದಾರರು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT