ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ಮಂದಿ ಬಿಡುಗಡೆಗೆ ಎಟಿಎಸ್‌ ವಿರೋಧ

ಮಾಲೆಗಾಂವ್‌ ಸ್ಫೋಟ ಪ್ರಕರಣ
Last Updated 23 ಜೂನ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): 2006 ರಲ್ಲಿ ನಡೆದ ಮಾಲೆಗಾಂವ್‌ ಸ್ಫೋಟ ಪ್ರಕರಣ­ದಲ್ಲಿ ಭಾಗಿಯಾದ ಆರೋಪದಲ್ಲಿ ಬಂಧನ ಕ್ಕೊಳಗಾಗಿರುವ ಒಂಬತ್ತು ಮಂದಿ ಮುಸ್ಲಿಮರ ಬಿಡುಗಡೆ ಮನವಿಗೆ ಮಹಾ ರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್‌) ಪೊಲೀಸರು ವಿರೋಧ ­ವ್ಯಕ್ತ­ಪಡಿಸಿದ್ದಾರೆ.

ಒಂಬತ್ತು ಆರೋಪಿಗಳ ಬಿಡುಗಡೆ ಮನವಿ ಬಗ್ಗೆ ಸಿಬಿಐ ಮತ್ತು ಎಟಿಎಸ್‌್ ಪ್ರತಿಕ್ರಿಯೆಯನ್ನು ನ್ಯಾಯಾಲಯ  ಪಡೆದು­­ಕೊಳ್ಳಬೇಕು ಎಂದು  ಬಲ­ಪಂಥೀಯ ಹಿಂದೂ ಸಂಘಟನೆಯ ಆರೋಪಿ ಒಬ್ಬರು ಬೇಡಿಕೆ ಸಲ್ಲಿಸಿದ್ದರು. ಅದಕ್ಕೆ ಅನುಗುಣವಾಗಿ ಪ್ರತಿಕ್ರಿಯೆ ಸಲ್ಲಿ­ಸು­ವಂತೆ ನ್ಯಾಯಾಲಯ ಎಟಿಎಸ್‌ಗೆ ನಿರ್ದೇಶನ ನೀಡಿತ್ತು.

ನಂತರದಲ್ಲಿ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ಎನ್‌ಐಎ, ಒಂಬತ್ತು ಆಪಾದಿತರನ್ನು ದೋಷ ಮುಕ್ತಗೊಳಿಸಿ ಸ್ಫೋಟದ ಹಿಂದೆ ಹಿಂದೂ ಉಗ್ರವಾದಿ ಗುಂಪಿನ ಸದಸ್ಯರ ಕೈವಾಡವಿದೆ ಎಂದು ಆರೋಪಿಸಿತ್ತು.

ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಎಟಿಎಸ್‌್, ಸ್ಫೋಟದಲ್ಲಿ ಈ  ಒಂಬತ್ತು ಆರೋಪಿಗಳು ಭಾಗಿಯಾ­ಗಿ­ದ್ದಾರೆ ಎಂಬುದು ತನಿಖೆಯಿಂದ ಸಾಬೀತಾ­ಗಿದೆ. ಅಪರಾಧ ಕೃತ್ಯದಲ್ಲಿ ಅವರು ತೊಡಗಿದ್ದು ಸ್ಫೋಟದ ಸ್ಥಳದಲ್ಲಿ ಸಂಗ್ರ­ಹಿ­ಸಲಾದ ಮಾಹಿತಿಯಿಂದ ಬಹಿ­ರಂಗ ವಾಗಿದೆ. ಆದ್ದರಿಂದ ಇವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT