ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

71 ಸಂಸದರ ವಿರುದ್ಧ ಅಪರಾಧ ಪ್ರಕರಣ

Last Updated 25 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಈ ಬಾರಿ ಮರು ಆಯ್ಕೆಯಾದ 165 ಸಂಸದರ ಪೈಕಿ 71 ಮಂದಿ ವಿರುದ್ಧ ಅಪರಾಧ ಪ್ರಕರಣಗಳು ಇವೆ. ಈ ಪೈಕಿ 13 ಸಂಸದರ ವಿರುದ್ಧ ಕಳೆದ ಐದು ವರ್ಷಗಳಲ್ಲಿ ಅತಿ ಹಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ.

ಆಗ್ರಾದ ಸಂಸದ ಡಾ.ರಾಮಶಂಕರ್‌ ಕಠೇರಿಯಾ ಅವರ ವಿರುದ್ಧ 21 ಪ್ರಕರಣಗಳು ದಾಖಲಾಗಿವೆ. 2009ರಲ್ಲಿ ಅವರ ವಿರುದ್ಧ ಯಾವುದೇ ಪ್ರಕರಣ ಇರಲಿಲ್ಲ. ಮಹಾರಾಷ್ಟ್ರದ ಹಾತ್‌ಕಣಗ್ಲೆ ಸಂಸದ ರಾಜು ಶೆಟ್ಟಿ  ಹಾಗೂ ಕಾಂಗ್ರೆಸ್‌ ಸಂಸದ ಅಧಿರ್‌ ರಂಜನ್‌ ಚೌಧರಿ ವಿರುದ್ಧ 12 ಪ್ರಕರಣಗಳು ಇವೆ.

ನರೇಂದ್ರ ಮೋದಿ, ಅಡ್ವಾಣಿ ಮೇಲೂ ಆರೋಪ
(ಅಹಮದಾಬಾದ್‌ ವರದಿ): ಗುಜರಾತ್‌ನಿಂದ ಆಯ್ಕೆಯಾದ ನರೇಂದ್ರ ಮೋದಿ ಮತ್ತು ಎಲ್‌.ಕೆ.ಅಡ್ವಾಣಿ ಸೇರಿದಂತೆ 10 ಬಿಜೆಪಿ ಸಂಸದರು ಕ್ರಿಮಿನಲ್‌ ಆರೋಪಗಳನ್ನು ಹೊತ್ತವರಾಗಿದ್ದಾರೆ.

ರಾಜ್ಯದಿಂದ ಸ್ಪರ್ಧಿಸಿದ್ದವರಲ್ಲಿ 66 ಅಭ್ಯರ್ಥಿಗಳು ಕ್ರಿಮಿನಲ್‌ ಆರೋಪಿಗಳಾಗಿದ್ದರು. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಿಂದ ಹಿಡಿದು ಹತ್ಯೆ ಯತ್ನದಂತಹ ವಿವಿಧ ಆರೋಪಗಳು ಅವರ ವಿರುದ್ಧ ಇವೆ.

ಮೋದಿ ಅವರು ನಗರದಲ್ಲಿ ಏ.30ರಂದು ‘ಕಮಲ ಚಿಹ್ನೆ’ಯನ್ನು ಪ್ರದರ್ಶಿಸಿದ್ದಕ್ಕಾಗಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಹೊರಿಸಿ ಎಫ್‌ಐಆರ್‌ ದಾಖಲಿಸಲಾಗಿತ್ತು.

ಗಾಂಧಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೀರ್ತಿಭಾಯಿ ಪಟೇಲ್‌ ಅವರನ್ನು ಸೋಲಿಸಿದ ಎಲ್‌.ಕೆ.ಅಡ್ವಾಣಿ ಅವರು 1992ರ ಬಾಬ್ರಿ ಮಸೀದಿ ನೆಲಸಮ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT