ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

66ನೇ ಗಣರಾಜ್ಯೋತ್ಸವಕ್ಕೆ ಸಾಕ್ಷಿಯಾದ ಒಬಾಮ

ರಾಜಪಥದಲ್ಲಿ ಒಬಾಮ ದಂಪತಿ, ಮೋದಿ, ರಾಷ್ಟ್ರಪತಿಗಳಿಂದ ಭಾರತೀಯ ಸಂಸ್ಕೃತಿಯ ಆಸ್ವಾದ
Last Updated 26 ಜನವರಿ 2015, 10:42 IST
ಅಕ್ಷರ ಗಾತ್ರ

ನವದೆಹಲಿ(ಐಎಎನ್ ಎಸ್): ರಾಜಧಾನಿಯ ರಾಜಪಥದಲ್ಲಿ ಕರ್ನಾಟಕದ ಚನ್ನಪಟ್ಟಣದ ಬೊಂಬೆಯ ಸ್ತಬ್ಧಚಿತ್ರ ಮೊದಲುಗೊಂಡು ಭಾರತದ ಸಾಂಸ್ಕೃತಿಕ ಲೋಕವೇ ಮೈದಳೆದಿತ್ತು. ಸೇನಾ ತುಕಡಿಗಳ ಕವಾಯತು, ಬ್ಯಾಂಡ್, ಮೈ ನವಿರೇಳಿಸುವ ಮೋಟಾರ್ ಬೈಕ್ ಸಾಹಸ. ಆಗಸದಲ್ಲಿ ವಾಯು ಪಡೆ ಮೂಡಿಸಿದ ಚಿತ್ತಾರ. ಈ ಮಧ್ಯೆ ವರುಣನ ಸಿಂಚನ...
- ಸೋಮವಾರ ಇಂಥದ್ದೊಂದು ಅಭೂತಪೂರ್ವ, ಐತಿಹಾಸಿಕ 66ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಅವರ ಪತ್ನಿ ಮಿಷೆಲ್, ಲಕ್ಷಾಂತರ ದೇಶಾಭಿಮಾನಿಗಳು ಸಾಕ್ಷಿಯಾದರು.

ರಾಷ್ಟ್ರದ ರಾಜಧಾನಿಯಲ್ಲಿ ಜರುಗುತ್ತಿರುವ ಗಣರಾಜ್ಯೋತ್ಸವದಲ್ಲಿ ಅತಿಥಿಯಾಗಿ ಭಾಗಿಯಾಗಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಪತ್ನಿ ಮಿಷೆಲ್ ಅವರೊಡಗೂಡಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಅತ್ಯಾಕರ್ಷಕ ಪಥ ಸಂಚಲನವನ್ನು ಗುಂಡು ನಿರೋಧಕ ಗಾಜಿನ ಭದ್ರ ಕೋಟೆಯಲ್ಲಿ ಕುಳಿತು ವೀಕ್ಷಿಸಿದರು. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಉಪಸ್ಥಿತಿರಿದ್ದರು.

ಬೆಳಿಗ್ಗೆ ಇಂಡಿಯಾ ಗೇಟ್ ಬಳಿ ಆಗಮಿಸಿದ ಪ್ರಧಾನಿ ಮೋದಿ ಅವರು, ಇಂಡಿಯಾ ಗೇಟ್ ನಲ್ಲಿ 'ಅಮರ್ ಜವಾನ್ ಜ್ಯೋತಿ' ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ನಂತರ ನೆರೆದಿದ್ದ ಜನರತ್ತ ಕೈ ಬೀಸಿದ ಮೋದಿ ಅಲ್ಲಿಂದಲೇ ಗಣರಾಜ್ಯೋತ್ಸವ ಶುಭ ಕೋರಿದರು.

ನಂತರ ಅಮೆರಿಕ ಭದ್ರತಾ ಪಡೆ ತಂದಿದ್ದ ವಾಹದಲ್ಲಿ ರಾಜಪಥಕ್ಕೆ ಆಗಮಿಸಿದ ಒಬಾಮ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಗಿತಿಸಿದರು. ಈ ವೇಳೆ ಒಬಾಮ ಅವರು ಜನರತ್ತ ಕೈ ಬೀಸಿ ಶುಭ ಕೋರಿದರು.

ಸಾಂಸ್ಕೃತಿಕ ಲೋಕವನ್ನೇ ಸೃಷ್ಟಿಸಿದ್ದ ರಾಷ್ಟ್ರದ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದ ಕರ್ನಾಟಕದ ಚನ್ನಪಟ್ಟಣದ ಬೊಂಬೆಯ ಸ್ತಬ್ಧಚಿತ್ರ ಇಡೀ ಸಾಂಸ್ಕೃತಿಕ ವೈವಿಧ್ಯದ ಸಾರಥ್ಯ ವಹಿಸಿ ಮುನ್ನಡೆಯಿತು. ಇದು ರಾಜ್ಯದ ಹೆಗ್ಗಳಿಕೆ.

ಪ್ರಸಕ್ತ ಪಥಸಂಚಲನದ ಧ್ಯೇಯವಾದ ‘ಸ್ತ್ರೀ ಸಬಲೀಕರಣ’ ಸ್ತಬ್ಧಚಿತ್ರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿದ್ಧಪಡಿಸಿತ್ತು. ಹೆಣ್ಣು ಮಗುವೊಂದನ್ನು ಹಿಡಿದ ಮಹಿಳೆಯರ ಗುಂಪು ಲಾಲಿ, ಹಾಗೂ ವಿವಿಧ ಹಾಡುಗಳನ್ನು ಹೇಳುತ್ತಾ ಗಮನ ಸೆಳೆಯಿತು.

ಸರ್ಕಾರದ ಯೋಜನೆಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಸ್ತಬ್ಧಚಿತ್ರವನ್ನು ‘ಮಾ ಗಂಗಾ’ ಘೋಷ ವಾಖ್ಯದೊಂದಿಗೆ ನೀರಾವರಿ ಇಲಾಖೆ ಸಿದ್ಧಪಡಿಸಿತ್ತು. ಛತ್ತೀಸಗಡದ ಸ್ತಬ್ಧಚಿತ್ರ ದಸರಾ ಸಾಂಸ್ಕೃತಿಕ ಕಲಾ ಲೋಕ ಬಿಂಬಿಸಿತು. ಜನಧನ ಯೋಜನೆ, ನ್ಯಾಯಕ್ಕಾಗಿ ನಡಿಗೆ, ಅಣು ಶಕ್ತಿ ಸ್ಥಾವರ ಮತ್ತು ಯೋಜನೆ ಕುರಿತಂತೆ ಸ್ತಬ್ಧಚಿತ್ರಗಳು ಗಮನಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT