ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

90 ಸದಸ್ಯರ ಅವಿರೋಧ ಆಯ್ಕೆ

ಉಡುಪಿ ತಾಲ್ಲೂಕು: 29ರಂದು ಗ್ರಾಮ ಪಂಚಾಯಿತಿ ಚುನಾವಣಿ- ವ್ಯಾಪಕ ಸಿದ್ಧತೆ
Last Updated 27 ಮೇ 2015, 5:01 IST
ಅಕ್ಷರ ಗಾತ್ರ

ಉಡುಪಿ: ಗ್ರಾಮ ಪಂಚಾಯಿತಿ ಚುನಾವ ಣೆಯಲ್ಲಿ ಉಡುಪಿ ತಾಲ್ಲೂಕಿನ ಒಟ್ಟು 90 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾಮ ಪಂಚಾಯಿತಿ ಹೆಸರು, ಕ್ಷೇತ್ರದ ಸಂಖ್ಯೆ ಮತ್ತು ಹೆಸರು ಆಯ್ಕೆಯಾದ ಅಭ್ಯರ್ಥಿಯ ಹೆಸರು ಕೆಳಕಂಡಂತಿದೆ.

ಕೋಡಿ ಗ್ರಾಮ ಪಂಚಾಯಿತಿಯ ಕೋಡಿ 2 ಕ್ಷೇತ್ರದಲ್ಲಿ ಗುಲಾಬಿ, ಕೋಡಿ3 ಕ್ಷೇತ್ರದಲ್ಲಿ ರಂಜನಿ, ಕೋಡಿ4 ಕ್ಷೇತ್ರದಲ್ಲಿ ಆಂಥೋಣಿ ಡಿಸೋಜ. ಐರೋಡಿ ಗ್ರಾಮ ಪಂಚಾಯಿತಿಯ ಬಾಳ್ಕುದ್ರು2 ಕ್ಷೇತ್ರದಲ್ಲಿ ಸಕ್ಕು ಗುರಿಬೆಟ್ಟು ಆಯ್ಕೆಯಾಗಿ ದ್ದಾರೆ. ಬಾರ್ಕೂರು ಗ್ರಾಮ ಪಂಚಾಯಿ ತಿಯ ಕಚ್ಚೂರು1 ಕ್ಷೇತ್ರದಲ್ಲಿ ವಸಂತಿ ಮೂಡುಹಿತ್ಲು. ವಡ್ಡರ್ಸೆ ಗ್ರಾಮ ಪಂಚಾ ಯಿತಿಯ ಆಚ್ಲಾಡಿ1 ಕ್ಷೇತ್ರದಲ್ಲಿ ಹೇಮಾ, ವಡ್ಡರ್ಸೆ 1 ಕ್ಷೇತ್ರದಲ್ಲಿ ನಾಗರತ್ನಾ ಆಯ್ಕೆಯಾಗಿದ್ದಾರೆ.

ಯಡ್ತಾಡಿ ಗ್ರಾಮ ಪಂಚಾಯಿತಿಯ ಹೇರಾಡಿ2 ಕ್ಷೇತ್ರದಲ್ಲಿ ಪ್ರಭಾವತಿ ಜೆ ನಾಯ್ಕ, ಯಡ್ತಾಡಿ3 ಕ್ಷೇತ್ರದಲ್ಲಿ ಸೀಮಾ, ಸಿರಿಯಾರ ಗ್ರಾಮ ಪಂಚಾಯಿತಿಯ ಶಿರಿಯಾರ3 ಕ್ಷೇತ್ರದಲ್ಲಿ ಸೂರು ಆಯ್ಕೆ ಯಾಗಿದ್ದಾರೆ. ಬಿಲ್ಲಾಡಿ ಗ್ರಾಮ ಪಂಚಾ ಯಿತಿಯ ಬಿಲ್ಲಾಡಿ2 ಕ್ಷೇತ್ರದಲ್ಲಿ ಗುಲಾಬಿ, ಆವರ್ಸೆ ಗ್ರಾಮ ಪಂಚಾಯಿತಿಯ ಹಿಲಿಯಾನ1 ಕ್ಷೇತ್ರದಲ್ಲಿ ಶಾರದಾ ಮತ್ತು ಸುಶೀಲಾ ಬಾಯಿ, ಹಿಲಿಯಾನ3 ಕ್ಷೇತ್ರ ದಲ್ಲಿ ಅಬ್ದುಲ್‌ ಸಮದ್‌, ಬುಡ್ಡಿ ಯಾನೆ ವಿಜಯಲಕ್ಷ್ಮೀ, ನೇತ್ರಾವತಿ, ಸಂತೋಷ್‌ ಶೆಟ್ಟಿ, ಕುಕ್ಕುಂಜೆ1 ಕ್ಷೇತ್ರದಲ್ಲಿ ಸುಶೀಲಾ, ಜಯರಾಮಶೆಟ್ಟಿ, ಕುಕ್ಕುಂಜೆ2 ಕ್ಷೇತ್ರದಲ್ಲಿ ಪ್ರಸಾದ್‌ ಆಯ್ಕೆಯಾಗಿದ್ದಾರೆ.

ಹೆಗ್ಗುಂಜೆ ಗ್ರಾಮ ಪಂಚಾಯಿತಿಯ ಹೆಗ್ಗುಂಜೆ2 ಕ್ಷೇತ್ರದಲ್ಲಿ ಬೆಳ್ಳ ನಾಯ್ಕ, ಕಾಡೂರು ಗ್ರಾಮ ಪಂಚಾಯಿತಿಯ ಕಾಡೂರು1 ಕ್ಷೇತ್ರದಲ್ಲಿ ಸುಪ್ರಿತಾ, ನಡೂರು1 ಕ್ಷೇತ್ರದಲ್ಲಿ ವನಜಾ, ನಡೂರು2 ಕ್ಷೇತ್ರದಲ್ಲಿ ನಾಗರತ್ನಾ, 16 ಕೊಕ್ಕರ್ಣೆ ಗ್ರಾಮ ಪಂಚಾಯಿತಿಯ ಕುದಿ1 ಕ್ಷೇತ್ರದಲ್ಲಿ ರಾಜೀವ ಶೆಟ್ಟಿ, ಶೋಭಾ, ಕುದಿ2 ಕ್ಷೇತ್ರದಲ್ಲಿ ವಿಜಯಲಕ್ಷ್ಮೀ ಮತ್ತು ಪ್ರತಿಮಾ ಶೆಟ್ಟಿ, ಪ್ರಸನ್ನ, ಕುದಿ3ನೇ ಕ್ಷೇತ್ರದಲ್ಲಿ ಜ್ಯೋತಿ, ವಸಂತ ಕುಮಾರ, ಕುದಿ4ನೇ ಕ್ಷೇತ್ರದಲ್ಲಿ ಕೃಷ್ಣಶೆಟ್ಟಿ ಮತ್ತು ಆಶಾಲತಾ, ಪೆಜಮಂಗೂರು1 ಕ್ಷೇತ್ರದಲ್ಲಿ ವಸಂತ, ಸಂತೋಷ, ಸುಧಾ ಎಸ್‌ ಕಾಮತ್‌, ಪೆಜಮಂಗೂರು2ನೇ ಕ್ಷೇತ್ರ ದಲ್ಲಿ ಶಕೀಲಾ, ಕೆ. ವಸಂತಾ ಸೇರ್ವೇ ಗಾರ್‌, ಪೆಜಮಂಗೂರು3ನೇ ಕ್ಷೇತ್ರದಲ್ಲಿ ಶಶಿಕಲಾ ಪುಟ್ಗುಳಿ, ಜಯಂತ ಚಗ್ರಿಬೆಟ್ಟು, ಲಕ್ಷ್ಮೀ ಚಗ್ರಿಬೆಟ್ಟು, ಪೆಜಮಂಗೂರು4ನೇ ಕ್ಷೇತ್ರದಲ್ಲಿ ರಘುವೀರ, ನಿರ್ಮಲಾ, ದೇವಕಿ, ರಾಘವೇಂದ್ರ ಆಯ್ಕೆಯಾಗಿದ್ದಾರೆ.

ಚೇರ್ಕಾಡಿ ಗ್ರಾಮ ಪಂಚಾಯಿತಿಯ ಚೇರ್ಕಾಡಿ1 ಕ್ಷೇತ್ರದಲ್ಲಿ ಸುಗುಣ, ಕಸ್ತೂರಿ ವಿ ಪ್ರಭು, ನಾರಾಯಣ ನಾಯ್ಕ, ಚೇರ್ಕಾಡಿ 2 ಕ್ಷೇತ್ರದಲ್ಲಿ ಕಿಟ್ಟಪ್ಪ ಅಮಿನ್‌, ಉದಯಕುಮಾರ ಶೆಟ್ಟಿ, ಜಾನೆಟ್‌ ಡಿಸೋಜ, ಚೇರ್ಕಾಡಿ3ನೇ ಕ್ಷೇತ್ರದಲ್ಲಿ ಸುಶೀಲಾ, ಹರೀಶ, ಚೇರ್ಕಾಡಿ4ನೇ ಕ್ಷೇತ್ರದಲ್ಲಿ ನಾಗರಾಜ ನಾಯ್ಕ, ಸವಿತಾ, ಚೇರ್ಕಾಡಿ5ನೇ ಕ್ಷೇತ್ರದಲ್ಲಿ ಸುರೇಶ, ಮಾಲತಿ, ಚೇರ್ಕಾಡಿ6 ಕ್ಷೇತ್ರದಲ್ಲಿ ಮುಕುಂದ, ಕಮಲಾಕ್ಷ ಹೆಬ್ಬಾರ್‌, ಸುಜಾತಾ ಆಯ್ಕೆಯಾಗಿದ್ದಾರೆ.

ಕಳತ್ತೂರು ಗ್ರಾಮ ಪಂಚಾಯಿತಿಯ ಕಳತ್ತೂರು 2 ಕ್ಷೇತ್ರದಲ್ಲಿ ವಿಮಲಾ, ಕೆಂಜೂರು2 ಕ್ಷೇತ್ರದಲ್ಲಿ ಆದರ್ಶ ಶೆಟ್ಟಿ, ಮಾಲತಿ ಬಾಯಿ, ಕೆಂಜೂರು 3ನೇ ಕ್ಷೇತ್ರದಲ್ಲಿ ದೀಪಾ ಆಯ್ಕೆಯಾಗಿದ್ದಾರೆ. 25ನೇ ವಾರಂಬಳ್ಳಿ ಗ್ರಾಮ ಪಂಚಾ ಯಿತಿಯ ವಾರಂಬಳ್ಳಿ4 ಕ್ಷೇತ್ರದಲ್ಲಿ ಕವಿತಾ, ವಾರಂಬಳ್ಳಿ5 ಕ್ಷೇತ್ರದಲ್ಲಿ ಜೆನೆಟ್‌ ಮೇರಿ, ತೋನ್ಸೆ ಗ್ರಾಮ ಪಂಚಾಯಿತಿಯ ಪಡುತೋನ್ಸೆ3 ಕ್ಷೇತ್ರದಲ್ಲಿ ಲತಾ, ನೇ ತೆಂಕನಿಡಿಯೂರು ಗ್ರಾಮ ಪಂಚಾ ಯಿತಿಯ ಕೆಳಾರ್ಕಳಬೆಟ್ಟು3 ಕ್ಷೇತ್ರದಲ್ಲಿ  ಮೀನಾ ಲೊರೇನಾ ಪಿಂಟೋ, ಬಡಾ ನಿಡಿಯೂರು ಗ್ರಾಮ ಪಂಚಾಯಿತಿಯ ಬಡಾನಿಡಿಯೂರು4 ಕ್ಷೇತ್ರದಲ್ಲಿ ಶಶಿಕಲಾ, ಆತ್ರಾಡಿ ಗ್ರಾಮ ಪಂಚಾಯಿತಿಯ ಹಿರೇಬೆಟ್ಟು3 ಕ್ಷೇತ್ರದಲ್ಲಿ ಅಶೋಕ್‌ ಶೆಟ್ಟಿ, 41ನೇ ಮಣಿಪುರ ಗ್ರಾಮ ಪಂಚಾ ಯಿತಿಯ ಮಣಿಪುರ3 ಕ್ಷೇತ್ರದಲ್ಲಿ ಮೈಮು ನಾಬಿ ಆಯ್ಕೆಯಾಗಿದ್ದಾರೆ.

ಅಲೆವೂರು ಗ್ರಾಮ ಪಂಚಾಯಿತಿಯ ಕೊರಂಗ್ರಪಾಡಿ 1ನೇ ಕ್ಷೇತ್ರದಲ್ಲಿ ಕೃಷ್ಣ ಜತ್ತನ್‌, ಜಯಲಕ್ಷ್ಮೀ, ಕೊರಂಗ್ರಪಾಡಿ3 ಕ್ಷೇತ್ರದಲ್ಲಿ ಕವಿತಾ ಕೆ, ಬೆಳ್ಳೆ ಗ್ರಾಮ ಪಂಚಾಯಿತಿಯ ಬೆಳ್ಳೆ4 ಕ್ಷೇತ್ರದಲ್ಲಿ  ಕ್ರಿಸ್ತಿನ್‌ ಮೆಂಡೋಸನ್‌ ಆಯ್ಕೆಯಾಗಿ ದ್ದಾರೆ. ಕುರ್ಕಾಲು ಗ್ರಾಮ ಪಂಚಾಯಿ ತಿಯ ಕುರ್ಕಾಲು2 ಕ್ಷೇತ್ರದಲ್ಲಿ ಭುವನೇಶ್‌ ಎಲ್‌ ಪೂಜಾರಿ, ಸುನಂದಾ, ಕುರ್ಕಾಲು3 ಕ್ಷೇತ್ರದಲ್ಲಿ ದಿನಕರ ಶೆಟ್ಟಿ, ಶೋಭಾ ಸಾಲಿಯಾನ, 45ನೇ ಶಿರ್ವ ಗ್ರಾಮ ಪಂಚಾಯಿತಿಯ ಶಿರ್ವ9 ಕ್ಷೇತ್ರದಲ್ಲಿ ಅಮೀರ್‌ ಬ್ಯಾರಿ, ಶಿರ್ವ12ನೇ ಕ್ಷೇತ್ರದಲ್ಲಿ ಸೇರ್ವಿನ್‌ ಮಿನೇಜಸ್‌, ಆನಂದ ಮುಬಾರಿ ಆಯ್ಕೆಯಾಗಿದ್ದಾರೆ.

ಕಟಪಾಡಿ ಗ್ರಾಮ ಪಂಚಾಯಿತಿಯ ಮೂಡುಬೆಟ್ಟು3 ಕ್ಷೇತ್ರದಲ್ಲಿ ಲತಾ ಶೇರಿಗಾರ್ತಿ, ಯನಗುಡ್ಡೆ3 ಕ್ಷೇತ್ರದಲ್ಲಿ  ಗುಲಾಬಿ, ಬೆಳಪು ಗ್ರಾಮ ಪಂಚಾ ಯಿತಿಯ ಬೆಳಪು3 ಕ್ಷೇತ್ರದಲ್ಲಿ ಅನಿತಾ ಕೊರತಿ, ಎಳ್ಳೂರು ಗ್ರಾಮ ಪಂಚಾಯಿ ತಿಯ ಎಳ್ಳೂರು3 ಕ್ಷೇತ್ರದಲ್ಲಿ ರವಿರಾಜ, ಪಲಿಮಾರು ಗ್ರಾಮ ಪಂಚಾಯಿತಿಯ ನಂದಿಕೂರು 1 ಕ್ಷೇತ್ರದಲ್ಲಿ ಸೌಮ್ಯಲತಾ ಶೆಟ್ಟಿ, ಪಲಿಮಾರು 2 ಕ್ಷೇತ್ರದಲ್ಲಿ  ಶಿವರಾಮ, ಪಡುಬಿದ್ರಿ ಗ್ರಾಮ ಪಂಚಾ ಯಿತಿಯ ಪಾದೇಬೆಟ್ಟು1 ಕ್ಷೇತ್ರದಲ್ಲಿ  ಚುಮ್ಮಿ, ಹೆಜಮಾಡಿ ಗ್ರಾಮ ಪಂಚಾಯಿ ತಿಯ ಹೆಜಮಾಡಿ5 ಕ್ಷೇತ್ರದಲ್ಲಿ ಸಂಪಾ ಆಯ್ಕೆಯಾಗಿದ್ದಾರೆ ಎಂದು ಉಡುಪಿ ತಹಶೀಲ್ದಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚುನಾವಣೆ ಇಲ್ಲ, ಅವಿರೋಧವೇ ಎಲ್ಲ...
ಬ್ರಹ್ಮಾವರ: ಎಲ್ಲೆಡೆ ಗ್ರಾಮ ಪಂಚಾಯಿತಿ ಅಬ್ಬರದ ಪ್ರಚಾರ ಆಗುತ್ತಿದ್ದರೆ, ಕೊಕ್ಕರ್ಣೆ ಗ್ರಾಮ ಪಂಚಾಯಿತಿಯಲ್ಲಿ  21 ಸದಸ್ಯರ ಆಯ್ಕೆ ಅವಿರೋಧವಾಗಿ ಆಗಿದೆ. ಹೀಗಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚುನಾವಣೆಯ ಅಬ್ಬರ ವಾಗಲಿ, ಪ್ರಚಾರದ ಕಿರುಚಾಟವಾಗಲಿ ಇಲ್ಲವಾಗಿದೆ.  ಕೊಕ್ಕರ್ಣೆ ಪಂಚಾಯಿತಿ ಪೆಜ ಮಂಗೂರು ಮತ್ತು ಕುದಿ ಗ್ರಾಮವನ್ನೊಳ ಗೊಂಡು 8ಬೂತ್‌ಗಳಲ್ಲಿ  21 ಸದಸ್ಯರ ಆಯ್ಕೆಗೆ ಇದೇ 29ರಂದು ಚುನಾವಣೆ ನಡೆಯಬೇಕಿತ್ತು. ಆದರೆ ಎಲ್ಲ ಸ್ಥಾನ ಗಳಿಗೂ ಅವಿರೋಧವಾಗಿ ಆಯ್ಕೆ ನಡೆ ದಿರುವುದರಿಂದ 29 ರಂದು ಯಾವುದೇ ರೀತಿಯ ಮತದಾನದ ಪ್ರಕ್ರಿಯೆ ನಡೆಯುತ್ತಿಲ್ಲ.

ಆಯ್ಕೆಗೊಂಡ ಸದಸ್ಯರದಲ್ಲಿ 11 ಕಾಂಗ್ರೆಸ್ ಮತ್ತು 10 ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ.  ಅವರಲ್ಲಿ 11 ಸದಸ್ಯರು ಮಹಿಳೆಯರು ಆಯ್ಕೆಯಾಗಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಕಾರ್ಯಕ್ಕಾಗಿ ಎಲ್ಲರೂ ಒಂದಾಗಿ  ಅವಿರೋಧವಾಗಿ ಆಯ್ಕೆಗೊಂಡ 21ಸದಸ್ಯರಲ್ಲಿ 9 ಹಳೆಯ ಸದಸ್ಯರ ಜೊತೆಗೆ 12 ಮಂದಿ ಯುವ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿ ರುವುದು ಇಲ್ಲಿಯ ವಿಶೇಷ. ಇನ್ನೊಂದೆಡೆ ಯಾವೊಂದು ಖರ್ಚಿ ಲ್ಲದೇ, ಬಿಸಿಲಿನಲ್ಲಿ ಪ್ರಚಾರಕ್ಕೆ ಹೋಗುವ ಸಮಸ್ಯೆ ಇಲ್ಲದೇ ಅಭಿವೃದ್ಧಿಯ ನಾಮ ಮಂತ್ರದೊಂದಿಗೆ ಸದಸ್ಯರು ಅಧ್ಯಕ್ಷರ ಆಯ್ಕೆಯನ್ನೂ ಇದೇ ರೀತಿ ಮಾಡುವ ಯೋಚನೆಯಲ್ಲಿದ್ದಾರೆ.

ಉರಿಬಿಸಿಲಿನಲ್ಲಿ ಮತದಾನ ಮಾಡಲು ಬರಬೇಕಾಗಿಲ್ಲ. ಅಭ್ಯರ್ಥಿ ಗಳಿಗೂ ಸುಡು ಬೇಸಿಗೆಯಲ್ಲಿ ಮತದಾನ ಪ್ರಚಾರ, ಮತದಾರರ ಬೈಗುಳ, ಬೆಂಬಲಿ ಗರಿಗೆ ಖರ್ಚು, ಯಾವುದೇ ಕಾರಣಕ್ಕೂ ರಾಜಕೀಯ ಪ್ರಚಾರ ನಡೆಸಬಾರದು, ಚುನಾವಣೆ ಆಯೋಗದ ಕಟ್ಟಾಜ್ಞೆ ವಿಧಿಸಿರುವುದು ಮುಂತಾದ ಸಮಸ್ಯೆ ಯಿಂದ ಮುಕ್ತಿ ದೊರೆತಿದೆ. ಇದರಿಂದ ಮತದಾನಕ್ಕೆ ತಗಲುವ ಖರ್ಚುವೆಚ್ಚ ಕೂಡ ಉಳಿದಂತಾಗಿದೆ ಎನ್ನುವುದು ಆಯ್ಕೆಗೊಂಡ ಸದಸ್ಯರ ಮಾತು. ಪಕ್ಷಾತೀತವಾಗಿ ಅವಿರೋಧ ಆಯ್ಕೆ ಯಾಗಿರುವುದು ಸಂತಸ ತಂದಿದೆ.

ಇದು ಕೊಕ್ಕರ್ಣೆಯಲ್ಲಿ ಪ್ರಥಮ ಬಾರಿ ಯಾಗಿದ್ದು, ಪಂಚಾಯಿಯ ಅಭಿವೃದ್ಧಿಗೆ ಪೂರಕ ವಾಗಿದೆ.  ಗ್ರಾಮಸ್ಥರ ಮತ್ತು ಕಾರ್ಯ ಕರ್ತರ ಅಭಿಪ್ರಾಯ ಸಂಗ್ರಹಿಸಿ ಅವಿರೋಧ ಆಯ್ಕೆ ಮಾಡಿದ್ದೇವೆ. ಹಳೆಯ ಸದಸ್ಯರೊಂದಿಗೆ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಿದ್ದು ಕೊಕ್ಕರ್ಣೆ ಪಂಚಾಯಿತಿಯು ಇತರರಿಗೆ ಮಾದರಿ ಯಾಗುವಂತೆ ಹೋರಾಡುತ್ತೇವೆ ಅವಿರೋಧವಾಗಿ ಆಯ್ಕೆಗೊಂಡ ಸದಸ್ಯ ಕೊಕ್ಕರ್ಣೆಯ ರಘುವೀರ ಕಿಣಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT